ಹೂಳಿನಲ್ಲಿ ಸಿಲುಕಿದ ಬೋಟ್‌, ಮೀನುಗಾರರ ರಕ್ಷಣೆ

| Published : Aug 31 2024, 01:33 AM IST

ಹೂಳಿನಲ್ಲಿ ಸಿಲುಕಿದ ಬೋಟ್‌, ಮೀನುಗಾರರ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆಯು ಅನೇಕ ಬೋಟ್‌ಗಳು ಅಳಿವೆಗೆ ಸಿಲುಕಿ ಹಾನಿಯಾಗಿದೆ. ಅಳಿವೆಯ ಹೂಳು ತೆಗೆದು ಮೀನುಗಾರರಿಗೆ ಅನೂಕೂಲ ಮಾಡಿಕೊಡಬೇಕೆನ್ನುವ ಆಗ್ರಹ ಕೇಳಿಬಂದಿದೆ.

ಹೊನ್ನಾವರ: ಮೀನುಗಾರಿಕೆಗೆ ತೆರಳಿ ಮರಳಿ ಬರುವಾಗ ಅರಬಿಯನ್ ಸೀ ಎಂಬ ಹೆಸರಿನ ಬೋಟ್ ಅಳಿವೆ ದಂಡೆಯ ಹೂಳಿನಲ್ಲಿ ಸಿಲುಕಿದ್ದು, ಬಳಿಕ ಕಾರ್ಯಾಚರಣೆ ಮೂಲಕ ಬೋಟ್‌ ಹಾಗೂ 30ಕ್ಕೂ ಹೆಚ್ಚು ಮೀನುಗಾರರನ್ನು ಸಮುದ್ರ ತೀರಕ್ಕೆ ಕರೆತರಲಾಯಿತು.

ಶುಕ್ರವಾರ ಬೋಟ್ ಅಳಿವೆಯ ಹೂಳಿನಿಂದ ತಪ್ಪಿಸಲು ಎಂಟಿಸಿ ಬೋಟ್ ಮಾರಿಕಾಂಬಾ, ಕಾವೇರಿ ಬೋಟ್ ಹಾಗೂ ಇರಬಲ್ ಗಪುರ ಸಾಬ್ ಅವರ ಸಲಾಮತಿ ಹಾಗೂ ವಿಠಲ ಬಾಬು ತಾಂಡೇಲ್ ಅವರ ದೋಣಿಯ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ಬೋಟ್‌ ಹಾಗೂ ಅದರಲ್ಲಿದ್ದ ಮೀನುಗಾರರನ್ನು ಸುರಕ್ಷಿತವಾಗಿ ತೀರಕ್ಕೆ ಕರೆತರಲಾಯಿತು ಎಂದು ಕರಾವಳಿ ಮಿನುಗಾರರ ಕಾರ್ಮಿಕರ ಸಂಘದ ಅಧಕ್ಷ ರಾಜೇಶ್ ತಾಂಡೇಲ್ ತಿಳಿಸಿದ್ದಾರೆ. ಈ ಹಿಂದೆಯು ಅನೇಕ ಬೋಟ್‌ಗಳು ಅಳಿವೆಗೆ ಸಿಲುಕಿ ಹಾನಿಯಾಗಿದೆ. ಅಳಿವೆಯ ಹೂಳು ತೆಗೆದು ಮೀನುಗಾರರಿಗೆ ಅನೂಕೂಲ ಮಾಡಿಕೊಡಬೇಕೆನ್ನುವ ಆಗ್ರಹ ಕೇಳಿಬಂದಿದೆ.

ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ಕರಾವಳಿ ಕಾವಲು ಪೊಲೀಸ್ ಹಾಗೂ ಬೋಟ್ ಮಾಲೀಕ ಅನ್ಸರ್ ಸಾಬ್, ಮೀನುಗಾರರು ಆಗಮಿಸಿದ್ದರು.ಆಕಸ್ಮಿಕವಾಗಿ ಮನೆಗೆ ಬೆಂಕಿ

ಹೊನ್ನಾವರ: ಪಟ್ಟಣದ ಬಾಂದೇಹಳ್ಳದ ಶಾಂತಿನಗರದಲ್ಲಿ ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಮನೆಯೊಂದು ಹೊತ್ತಿ ಉರಿದ ಘಟನೆ ಶುಕ್ರವಾರ ನಡೆದಿದೆ.ಶಾಂತಿನಗರದ ಬಾಂದೇಹಳ್ಳದ ನಿವಾಸಿ ಜ್ಯೋತಿ ಮಾರ್ಟಿನ್ ಜೋನ್ಸಾಲಿಸ್ ಎಂಬವರ ಮನೆ ಇದಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದೆ. ಜ್ಯೋತಿ ಮಾರ್ಟಿನ್‌ ಜೋನ್ಸಾಲಿಸ್‌ ಪಟ್ಟಣದ ಎಂಪಿಇ ಸೊಸೈಟಿಯ ಸಿಬಿಎಸ್‌ಸಿ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಪ್ರತಿದಿನ ಎಂದಿನಂತೆ ಶಾಲೆಗೆ ಹೋಗಿ ಬಂದು ಬಳಿಕ ಚರ್ಚ್‌ಗೆ ತೆರಳಿ ಪೂಜೆಯಲ್ಲಿ ಭಾಗಿಯಾಗಿ ಬರುತ್ತಿದ್ದರು. ಶುಕ್ರವಾರ ಕೂಡ ಚರ್ಚ್‌ಗೆ ಹೋಗುವ ವೇಳೆ ಏಕಾಏಕಿ ಕಾಣಿಸಿಕೊಂಡ ಸಣ್ಣ ಪ್ರಮಾಣದ ಬೆಂಕಿ ಇಡೀ ಮನೆಗೆ ಆವರಿಸಿಕೊಂಡಿದೆ. ಮನೆ ಹೊತ್ತಿ ಉರಿಯುತ್ತಿದ್ದನ್ನು ಕಂಡು ಜ್ಯೋತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೆಂಕಿಗಾಹುತಿಯಾದ ಮನೆಯನ್ನು ಕಂಡು ಅಕ್ಕಪಕ್ಕದ ಮನೆಯವರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದ ದಳ ಹಾಗೂ ಹೊನ್ನಾವರ ಪೊಲೀಸರು ಬೆಂಕಿ ನಂದಿಸಿದ್ದಾರೆ.