ಸಾರಾಂಶ
ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಮಾತನಾಡಿ, ಮಾನವರಾದ ನಾವು ಆರೋಗ್ಯವೇ ಭಾಗ್ಯವೆಂದು ತಿಳಿದು ನಡೆಯಬೇಕು. ಅಪಘಾತದಂತಹ ಸಂದರ್ಭದಲ್ಲಿ ರಕ್ತದಾನ ಮಾಡುವುದರಿಂದ ಹಲವರ ಪ್ರಾಣ ಉಳಿಸಬಹುದು ಎಂದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಭೂದಾನ, ನೇತ್ರದಾನ, ದೇಹದಾನ, ಅಂಗಾಂಗ ದಾನ, ಧನ ದಾನಗಳ ಜೊತೆ ರಕ್ತದಾನ ಅಗ್ರ ಸ್ಥಾನ ಪಡೆದಿದೆ ಎಂದು ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಏಡ್ಸ್, ಟಿ.ಬಿ. ರೋಗ ನಿಯಂತ್ರಣ ಮತ್ತು ರಕ್ತ ಸಂಗ್ರಹ ಘಟಕಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಹೇಳಿದರು.ಶುಕ್ರವಾರ ಶ್ರೀ ಖಾಸ್ಗತೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಏರ್ಪಡಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೯ ಬ್ಲಡ್ ಬ್ಯಾಂಕು ಇವೆ. ರಕ್ತದಾನದಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ತಾಳಿಕೋಟೆ ಜನತೆ ಆದರ್ಶ ಪ್ರೀಯರಾಗಿದ್ದಾರೆ. ರಕ್ತದಾನ ಮಾಡುವುದರಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದರು. ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಮಾತನಾಡಿ, ಮಾನವರಾದ ನಾವು ಆರೋಗ್ಯವೇ ಭಾಗ್ಯವೆಂದು ತಿಳಿದು ನಡೆಯಬೇಕು. ಅಪಘಾತದಂತಹ ಸಂದರ್ಭದಲ್ಲಿ ರಕ್ತದಾನ ಮಾಡುವುದರಿಂದ ಹಲವರ ಪ್ರಾಣ ಉಳಿಸಬಹುದು ಎಂದರು.
ವಿ.ವಿ.ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ(ಹಂಪಿಮುತ್ಯಾ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಎನ್.ಹಿಪ್ಪರಗಿ, ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ, ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ನಮೀತಾ ಹೊನ್ನುಟಗಿ, ವಿ.ವಿ.ಸಂಘದ ನಿರ್ದೇಶಕ ಎಂ.ಆರ್.ಕತ್ತಿ, ಸಿ. ಆರ್. ಕತ್ತಿ, ಕಾಲೇಜ್ ಆಡಳಿತ ಮಂಡಳಿಯ ಸದಸ್ಯ ಸಿದ್ದಲಿಂಗ ಸರೂರ, ಪ್ರಭುಗೌಡ ಮದರಕಲ್ಲ, ಪ್ರಾಚಾರ್ಯ ಆರ್.ವಿ.ಜಾಲವಾದಿ ಮೊದಲಾದವರು ಇದ್ದರು. ಪ್ರೋ.ರಮೇಶ ಜಾಧವ ಸ್ವಾಗತಿಸಿದರು. ತೇಜಸ್ವಿನಿ ಡಿಸಲೆ ನಿರೂಪಿಸಿದರು. ಡಾ.ಆರ್.ವ್ಹಿ.ಮಿಸ್ಕನ್ ವಂದಿಸಿದರು.