ಶಾಸಕ ಎಚ್. ಕೆ. ಸುರೇಶ್ ಕಂಬನಿ ಮಿಡಿದು ಮಾತನಾಡಿ, ಈ ಭೀಕರ ಅಪಘಾತದಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ. ಒಂದೇ ಕುಟುಂಬದ ಹಲವರು ಮೃತಪಟ್ಟಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಮೃತರ ಕುಟುಂಬದ ದುಃಖದಲ್ಲಿ ನಾನು ಸಹ ಭಾಗಿಯಾಗಿದ್ದೇನೆ. ಸರ್ಕಾರದ ವತಿಯಿಂದ ಸಾಧ್ಯವಾದ ಎಲ್ಲಾ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಅಂತಿಮ ಸಂಸ್ಕಾರಕ್ಕಾಗಿ ವೈಯಕ್ತಿಕವಾಗಿ ಧನ ಸಹಾಯ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ಅಗತ್ಯವಾದ ಸಹಾಯ ಮತ್ತು ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಗುರುವಾರ ಬೆಳಗಿನ ಜಾವ ಮಂತ್ರಾಲಯದ ಬಳಿ ಭೀಕರ ಅಪಘಾತ ಸಂಭವಿಸಿ ಮೃತಪಟ್ಟಿದ್ದ ತಾಲೂಕಿನ ಶೆಟ್ಟಿಗೇರಿಯ 6 ಜನರ ಮೃತದೇಹಗಳನ್ನು ಗ್ರಾಮಕ್ಕೆ ತರಲಾಗಿದೆ.ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದ್ದು ಶಾಸಕ ಸುರೇಶ್ ಭೇಟಿ ನೀಡಿ ಅಂತಿಮ ಸಂಸ್ಕಾರಕ್ಕೆ ಧನಸಹಾಯ ನೀಡಿ ಸಂತಾಪ ಸೂಚಿಸಿದರು.

ಗುರುವಾರ ಬೆಳಗಿನ ಜಾವ ಮಂತ್ರಾಲಯದ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು ಎಂಟು ಮಂದಿ ದುರ್ಮರಣ ಹೊಂದಿದ್ದರು. ಅದರಲ್ಲಿ ಬಹುತೇಕರು ಶೆಟ್ಟಿಗೇರಿ ಗ್ರಾಮದವರು. ಶುಕ್ರವಾರ ಮುಂಜಾಬೆ ಕುಮಾರ್ (51), ಸುನಿಲ್ (27), ಲೋಲಾಕ್ಷಿ (38), ವೀಣಾ (25), ನಿಶಿತ (3) ಹಾಗೂ ಜಯಮ್ಮನವರ ಪಾರ್ಥಿವ ಶರೀರವನ್ನು ತರಲಾಯಿತು. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಂತಿಮ ದರ್ಶನ ಪಡೆದರು. ಶಾಸಕ ಎಚ್. ಕೆ. ಸುರೇಶ್ ಕಂಬನಿ ಮಿಡಿದು ಮಾತನಾಡಿ, ಈ ಭೀಕರ ಅಪಘಾತದಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ. ಒಂದೇ ಕುಟುಂಬದ ಹಲವರು ಮೃತಪಟ್ಟಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಮೃತರ ಕುಟುಂಬದ ದುಃಖದಲ್ಲಿ ನಾನು ಸಹ ಭಾಗಿಯಾಗಿದ್ದೇನೆ. ಸರ್ಕಾರದ ವತಿಯಿಂದ ಸಾಧ್ಯವಾದ ಎಲ್ಲಾ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಅಂತಿಮ ಸಂಸ್ಕಾರಕ್ಕಾಗಿ ವೈಯಕ್ತಿಕವಾಗಿ ಧನ ಸಹಾಯ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ಅಗತ್ಯವಾದ ಸಹಾಯ ಮತ್ತು ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ರಸ್ತೆ ಸುರಕ್ಷತೆ ಕುರಿತು ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದರು. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿತ್ತು. ಒಂದೇ ಕುಟುಂಬದ ಆರು ಮಂದಿ ಮೃತಪಟ್ಟ ಅಘಾತಕಾರಿ ಘಟನೆಯ ಬೆನ್ನಲ್ಲೇ ಇದೇ ಕುಟುಂಬದ ಬಾಲಕಿ ತೇಜಸ್ವಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ವಿಷಯ ಸಿಡಿಲು ಬಡಿದಂತಾಗಿದೆ. ಗುರುರಾಯರ ದರ್ಶನಕ್ಕೆ ಎಂದು ತೆರಳಿದ ಕುಟುಂಬದ ಎಲ್ಲರೂ ಯಮರಾಯನ ಪಾಶಕ್ಕೆ ಬಲಿಯಾಗಿರುವುದು ದೇವರು ಇದ್ದಾನೋ ಇಲ್ಲವೋ ಎಂದು ಬಂದು ಮಿತ್ರರು ಗೋಳಾಡುತ್ತಿದ್ದರು.

ಇದೇ ವೇಳೆ ಎಸಿ ಹುಲಿಮನಿ ತಿಮ್ಮಣ್ಣ, ಸಿಪಿಐ ರೇವಣ್ಣ ಹಾಗೂ ಎಂ.ಎ. ನಾಗರಾಜ್ ಸೇರಿದಂತೆ ಇತರರು ಹಾಜರಿದ್ದರು.ಗಾಯಗೊಂಡಿದ್ದ ಬಾಲಕಿ ಸಾವು:

ಬೇಲೂರು: ಮಂತ್ರಾಲಯದ ಬಳಿ ಸಂಭವಿಸಿದ ಭೀಕರ ಅಪಘಾತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ತೇಜಸ್ವಿನಿ (16) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮದವರು. ಈ ದುರ್ಘಟನೆಯಲ್ಲಿ ನಿನ್ನೆ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದರು. ಇದೀಗ ತೇಜಸ್ವಿನಿಯ ಸಾವಿನಿಂದ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಮೃತ ತೇಜಸ್ವಿನಿ, ಈಗಾಗಲೇ ಮೃತಪಟ್ಟಿದ್ದ ಲೋಲಾಕ್ಷಿ ಅವರ ಪುತ್ರಿಯಾಗಿದ್ದಾರೆ. ತಾಯಿ-ಮಗಳು ಇಬ್ಬರೂ ದುರ್ಘಟನೆಯಲ್ಲಿ ಬಲಿಯಾಗಿರುವುದು ಗ್ರಾಮದಲ್ಲಿ ದುಃಖದ ವಾತಾವರಣವನ್ನು ಮೂಡಿಸಿದೆ.