ದಾನಗಳಲ್ಲಿ ರಕ್ತದಾನ ಸರ್ವ ಶ್ರೇಷ್ಠ: ಮಹಾದೇವ ತೇಲಿ

| Published : Jun 23 2024, 02:11 AM IST

ಸಾರಾಂಶ

ರಕ್ತದಾನ ಮಹಾದಾನ, ರಕ್ತದಾನದಿಂದ ಹಲವಾರು ರೋಗಿಗಳ ಜೀವ ಉಳಿಸಬಹುದು. ರಕ್ತದಾನಿಗಳು ರಕ್ತ ಕೊಡುವುದರಿಂದ ಅವರ ದೇಹದಲ್ಲಿ ಮೂರು ತಿಂಗಳ ಒಳಗೆ ಮತ್ತೆ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ, ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ರಕ್ತದಾನ ಸರ್ವಶ್ರೇಷ್ಠ ದಾನವಾಗಿದೆ ಎಂದು ಮಹಾದೇವ ತೇಲಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಕ್ತದಾನ ಮಹಾದಾನ, ರಕ್ತದಾನದಿಂದ ಹಲವಾರು ರೋಗಿಗಳ ಜೀವ ಉಳಿಸಬಹುದು. ರಕ್ತದಾನಿಗಳು ರಕ್ತ ಕೊಡುವುದರಿಂದ ಅವರ ದೇಹದಲ್ಲಿ ಮೂರು ತಿಂಗಳ ಒಳಗೆ ಮತ್ತೆ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ, ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ರಕ್ತದಾನ ಸರ್ವಶ್ರೇಷ್ಠ ದಾನವಾಗಿದೆ ಎಂದು ಮಹಾದೇವ ತೇಲಿ ಹೇಳಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬನಹಟ್ಟಿಯಲ್ಲಿ ಗ್ಲೋಬಲ್ ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಜರುಗಿದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಬಸವರಾಜ ಕೊಕಟನೂರ ಮಾತನಾಡಿ, ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಳವಾಗಬೇಕು. ಇದರಿಂದ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ರೋಗಿಗಳಿಗೆ ಜೀವ ಕೊಟ್ಟಂತಾಗುತ್ತದೆ ಎಂದರು.

ದಂಪತಿಯಿಂದ ರಕ್ತದಾನ : ಮದುವೆ ವಾರ್ಷಿಕೋತ್ಸವ ನಿಮತ್ತ ಪತ್ರಕರ್ತ ಮಲ್ಲಿಕಾರ್ಜುನ ತುಂಗಳ ದಂಪತಿ ೨೭ನೇ ಬಾರಿಗೆ ರಕ್ತದಾನ ಮಾಡಿದರು. ಮಹಾಂತೇಶ ಯಾದವಾಡ, ನೂಲಿನ ಗಿರಣಿ ಅಧ್ಯಕ್ಷ ಶ್ರೀಶೈಲ ಬೀಳಗಿ, ವ್ಯವಸ್ಥಾಪಕ ನಿರ್ದೇಶಕ ಕೆ. ಪ್ರಭಾಕರ, ಸುರೇಶ ಹಜಾರೆ, ಡಾ.ಸಿದ್ರಾಮ ಖಾನಾಪುರ, ಮಹೇಶ ಚಿನಗುಂಡಿ, ಭೀಮಶಿ ಪೂಜಾರಿ, ಮಹಾಂತೇಶ ಯಾದವಾಡ, ಗಜಾನನ ಸಿಂಗನ್ ಸೇರಿದಂತೆ ಅನೇಕರಿದ್ದರು.