ಬೊಮ್ಮಾಯಿ ಗೆಲುವು; ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

| Published : Jun 05 2024, 12:30 AM IST

ಬೊಮ್ಮಾಯಿ ಗೆಲುವು; ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ್ದರಿಂದ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಗಜೇಂದ್ರಗಡ: ಹಾವೇರಿ-ಗದಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ಬಿಜೆಪಿಯ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್‌ನ ಆನಂದಸ್ವಾಮಿ ಗಡ್ಡದೇವರಮಠ ಅವರ ನಡುವೆ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿತ್ತು. ಎರಡೂ ಪಕ್ಷದ ನಾಯಕರು ಪಟ್ಟಣದಲ್ಲಿ ಭರ್ಜರಿ ಪ್ರಚಾರ ನಡೆಸಿ ಮತಯಾಚಿಸಿದ್ದರು. ಕೊನೆಕ್ಷಣದವರೆಗೂ ಪಕ್ಷದ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ತಂತ್ರಗಳನ್ನು ರೂಪಿಸಿದ್ದರು. ಗೆಲ್ಲುವ ವಿಶ್ವಾಸ ಹೊಂದಿದ್ದರು. ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ್ದರಿಂದ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.

ಇದಕ್ಕೂ ಮುನ್ನ ಬಸವರಾಜ ಬೊಮ್ಮಾಯಿ ಗೆಲುವು ಖಚಿತವಾಗುತ್ತಿದ್ದಂತೆ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ನಿವಾಸಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ, ಮೋದಿ, ಬೊಮ್ಮಾಯಿ ಹಾಗೂ ಕಳಕಪ್ಪ ಬಂಡಿ ಅವರಿಗೆ ಜೈಕಾರ ಹಾಕಿದರು. ಬಳಿಕ ಕಾಲಕಾಲೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

ಸಂಯುಕ್ತಾ ಬಂಡಿ, ಬಸವರಾಜ ಬಂಕದ, ರಾಜೇಂದ್ರ ಘೋರ್ಪಡೆ, ಕರಣ ಬಂಡಿ, ಯು.ಆರ್. ಚನ್ನಮ್ಮನವರ, ಬಾಳಾಜೀರಾವ್ ಭೋಸ್ಲೆ, ಸೂಗುರೇಶ ಕಾಜಗಾರ, ಮುದಿಯಪ್ಪ ಮುಧೋಳ, ಉಮೇಶ ಚನ್ನುಪಾಟೀಲ, ದುರಗಪ್ಪ ಮುಧೋಳ, ಸಿದ್ದಣ್ಣ ಚೋಳಿನ, ಶ್ರೀನಿವಾಸ ಸವದಿ, ಬಾಳು ಗೌಡರ, ಶಂಕರ ಇಂಜನಿ, ಪರಸಪ್ಪ ಪೂಜಾರ, ಶಂಕರ ಸವಣೂರ, ಸೂಗುರೇಶ ಚೋಳಿನ, ಡಿ.ಜಿ. ಕಟ್ಟಿಮನಿ, ಜಗದೀಶ ಸಕ್ರಿ, ಶಿವು ಅರಳಿ, ನಾರಾಯಣ ಬಾಕಳೆ, ಲೀಲಾ ಸವಣೂರ, ಸುಮಿತ್ರಾ ತೊಂಡಿಹಾಳ ಇದ್ದರು.