ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಜ.21ರಂದು ಸಮಾನ ಮನಸ್ಕರ ಬಳಗದಿಂದ ಸ್ವಾಮಿ ವಿವೇಕಾನಂದರ ಹಾಗೂ ನೇತಾಜಿ ಸುಭಾಚ್‌ಚಂದ್ರ ಬೋಸ್ ಜಯಂತ್ಯುತ್ಸವ, ರಾಷ್ಟ್ರೀಯ ಯುವಕರ ದಿನ ಹಿನ್ನೆಲೆ 3ನೇ ಬಾರಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ಬಿಸ್ತುವಳ್ಳಿ ಬಾಬು ಜಗಳೂರಲ್ಲಿ ಹೇಳಿದ್ದಾರೆ.

- ಸ್ವಾಮಿ ವಿವೇಕಾನಂದರ, ನೇತಾಜಿ ಸುಭಾಚ್‌ಚಂದ್ರ ಬೋಸ್ ಜಯಂತ್ಯುತ್ಸವ- - -

ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಜ.21ರಂದು ಸಮಾನ ಮನಸ್ಕರ ಬಳಗದಿಂದ ಸ್ವಾಮಿ ವಿವೇಕಾನಂದರ ಹಾಗೂ ನೇತಾಜಿ ಸುಭಾಚ್‌ಚಂದ್ರ ಬೋಸ್ ಜಯಂತ್ಯುತ್ಸವ, ರಾಷ್ಟ್ರೀಯ ಯುವಕರ ದಿನ ಹಿನ್ನೆಲೆ 3ನೇ ಬಾರಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ಬಿಸ್ತುವಳ್ಳಿ ಬಾಬು ಹೇಳಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಕ್ತದಾನ ಶಿಬಿರವು ಗರ್ಭೀಣಿ ಮಹಿಳೆಯರು, ಅಪಘಾತಕ್ಕೆ ಒಳಗಾದವರು, ಅನಾರೋಗ್ಯಕ್ಕೆ ತುತ್ತಾದವರ ಚಿಕಿತ್ಸೆಗೆ ಅನುಕೂಲವಾಗಲಿದೆ. ಈ ಉದ್ದೇಶದಿಂದ ಶಿಬಿರ ನಿರಂತರವಾಗಿ ನಡೆಯಲಿದೆ. ಮೊದಲ ವರ್ಷ 78, ದ್ವಿತೀಯ ವರ್ಷ 101 ಯುವಕರು ರಕ್ತದಾನ ಮಾಡಿದ್ದರು. ಈ ಸಲ 150ಕ್ಕೂ ಹೆಚ್ಚು ಯುವಕರು ರಕ್ತದಾನಕ್ಕೆ ಮುಂದೆ ಬಂದಿರುವುದು ಶ್ಲಾಘನೀಯ ಎಂದರು.

ಬಳಗದ ಪದಾಧಿಕಾರಿ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಧನ್ಯಕುಮಾರ್ ಮಾತನಾಡಿ, ಶಿಬಿರದ ದಿವ್ಯ ಸಾನ್ನಿಧ್ಯವನ್ನು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ ವಹಿಸಲಿದ್ದಾರೆ. ಶಾಸಕ ಬಿ.ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಾನ ಮನಸ್ಕರ ಬಳಗ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ ರಾಜೇಶ್, ಟಿ.ಗುರುಸಿದ್ದನ ಗೌಡ, ಕೆಪಿಸಿಸಿ ಎಸ್‌ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ದಂಡಿನ, ಜಿಲ್ಲಾ ಆರೋಗ್ಯಾಧಿಕಾರಿ ಷಣ್ಮುಖಪ್ಪ, ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಪೊಲೀಸ್ ನಿರೀಕ್ಷಕ ಸಿದ್ರಾಮಯ್ಯ, ತಾಲೂಕು ಆರೋಗ್ಯಾಧಿಕಾರಿ ವಿಶ್ವಾನಾಥ್ ಭಾಗವಹಿಸಲಿದ್ದಾರೆ ಎಂದರು.

ಎಚ್.ಎಂ.ಹೊಳೆ ಮಹಾಲಿಂಗಪ್ಪ ಮಾತನಾಡಿ, ಸಾಮಾಜಿಕ ಕ್ಷೇತ್ರದಿಂದ ಎಂ.ಡಿ. ಕೀರ್ತೀಕುಮಾರ್, ಹನುಮಂತಾಪುರ ಬರ್ಕತ್ ಅಲಿ, ಎಚ್.ಎಂ.ಹೊಳೆ ಮಹಾಲಿಂಗಪ್ಪ, ಪತ್ರಿಕಾರಂಗದಿಂದ ವಿಜಯವಾಣಿ ವರದಿಗಾರ ಲೋಕೇಶ್ ಎಂ.ಐಹೊಳೆ, ಹೆಚ್ಚುವರಿ ರಕ್ತದಾನಿ ಶಿಕ್ಷಕ ಮಹಮ್ಮದ್ ಷರೀಫ್‌, ಕ್ರೀಡಾ ಕ್ಷೇತ್ರದಲ್ಲಿ ದೈಹಿಕ ಶಿಕ್ಷಕ ಕರಿಬಸಪ್ಪ, ಸರ್ಕಾರಿ ಸೇವೆ ಆರ್‌ಎಫ್‌ಒ ನಿತಿನ್ ಬಲ್ಲವರು, ವಿಶೇಷಚೇತನರ ಸೇವೆ ಭರಮಸಮುದ್ರ ರಂಗಸ್ವಾಮಿ, ದೇಶ ಸೇವೆಗಾಗಿ ಮೆದಕೆರೆನಹಳ್ಳಿ ವಿಜಯ್ ಕುಮಾರ್, ಸಾಹಿತ್ಯ ಸೇವೆಗಾಗಿ ಲಕ್ಕಂಪುರ ರಾಜು, ರೈತಪರ ಹೋರಾಟಕ್ಕಾಗಿ ಬೈರನಾಯಕನಹಳ್ಳಿ ರಾಜು, ಭರಮಸಮುದ್ರ ಕುಮಾರ್, ಕ್ರೀಡಾ ಕ್ಷೇತ್ರದಲ್ಲಿ ಎಸ್.ಮಾನ್ಯ, ಸಮಾಜ ಸೇವೆ ಜಗಳೂರು ಎಂ.ಮಾನಸ ಅವರಿಗೆ ಸನ್ಮಾನಿಸಲಾಗುವುದು ಎಂದರು.

ಬಳಗದ ಪದಾಧಿಕಾರಿಗಳಾದ ಮಲೆಮಾಚಿಕೆರೆ ಸತೀಶ್, ಎಚ್.ಎಂ.ಹೊಳೆ ಮಹಾಲಿಂಗಪ್ಪ, ಅಸಗೋಡು ಮರುಳಸಿದ್ದಪ್ಪ, ಧನ್ಯಕುಮಾರ್ ಉಚ್ಚಂಗಿಪುರ ಯು.ಸಿ.ರವಿ, ರೈತ ಸಂಘದ ಅಧ್ಯಕ್ಷ ಕುಮಾರ್ ಮತ್ತಿತರರಿದ್ದರು.

- - -

-20ಜೆ.ಜಿ.ಎಲ್.1; ಜಗಳೂರು ಪಟ್ಟಣದ ಪತ್ರಕರ್ತರ ಭವನದಲ್ಲಿ ಸಮಾನ ಮನಸ್ಕರ ಬಳಗ ಅಧ್ಯಕ್ಷ ಬಿಸ್ತುವಳ್ಳಿ ಬಾಬು ರಕ್ತದಾನ ಶಿಬಿರ ಕುರಿತು ಮಾಹಿತಿ ನೀಡಿದರು.