ಕೊಡಗು ತಲುಪಿದ ಯೋಧ ದಿವಿನ್ ಪಾರ್ಥಿವ ಶರೀರ, ಇಂದು ಅಂತ್ಯಸಂಸ್ಕಾರ

| Published : Jan 01 2025, 12:01 AM IST

ಕೊಡಗು ತಲುಪಿದ ಯೋಧ ದಿವಿನ್ ಪಾರ್ಥಿವ ಶರೀರ, ಇಂದು ಅಂತ್ಯಸಂಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಪೂಂಛ್‌ನಲ್ಲಿ ಅಪಘಾತದಲ್ಲಿ ಹುತಾತ್ಮನಾದ ಕೊಡಗಿನ ಮಾಲಂಬಿಯ ಯೋಧ ದಿವಿನ್ ಪಾರ್ಥಿವ ಶರೀರವನ್ನು ಕೊಡಗಿಗೆ ಮಂಗಳವಾರ ರಾತ್ರಿ ತರಲಾಯಿತು. ಪಾರ್ಥಿವ ಶರೀರ ಸಂಜೆ ಬೆಂಗಳೂರು ತಲುಪಿ ರಸ್ತೆ ಮೂಲಕ ಮೈಸೂರು ಕುಶಾಲನಗರಕ್ಕೆ ತರಲಾಯಿತು. ಬುಧವಾರ ಅಂತ್ಯಸಂಸ್ಕಾರ ನೆರವೇರಲಿದೆ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಪೂಂಛ್‌ನಲ್ಲಿ ಅಪಘಾತದಲ್ಲಿ ಹುತಾತ್ಮನಾದ ಕೊಡಗಿನ ಮಾಲಂಬಿಯ ಯೋಧ ದಿವಿನ್ ಪಾರ್ಥಿವ ಶರೀರವನ್ನು ಕೊಡಗಿಗೆ ಮಂಗಳವಾರ ರಾತ್ರಿ ತರಲಾಯಿತು. ಪಾರ್ಥಿವ ಶರೀರ ಸಂಜೆ ಬೆಂಗಳೂರು ತಲುಪಿ ರಸ್ತೆ ಮೂಲಕ ಮೈಸೂರು ಕುಶಾಲನಗರಕ್ಕೆ ತರಲಾಯಿತು.

ಮಂಗಳವಾರ ಸಂಜೆ ವೇಳೆ ತಾಯಿ ಜಲಜಾಕ್ಷಿ ಮನೆಯ ಎದುರು ಬಂದ ಕೂಡಲೆ ಗ್ರಾಮಸ್ಥರೆಲ್ಲರೂ ಕಣ್ಣೀರಿಟ್ಟರು. ಯೋಧನನ್ನು ಕಳೆದುಕೊಂಡ ಇಡೀ ಮಾಲಂಬಿ ಗ್ರಾಮವೇ ದುಃಖದಲ್ಲಿ ಕೂಡಿದೆ.

ಸೋಮವಾರಪೇಟೆ ತಾಲೂಕಿನಾದ್ಯಂತ ಸಾವಿರಾರು ಜನರು ಯೋಧ ದಿವಿನ್ ಅವರಿಗೆ ಗೌರವ ಸಲ್ಲಿಸಲು ಮಂಗಳವಾರ ಕಾದು ಕುಳಿತಿದ್ದರು.

ಇಂದು ಅಂತಿಮ ವಿದಾಯ:

ಬುಧವಾರ ಬೆಳಗ್ಗೆ ಕುಶಾಲನಗರದಲ್ಲಿ ಮಾಜಿ ಸೈನಿಕರ ಸಂಘದಿಂದ ಗೌರವ ಸಮರ್ಪಣೆ ಆದ ಬಳಿಕ ಹೆಬ್ಬಾಲೆ ಬಾಣವಾರ ರಸ್ತೆ ಮೂಲಕ ಆಲೂರು ಸಿದ್ದಾಪುರಕ್ಕೆ ಪಾರ್ಥಿವ ಶರೀರ ಬೆಳಗ್ಗೆ 9 ಗಂಟೆಗೆ ಬರಲಿದೆ. ನಂತರ ಶನಿವಾರಸಂತೆಯ ಮಾಜಿ ಸೈನಿಕರ ಸಂಘದ ಸದಸ್ಯರು ಸಮವಸ್ತ್ರದೊಂದಿಗೆ ಯೋಧನ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸುವರು.

ಮೆರವಣಿಗೆ ಮೂಲಕ ಆಲೂರು ಸಿದ್ದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರ ಇರಿಸಿ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.

ದಿವಿನ್ ಪಾರ್ಥಿವ ಶರೀರಕ್ಕೆ ಉದಾಂಪುರ ಸೇನಾ ನೆಲೆಯಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಜಮ್ಮುಕಾಶ್ಮೀರದ ಉದಾಂಪುರದಲ್ಲಿ ಸೇನಾ ಅಧಿಕಾರಿಗಳಿಂದ ಗೌರವ ಸಮರ್ಪಣೆ ಮಾಡಲಾಯಿತು.

ನಂತರ ಪಾರ್ಥಿವ ಶರೀರ ಬೆಂಗಳೂರಿಗೆ ತರಲಾಯಿತು. ಬೆಂಗಳೂರಿನಲ್ಲಿ ಸಂಸದ ಸಂಸದ ಯದುವೀರ್ ಒಡೆಯರ್ ಅಂತಿಮ ನಮನ ಸಲ್ಲಿಸಿದರು.

ಶ್ರೀನಗರ ಸೇನಾ ಆಸ್ಪತ್ರೆಯಿಂದ ವಿಮಾನದ ಮೂಲಕ ಪಾರ್ಥಿವ ಶರೀರ ಬೆಂಗಳೂರು ತಲುಪಿತ್ತು.