ನಾಳೆ ಮುಂಡರಗಿಯಲ್ಲಿ ರಕ್ತದಾನ ಶಿಬಿರ

| Published : Jun 30 2024, 12:46 AM IST

ಸಾರಾಂಶ

ಮುಂಡರಗಿ ಪಟ್ಟಣದ ಕೆಇಬಿ ಹತ್ತಿರದ ಶಿವು ಲಕ್ಕಿ ಮೆನ್ಸ್ ಪಾರ್ಲರ್ ಆವರಣದಲ್ಲಿ ಜು. 1ರಂದು ಬೆಳಗ್ಗೆ 10.30ಕ್ಕೆ ರಕ್ತದಾನ ಶಿಬಿರ, ರಕ್ತದ ಗುಂಪು ತಿಳಿಸುವಿಕೆ ಹಾಗೂ ಲಕ್ಕಿ ಬ್ಲಡ್ ಹೆಲ್ಪಿಂಗ್ ಫೌಂಡೇಶನ್ ಉದ್ಘಾಟನೆ ಜರುಗಲಿದೆ.

ಮುಂಡರಗಿ: ಕೆಇಬಿ ಹತ್ತಿರದ ಶಿವು ಲಕ್ಕಿ ಮೆನ್ಸ್ ಪಾರ್ಲರ್ ಆವರಣದಲ್ಲಿ ಜು. 1ರಂದು ಬೆಳಗ್ಗೆ 10.30ಕ್ಕೆ ರಕ್ತದಾನ ಶಿಬಿರ, ರಕ್ತದ ಗುಂಪು ತಿಳಿಸುವಿಕೆ ಹಾಗೂ ಲಕ್ಕಿ ಬ್ಲಡ್ ಹೆಲ್ಪಿಂಗ್ ಫೌಂಡೇಶನ್ ಉದ್ಘಾಟನೆ ಜರುಗಲಿದೆ ಎಂದು ರತ್ನಾಕರ ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಶಿವು ವಾಲಿಕಾರ ಹೇಳಿದರು.

ಶುಕ್ರವಾರ ಮುಂಡರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ರಕ್ತದಾನ ದಿನಾಚರಣೆ, ಪತ್ರಿಕಾ ದಿನಾಚರಣೆ, ವೈದ್ಯ ದಿನಾಚರಣೆ ಹಾಗೂ ಯೋಗ ದಿನಾಚರಣೆಯ ಅಂಗವಾಗಿ ಗ್ರಾಪಂ ಮಾಜಿ ಸದಸ್ಯ ದೇವು ಹಡಪದ ಅಭಿಮಾನಿ ಬಳಗದ ವತಿಯಿಂದ ಶಿವು ಲಕ್ಕಿ ಮೆನ್ಸ್ ಪಾರ್ಲರ್ ಇದರ 15ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಗದಗದ ಬಸವೇಶ್ವರ ರಕ್ತ ಕೇಂದ್ರ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ, ಜ. ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ತಂಗಡಗಿ ಅಪ್ಪಣ್ಣ ಪೀಠದ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ ಸಾನ್ನಿಧ್ಯವಹಿಸುವರು. ಶಾಸಕ ಡಾ. ಚಂದ್ರು ಲಮಾಣಿ ರಕ್ತದಾನ ಶಿಬಿರ ಉದ್ಘಾಟಿಸಲಿದ್ದಾರೆ. ಬಿಜೆಪಿ ಯುವ ಮುಖಂಡ ಭರತ್ ಬೊಮ್ಮಾಯಿ ಉಪಸ್ಥಿತರಿರುವರು.

ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುಟ್ಟರಾಜ ಸೇವಾ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಮುಖೆ ಅಧ್ಯಕ್ಷತೆ ವಹಿಸುವರು. ತಾಲೂಕು ಹಡಪದ ಸಮಾಜದ ಅಧ್ಯಕ್ಷ ವೀರಣ್ಣ ಹಡಪದ ಸಸಿಗಳನ್ನು ವಿತರಿಸಲಿದ್ದಾರೆ. ಪಾರ್ವತೆವ್ವ ಹಡಪದ, ಸುರೇಶ ಹಡಪದ, ಶಿವಾನಂದ ಹಡಪದ ಉಪಸ್ಥಿತರಿರುವರು. ಡಾ. ಲಕ್ಷ್ಮಣ ಪೂಜಾರ, ಮುಂಜುನಾಥ ಅಳವಂಡಿ ಉಪನ್ಯಾಸ ನೀಡುವರು. ಅತಿಥಿಗಳಾಗಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಚನ್ನವೀರಸ್ವಾಮಿ ಹಿರೇಮಠ, ವೈ.ಎನ್. ಗೌಡರ್, ಕರಬಸಪ್ಪ ಹಂಚಿನಾಳ, ಶೋಭಾ ಮೇಟಿ, ಹೇಮಗಿರೀಶ ಹಾವಿನಾಳ, ಶಿವಕುಮಾರಗೌಡ ಪಾಟೀಲ, ರವೀಂದ್ರ ಉಪ್ಪಿನಬೆಟಗೇರಿ, ವೀರಯ್ಯಸ್ವಾಮಿ ಜಿ. ಡಾ. ನಿಂಗು ಸೊಲಗಿ ಆಗಮಿಸಲಿದ್ದಾರಾರೆ ಎಂದರು.

ತಾಲೂಕು ಹಡಪದ ಸಮಾಜದ ಅಧ್ಯಕ್ಷ ಈರಣ್ಣ ಹಡಪದ, ಪುಟ್ಟರಾಜ ಸೇವಾ ಸಮಿತಿ ಅಧ್ಯಕ್ಷ ನಾಗರಾಜ ಮುಖೆ ಕಾರ್ಯಕ್ರಮದ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮೌನೇಶ್ವರ ಬಡಿಗೇರ, ಶರಣಪ್ಪ ಹೊಸಮನಿ, ಸುರೇಶ ಹಡಪದ, ರಾಮಣ್ಣ ತಿಪ್ಪಣ್ಣವರ, ದೇವು ಹಡಪದ, ಪ್ರಮೋದ ನಾಡಗೌಡ್ರ ಉಪಸ್ಥಿತರಿದ್ದರು.