ರಕ್ತದಾನ ಅತ್ಯಂತ ಶ್ರೇಷ್ಠ ದಾನ: ಶಾಸಕ ರಾಘವೇಂದ್ರ ಹಿಟ್ನಾಳ

| Published : Feb 12 2024, 01:36 AM IST / Updated: Feb 12 2024, 02:30 PM IST

ಸಾರಾಂಶ

ಜಿಲ್ಲಾ ಕೇಂದ್ರದಲ್ಲಿ ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಆರಂಭವಾದ ಮೇಲೆ ಆರೋಗ್ಯ ಸೇವೆ ಉತ್ತಮವಾಗಿ ಸ್ಥಳೀಯವಾಗಿಯೇ ದೊರೆಯುವಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಸುಧಾರಣೆ ಮಾಡುವ ದಿಸೆಯಲ್ಲಿ ಪ್ರಯತ್ನ ಮಾಡಲಾಗುವುದು.

ಕೊಪ್ಪಳ: ರಕ್ತದಾನ ಅತ್ಯಂತ ಶ್ರೇಷ್ಠದಾನವಾಗಿದೆ. ಇಂಥ ಶಿಬಿರ ಏರ್ಪಡಿಸುವ ಮೂಲಕ ಅಗತ್ಯವಿದ್ದವರಿಗೆ ರಕ್ತ ಸುಲಭವಾಗಿ ದೊರೆಯುವಂತೆ ಮಾಡುವ ಕಾರ್ಯ ಸಾಂಘವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಇಎಂಡಬ್ಲ್ಯೂಐ ಮಾರ್ಕೆಟಿಂಗ್ ಲಿ. ವಾರ್ಷಿಕೋತ್ಸವ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕೊಪ್ಪಳದಲ್ಲಿ ರೆಡ್ ಕ್ರಾಸ್ ಸಂಸ್ಥೆ ತನ್ನದೇ ಸ್ವಂತ ಕಟ್ಟಡ ನಿರ್ಮಿಸುತ್ತಿದ್ದು, ಅಲ್ಲಿ ಚರ್ಮದ ಬ್ಯಾಂಕ್ ಸೇರಿದಂತೆ ಅಂಗಾಂಗಗಳ ಬ್ಯಾಂಕ್ ಸ್ಥಾಪನೆಯ ಗುರಿ ಹಾಕಿಕೊಂಡಿದೆ ಎಂದರು.

ಜಿಲ್ಲಾ ಕೇಂದ್ರದಲ್ಲಿ ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಆರಂಭವಾದ ಮೇಲೆ ಆರೋಗ್ಯ ಸೇವೆ ಉತ್ತಮವಾಗಿ ಸ್ಥಳೀಯವಾಗಿಯೇ ದೊರೆಯುವಂತಾಗಿದೆ. 

ಮುಂದಿನ ದಿನಗಳಲ್ಲಿ ಇನ್ನು ಸುಧಾರಣೆ ಮಾಡುವ ದಿಸೆಯಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.

ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸೋಮರಡ್ಡಿ ಅಳವಂಡಿ, ನಿರ್ದೇಶಕ ಡಾ.ಮಂಜುನಾಥ, ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಶರಣಪ್ಪ ಬಾಚಲಾಪುರ, ಗಾಣಿಗ ಸಮಾಜದ ಗೌರವಾಧ್ಯಕ್ಷ ರುದ್ರಮುನಿ ಗಾಳಿ. 

ಜಿಲ್ಲಾಧ್ಯಕ್ಷ ಬಸವರಾಜ, ಮುಖಂಡರಾದ ತೋಟಪ್ಪ ಕಾಮನೂರು, ಚಾಂದಪಾಶಾ ಕಿಲ್ಲೇದಾರ, ಮಾರ್ಕೆಟಿಂಗ್ ಕಂಪನಿಯ ಜಿಲ್ಲಾ ಸಂಚಾಲಕ ಮುತ್ತಣ್ಣ, ಶಿವಕುಮಾರ, ಸಿಬ್ಬಂದಿ ಇದ್ದರು.