ಬಿಜಿಎಸ್ ಕಾಲೇಜಿನಲ್ಲಿ ರಕ್ತದ ಗುಂಪು ತಪಾಸಣೆ ಕಾರ್ಯಕ್ರಮ

| Published : Nov 07 2024, 11:49 PM IST

ಬಿಜಿಎಸ್ ಕಾಲೇಜಿನಲ್ಲಿ ರಕ್ತದ ಗುಂಪು ತಪಾಸಣೆ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ರಕ್ತದಾನ ಮಾಡುವುದು, ರಸ್ತೆಸುರಕ್ಷತೆ, ಕನ್ನಡ ನಾಡು, ನುಡಿ, ಜಲ ಇವುಗಳ ಬಗ್ಗೆ ಗಮನ ಹರಿಸಬೇಕೆಂದು ಹೇಳಿದರು. ಪುರಸಭ ಸದಸ್ಯ ಜಗದೀಶ್, ವಿದ್ಯಾರ್ಥಿಗಳಲ್ಲಿ ಇತ್ತೀಚಿನ ದಿನದಲ್ಲಿ ದುಶ್ಚಟದ ಗುಣ ಕಂಡುಬರುತ್ತಿದ್ದು, ಇವುಗಳಿಂದ ದೂರವಿರಬೇಕೆಂದರು. ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷ ವರುಣಗೌಡ ಅವರು ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಜನಪರವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷ ತಂದಿದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್‌. ಅಶೋಕ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು ಕಾಲೇಜಿನಲ್ಲಿ ಪೋಕ್ಸೋ ಕಾಯಿದೆ ಅರಿವು ಹಾಗೂ ರಕ್ತದ ಗುಂಪು ತಪಾಸಣೆ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಪ್ರಾಣ ಉಳಿವಿಗೆ ಕಾರಣರಾಗಬೇಕು. ತಂದೆ ತಾಯಿ, ಗುರುಗಳಿಗೆ ಗೌರವ ಸಲ್ಲಿಸಬೇಕು ಎಂದು ಪುರಸಭೆ ಅಧ್ಯಕ್ಷ ಎ.ಆರ್‌. ಅಶೋಕ್ ಹೇಳಿದರು.ಆರೋಗ್ಯ ಇಲಾಖೆಯ ಕಾರ್ಯಕಾರಿ ಸಮಿತಿ ಮೇಲ್ವಿಚಾರಕ ರವಿಕುಮಾರ್‌, ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ದಾರಿ ತಪ್ಪದೆ ಗುರು, ಹಿರಿಯರು, ತಂದೆತಾಯಿಯವರಿಗೆ ಬೆಲೆ ಕೊಡಬೇಕೆಂದರು. ಕರವೇ ಚಂದ್ರಶೇಖರ್‌, ರಕ್ತದಾನ ಮಾಡುವುದು, ರಸ್ತೆಸುರಕ್ಷತೆ, ಕನ್ನಡ ನಾಡು, ನುಡಿ, ಜಲ ಇವುಗಳ ಬಗ್ಗೆ ಗಮನ ಹರಿಸಬೇಕೆಂದು ಹೇಳಿದರು. ಪುರಸಭ ಸದಸ್ಯ ಜಗದೀಶ್, ವಿದ್ಯಾರ್ಥಿಗಳಲ್ಲಿ ಇತ್ತೀಚಿನ ದಿನದಲ್ಲಿ ದುಶ್ಚಟದ ಗುಣ ಕಂಡುಬರುತ್ತಿದ್ದು, ಇವುಗಳಿಂದ ದೂರವಿರಬೇಕೆಂದರು. ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷ ವರುಣಗೌಡ ಅವರು ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಜನಪರವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷ ತಂದಿದೆ ಎಂದರು. ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಮಾಳೆಗೆರೆ ತಾರಾನಾಥ್ ಮಾತನಾಡಿ, ತಂದೆ ತಾಯಿ ಜೊತೆ ಸ್ನೇಹಿತರಂತೆ ವರ್ತಿಸಬೇಕು, ಹೆತ್ತವರಿಗೆ ನೋವು ಕೊಡದಂತೆ ವಿದ್ಯಾಬ್ಯಾಸ ಮಾಡಬೇಕಿದೆ. ಗೋಲ್ಡ್‌ನ್ ಲೈಫ್ ಎನ್ನುವುದನ್ನು ಗೋಡೌನ್ ಲೈಫ್ ಮಾಡಿಕೊಳ್ಳಬೇಡಿರೆಂದು ಸಲಹೆ ನೀಡಿದರು. ಪ್ರಾಂಶುಪಾಲ ದಿವೀತ್‌ಗೌಡ ಮಾತನಾಡಿದರು. ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷ ವರುಣಗೌಡ ಪ್ರಾಯೋಜಕತ್ವ ವಹಿಸಿದ್ದರು.ಪ್ರಾಂಶುಪಾಲ ದಿವ್ಯಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಭಾರತ ರಾಷ್ಟ್ರೀಯ ಒಕ್ಕೂಟದ ತಾ.ಅಧ್ಯಕ್ಷ ವರುಣಗೌಡ, ಪ್ರಾರ್ಥನೆ ವಿದ್ಯಾರ್ಥಿನಿ ಅಂಜಲಿ, ಸ್ವಾಗತ ಉಪನ್ಯಾಸಕಿ ಸೀಮಾ ಮಾಡಿದರು.