ರಕ್ತದಾನ ಅತ್ಯಂತ ಪವಿತ್ರ, ಪುಣ್ಯ ಕಾರ್ಯ: ಡಾ. ಬಸವರಾಜ್ ತಳವಾರ

| Published : Apr 12 2025, 12:50 AM IST

ಸಾರಾಂಶ

ಪ್ರಾಂಶುಪಾಲ ಡಾ. ಎ.ಸಿ. ವಾಲಿ ಮಾತನಾಡಿ, ದುಡ್ಡು ಮತ್ತು ರಕ್ತ ಎರಡೂ ನಿಲ್ಲಬಾರದು. ಅವೆರಡು ನಿರಂತರ ಚಲಾವಣೆಯಲ್ಲಿ ಇರಬೇಕು. ದುಡ್ಡು ನಿಂತರೆ ಆದಾಯ ತೆರಿಗೆಯವರು ಬರುತ್ತಾರೆ. ರಕ್ತ ನಿಂತರೆ ಆ್ಯಂಬುಲೆನ್ಸ್‌ ಬರುತ್ತದೆ ಎಂದು ತಿಳಿಹಾಸ್ಯದ ಮೂಲಕ ರಕ್ತದಾನ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

ಶಿಗ್ಗಾಂವಿ: ರಕ್ತದಾನ ಅತ್ಯಂತ ಪವಿತ್ರವಾದುದು ಮತ್ತು ಇಂದಿನ ಅಗತ್ಯ. ರಕ್ತದಾನದಿಂದ ಮನುಷ್ಯನಿಗೆ ಧನ್ಯತಾ ಭಾವ ಬರುತ್ತದೆ. ಇನ್ನೊಂದು ಜೀವಕ್ಕೆ ಆಸರೆಯಾಗುವುದರಿಂದ ಪುಣ್ಯವೂ ಲಭಿಸುತ್ತದೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯಧಿಕಾರಿ ಡಾ. ಬಸವರಾಜ್ ತಳವಾರ ತಿಳಿಸಿದರು.ಪಟ್ಟಣದ ಅಂಕಲಕೋಟಿ ಗೌರಮ್ಮ ಬ. ಅಂಕಲಕೋಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ರೆಡ್‌ಕ್ರಾಸ್ ಹಾಗೂ ಎನ್‌ಎಸ್‌ಎಸ್ ಘಟಕಗಳ ಅಡಿಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಎ.ಸಿ. ವಾಲಿ ಮಾತನಾಡಿ, ದುಡ್ಡು ಮತ್ತು ರಕ್ತ ಎರಡೂ ನಿಲ್ಲಬಾರದು. ಅವೆರಡು ನಿರಂತರ ಚಲಾವಣೆಯಲ್ಲಿ ಇರಬೇಕು. ದುಡ್ಡು ನಿಂತರೆ ಆದಾಯ ತೆರಿಗೆಯವರು ಬರುತ್ತಾರೆ. ರಕ್ತ ನಿಂತರೆ ಆ್ಯಂಬುಲೆನ್ಸ್‌ ಬರುತ್ತದೆ ಎಂದು ತಿಳಿಹಾಸ್ಯದ ಮೂಲಕ ರಕ್ತದಾನ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ. ಅಂಬಳಿ ಪಿಳ್ಳೆ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರು ಮತ್ತು ಎನ್‌ಎಸ್‌ಎಸ್ ಘಟಕ ೧ರ ಅಧಿಕಾರಿ ಡಾ. ಆನಂದ ಇಂದೂರ ಮತ್ತು ಘಟಕ ೨ರ ವಿನಯ್ ಕುಲಕರ್ಣಿ ಹಾಗೂ ಇಮ್ತಿಯಾಜ ಖಾನ್ ಮತ್ತು ಡಾ. ಶೈಲಜಾ ಹುದ್ದಾರ, ರೆಡ್‌ಕ್ರಾಸ್ ಘಟಕದ ಆರ್.ಪಿ. ನದಾಫ್ ಉಪಸ್ಥಿತರಿದ್ದರು. ಡಾ. ಎ.ಎನ್. ರಾಶಿನಕರ್, ಡಾ. ಮುತ್ತು ಸುಣಗಾರ, ಶುಭಾ ಹಿರೇಮಠ್, ಡಿ.ಎಸ್. ಭಟ್, ಡಿ.ಎಸ್. ಸೊಗಲದ ಮುಂತಾದವರು ಉಪಸ್ಥಿತರಿದ್ದರು. ಈ ವೇಳೆ ೪೬ ಯುನಿಟ್ ರಕ್ತ ಸಂಗ್ರಹಿಸಲಾಯಿತು. ಮಕ್ಕಳ ಶಾಲಾ ದಾಖಲಾತಿ ಆಂದೋಲನಕ್ಕೆ ಚಾಲನೆ

ಹಾನಗಲ್ಲ: ಪ್ರಾಥಮಿಕ ಶಾಲೆಗೆ ಹೊಸ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡುವ ಮೂಲಕ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಶಿಕ್ಷಕರು ಮಕ್ಕಳ ದಾಖಲಾತಿಗೆ ಮುಂದಾದರು.

ತಾಲೂಕಿನ ಅರಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಗ್ರಾಮದ ಮನೆ ಮನೆಗಳಿಗೆ ತೆರಳಿ ಮಕ್ಕಳ ದಾಖಲಾತಿಗೆ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಸಿದ್ದು ಗೌರಣ್ಣನವರ, ಸರ್ಕಾರ ಮಕ್ಕಳ ಕಲಿಕೆಗಾಗಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಪಠ್ಯ, ಬಿಸಿಯೂಟ, ಸಮವಸ್ತ್ರ, ವಿದ್ಯಾರ್ಥಿವೇತನ, ಅತ್ಯುತ್ತಮ ಶಿಕ್ಷಕರು ಸೇರಿದಂತೆ ಹಲವು ಯೋಜನೆಗಳು ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುವ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಗಿರೀಶ ತವರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲವನ್ನೂ ಶಿಕ್ಷಕರೇ ನಿರ್ವಹಿಸಲು ಸಾಧ್ಯವಿಲ್ಲ. ಸಮುದಾಯದ ಸಹಭಾಗಿತ್ವ ಅತ್ಯಂತ ಮುಖ್ಯ. ನಮ್ಮ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹೋಗುವ ಹಾಗೂ ಉತ್ತಮ ಶಿಕ್ಷಣ ಪಡೆಯುವ ಜವಾಬ್ದಾರಿಯನ್ನು ಪಾಲಕರೂ ವಹಿಸಬೇಕು ಎಂದರು.ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರೇಖಾ ಚಿಕ್ಕೇರಿ, ಪ್ರಿಯಾಂಕ ನಿಗಟೆ, ಸುಮಿತ್ರಾ ತುಮರಿಕೊಪ್ಪ, ಯಶೋದಾ ದೊಡ್ಡಗೌಡ್ರ, ಕಾವ್ಯಾ ಲೇಖಿ, ಶೃತಿ ಜಾವೋಜಿ, ನಾಗರಾಜ ಡಂಬಳಪ್ಪನವರ, ದೇವೇಂದ್ರಪ್ಪ ಶಿವಪೂರ, ಶಿವಕುಮಾರ ಬಾರ್ಕಿ, ಪ್ರವೀಣ ತುಮರಿಕೊಪ್ಪ, ಮುಖ್ಯಶಿಕ್ಷಕ ವೈ.ಡಿ. ಹೊಸಮನಿ, ಶಿಕ್ಷಕರಾದ ಸುಭಾಸ ಹೊಸಮನಿ, ಬಿ.ಎನ್. ಕರೆಪ್ಯಾಟಿ, ನಾಗರಾಜ ಪೂಜಾರ, ಗಂಗಮ್ಮ ನಾಗನೂರ, ರಾಜೇಶ್ವರಿ, ಶಿಲ್ಪಾ ನಂದಿಕೋಲ, ಸುಷ್ಮಿತಾ ಹೀರೂರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.