ಸಾರಾಂಶ
ರಕ್ತದಾನ ಶಿಬಿರವು ಹಾಸನದ ಅನೇಕ ಕಾಲೇಜುಗಳಲ್ಲಿ ಹಾಗೂ ನಮ್ಮ ತೇರಾಪಂಥ್ ಸಭಾಭವನದಲ್ಲಿ ಯಶಸ್ವಿಯಾಗಿ ನೆರವೇರಿತು. ಒಟ್ಟಾಗಿ 13 ರಕ್ತದಾನ ಶಿಬಿರಗಳು ಸೇರಿ 870 ರಕ್ತ-ಚೀಲವನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮಕ್ಕೆ ಸಂಸದರಾದ ಶ್ರೇಯಸ್ ಎಂ. ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್ , ಜಿಲ್ಲಾಧಿಕಾರಿಗಳಾದ ಕೆ.ಎಸ್. ಲತಾ ಕುಮಾರಿ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಪುನೀತ್ ಗೌಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕನ್ನಡಪ್ರಭ ವಾರ್ತೆ ಹಾಸನಶ್ರೀ ಜೈನ್ ಶ್ವೇತಾಂಬರ್ ತೇರಾಪಂಥ್‌ನ 11ನೇ ಆಚಾರ್ಯರಾದ ಶ್ರೀ ಮಹಾಶ್ರಮಣ್ ಜೀರವರ ಆಶೀರ್ವಾದಗಳೊಂದಿಗೆ ಅಖಿಲ ಭಾರತೀಯ ತೇರಾಪಂಥ್ ಯುವಕ ಪರಿಷದ್ ನಿರ್ದೇಶನದಂತೆ ತೇರಾಪಂಥ್ ಯುವಕ್ ಪರಿಷದ್ ಹಾಸನ ವತಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ತೇರಾಪಂಥ್ ಯುವಕ್ ಪರಿಷದ್ ಸ್ಥಾಪನಾ ದಿನದ ಅಂಗವಾಗಿ ಆಯೋಜಿಸಲಾಯಿತು.ಈ ರಕ್ತದಾನ ಶಿಬಿರವು ಹಾಸನದ ಅನೇಕ ಕಾಲೇಜುಗಳಲ್ಲಿ ಹಾಗೂ ನಮ್ಮ ತೇರಾಪಂಥ್ ಸಭಾಭವನದಲ್ಲಿ ಯಶಸ್ವಿಯಾಗಿ ನೆರವೇರಿತು. ಒಟ್ಟಾಗಿ 13 ರಕ್ತದಾನ ಶಿಬಿರಗಳು ಸೇರಿ 870 ರಕ್ತ-ಚೀಲವನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮಕ್ಕೆ ಸಂಸದರಾದ ಶ್ರೇಯಸ್ ಎಂ. ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್ , ಜಿಲ್ಲಾಧಿಕಾರಿಗಳಾದ ಕೆ.ಎಸ್. ಲತಾ ಕುಮಾರಿ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಪುನೀತ್ ಗೌಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.ತೇರಾಪಂಥ್ ಯುವಕ್ ಪರಿಷದ್ ಅಧ್ಯಕ್ಷರಾದ ನಿತೇಶ್ ಸುರಾಣ ಹಾಗು ಮಂತ್ರಿಗಳಾದ ಮನೀಷ್ ತಾತೇಡ್ ಮತ್ತು ಎಲ್ಲಾ ಸದಸ್ಯರು ಸಹಕಾರ ನೀಡಿದರು.