ನಿರ್ವಹಣೆ ಕೊರತೆ ಕಾರಣದಿಂದಾಗಿ ರಸ್ತೆ ಮಧ್ಯೆಯೇ ಕೆಟ್ಟು ನಿಲ್ಲುತ್ತಿವೆ ಬಿಎಂಟಿಸಿ ಬಸ್‌

| Published : Jan 21 2025, 01:31 AM IST / Updated: Jan 21 2025, 07:41 AM IST

ನಿರ್ವಹಣೆ ಕೊರತೆ ಕಾರಣದಿಂದಾಗಿ ರಸ್ತೆ ಮಧ್ಯೆಯೇ ಕೆಟ್ಟು ನಿಲ್ಲುತ್ತಿವೆ ಬಿಎಂಟಿಸಿ ಬಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಂಟಿಸಿ ಬಸ್‌ಗಳ ನಿರ್ವಹಣೆ ಕೊರತೆ ಕಾರಣದಿಂದಾಗಿ ಪದೇಪದೇ ರಸ್ತೆ ಮಧ್ಯದಲ್ಲಿ ನಿಲ್ಲುವ ಸಂಖ್ಯೆ ಹೆಚ್ಚುತ್ತಿದ್ದು, 2024-25ನೇ ಸಾಲಿನ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಬರೋಬ್ಬರಿ 220 ಬಸ್‌ಗಳು ರಸ್ತೆ ಮಧ್ಯದಲ್ಲಿಯೇ ನಿಂತು ಪ್ರಯಾಣಿಕರು ಸಮಸ್ಯೆ ಎದುರಿಸಿದ್ದಾರೆ.

 ಬೆಂಗಳೂರು : ಬಿಎಂಟಿಸಿ ಬಸ್‌ಗಳ ನಿರ್ವಹಣೆ ಕೊರತೆ ಕಾರಣದಿಂದಾಗಿ ಪದೇಪದೇ ರಸ್ತೆ ಮಧ್ಯದಲ್ಲಿ ನಿಲ್ಲುವ ಸಂಖ್ಯೆ ಹೆಚ್ಚುತ್ತಿದ್ದು, 2024-25ನೇ ಸಾಲಿನ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಬರೋಬ್ಬರಿ 220 ಬಸ್‌ಗಳು ರಸ್ತೆ ಮಧ್ಯದಲ್ಲಿಯೇ ನಿಂತು ಪ್ರಯಾಣಿಕರು ಸಮಸ್ಯೆ ಎದುರಿಸಿದ್ದಾರೆ.

ಬಿಎಂಟಿಸಿಯ ಅಂಕಿ ಅಂಶದಂತೆಯೇ ಏಪ್ರಿಲ್‌ನಿಂದ ನವೆಂಬರ್‌ವರೆಗೆ 220 ಬಸ್‌ಗಳು ಬ್ರೇಕ್‌ಡೌನ್‌ ಆಗಿ ರಸ್ತೆ ಮಧ್ಯದಲ್ಲಿಯೇ ನಿಂತು ಸಮಸ್ಯೆ ಸೃಷ್ಟಿ ಮಾಡಿತ್ತು. ಅದರಲ್ಲಿ ಎಲೆಕ್ಟ್ರಿಕ್‌ ಬಸ್‌ಗಳೇ ಅತಿಹೆಚ್ಚು ರಸ್ತೆ ಮಧ್ಯದಲ್ಲಿ ನಿಂತಿವೆ.

ಪ್ರಸಕ್ತ ವರ್ಷದ ಮೊದಲ 8 ತಿಂಗಳಲ್ಲಿ 220 ಬಸ್‌ಗಳು ರಸ್ತೆ ಮಧ್ಯದಲ್ಲಿ ನಿಂತಿದ್ದು, ಅದರಲ್ಲಿ 64 ಡೀಸೆಲ್‌ ಮೂಲಕ ಸಂಚರಿಸುವ ಬಸ್‌ಗಳಾಗಿದ್ದರೆ, ಉಳಿದ 156 ಎಲೆಕ್ಟ್ರಿಕ್‌ ಬಸ್‌ಗಳಾಗಿವೆ. ಅಲ್ಲದೆ, ಸೆಪ್ಟೆಂಬರ್‌, ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿಯೇ ಅತಿಹೆಚ್ಚು ಬಸ್‌ಗಳು ಬ್ರೇಕ್‌ಡೌನ್‌ ಆಗಿ ರಸ್ತೆ ಮಧ್ಯದಲ್ಲಿಯೇ ನಿಲ್ಲುವಂತಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಒಟ್ಟು 39, ಅಕ್ಟೋಬರ್‌ನಲ್ಲಿ 70 ಹಾಗೂ ನವೆಂಬರ್‌ ತಿಂಗಳಲ್ಲಿ 55 ಬಸ್‌ಗಳು ಕೆಟ್ಟು ನಿಂತು, ಪ್ರಯಾಣಿಕರು ಹೈರಾಣಾಗುವಂತಾಗಿದೆ.

ಕಳೆದ 8 ತಿಂಗಳಲ್ಲಿ ಸೇವೆ ನೀಡುವಾಗ ಕೆಟ್ಟು ನಿಂತ ಬಸ್‌ಗಳ ವಿವರ: 

ತಿಂಗಳು ಡೀಸೆಲ್‌ ಬಸ್‌ ಎಲೆಕ್ಟ್ರಿಕ್‌ ಬಸ್‌ ಒಟ್ಟು

ಏಪ್ರಿಲ್‌8 3 11

ಮೇ 9 3 12

ಜೂನ್‌ 8 4 12

ಜುಲೈ 6 4 10

ಆಗಸ್ಟ್‌ 6 5 11

ಸೆಪ್ಟೆಂಬರ್‌ 9 30 39

ಅಕ್ಟೋಬರ್‌ 8 62 70

ನವೆಂಬರ್‌ 10 45 55

ಒಟ್ಟು  64 156 220