ರಾಮಕೃಷ್ಣ ವಿದ್ಯಾಕೇಂದ್ರದಲ್ಲಿ ಶಾಲಾ ಮಂತ್ರಿಮಂಡಲದ ಪದಗ್ರಹಣ

| Published : Jun 30 2024, 12:49 AM IST

ರಾಮಕೃಷ್ಣ ವಿದ್ಯಾಕೇಂದ್ರದಲ್ಲಿ ಶಾಲಾ ಮಂತ್ರಿಮಂಡಲದ ಪದಗ್ರಹಣ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಮೊದಲು ನಮ್ಮನ್ನು ನಾವು ತಿಳಿದು, ವಹಿಸಿಕೊಂಡ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು.

ಕನ್ನಡಪ್ರಭ ವಾರ್ತೆ ರಾಮಕೃಷ್ಣನಗರ

ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾಕೇಂದ್ರ ಶಾಲೆಯ ವತಿಯಿಂದ ಶನಿವಾರ ಶಾಲಾ ಮಂತ್ರಿಮಂಡಲದ ಪದಗ್ರಹಣ ಸಮಾರಂಭ ನಡೆಯಿತು.

ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.ಜಿ. ಚಂದ್ರಶೇಖರ್ ಮಾತನಾಡಿ, ಮಂತ್ರಿಮಂಡಲಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಮೊದಲು ನಮ್ಮನ್ನು ನಾವು ತಿಳಿದು, ವಹಿಸಿಕೊಂಡ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು. ವಿದ್ಯಾರ್ಥಿಗಳು ವಿನಯದಿಂದ ನಡೆದುಕೊಳ್ಳಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಂ. ಪಾಪೇಗೌಡ ವಹಿಸಿ ಮಾತನಾಡಿ, ಮಂತ್ರಿ ಮಂಡಲದ ವಿದ್ಯಾರ್ಥಿಗಳು ಸತ್ಯ, ಪ್ರಾಮಾಣಿಕತೆ ಮತ್ತು ಧರ್ಮದಿಂದ ವರ್ತಿಸಬೇಕು. ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಲ್ಲ, ಅದರ ಜೊತೆಯಲ್ಲಿ ಓದಿನ ಕಡೆಗೂ ಹೆಚ್ಚಿನ ಗಮನವನ್ನು ಹರಿಸಿ ಮುನ್ನಡೆಯಬೇಕೆಂದು ತಿಳಿಸಿದರು.

ಶಾಲಾ ಮಂತ್ರಿಮಂಡಲದ ಅಧ್ಯಕ್ಷರಾಗಿ 10ನೇ ತರಗತಿಯ ವಿದ್ಯಾರ್ಥಿ ಸುಧನ್ವ ಡಿ. ಉಪಾಧ್ಯ, ಬಿ.ಜಿ. ಆದಿತ್ಯ- ಉಪಾಧ್ಯಕ್ಷ, 9ನೇ ತರಗತಿಯ ಎಸ್. ಪ್ರೇರಣ- ಕಾರ್ಯದರ್ಶಿ, ಕೆ. ಯಶಿಕ - ಸಾಂಸ್ಕೃತಿಕ ಸಮಿತಿ ಮುಖ್ಯಸ್ಥರಾಗಿ, ಎಂ. ಶ್ರೀಕಾಂತ - ಕ್ರೀಡಾ ಸಮಿತಿ ಮುಖ್ಯಸ್ಥರಾಗಿ, 8ನೇ ತರಗತಿಯ ಪಿ.ಎಂ. ಇಂಚರ - ಶಿಸ್ತು ಸಮಿತಿಯ ಮುಖ್ಯಸ್ಥರಾಗಿ ಹಾಗೂ ಸಮಿತಿಯ ಸದಸ್ಯರು ಅಧಿಕಾರ ವಹಿಸಿಕೊಂಡರು. ಗಣ್ಯರಿಂದ ಪದಕ ಪ್ರದಾನ ಮತ್ತು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ರಾಮಕೃಷ್ಣ ವಿದ್ಯಾಕೇಂದ್ರದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಿ.ಎನ್. ವಿಶ್ವನಾಥ್ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಕೆ. ಹೆಗಡೆ ಹಾಗೂ ಶಿಕ್ಷಕ-ಶಿಕ್ಷಕೇತರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಹಶಿಕ್ಷಕಿ ಕೆ. ಹರ್ಷಿತಶ್ರೀ ನಿರೂಪಿಸಿದರು. ಎಸನ್. ಶೀತಲ್ ಸ್ವಾಗತಿಸಿದರು. ಜಿ. ಉಷಾ ಮತ್ತು ಎಂ. ಮಹಾಲಕ್ಷ್ಮಿ ಸಮಿತಿ ಪರಿಚಯಿಸಿದರು. ಪಿ. ಗೀತಾಪ್ರಿಯ ಪ್ರತಿಜ್ಞಾವಿಧಿ ಬೋಧಿಸಿದರು. ಡಿ. ಅಮೃತ ವಂದಿಸಿದರು.