ಸಾರಾಂಶ
ಮೂಳೆ ಅವರು ಅನುಭವಿ ರಾಜಕಾರಣಿ, ಶಿಕ್ಷಣ ತಜ್ಞರು, ಜನಪರ ಕಾಳಜಿಯುಳ್ಳ ಚಿಂತಕರು ಹಾಗೂ ಸಮಾಜಪರ ಹೋರಾಟಗಾರರೂ ಆಗಿದ್ದಾರೆ
ಬೀದರ್: ಚಿಂತಕರ ಚಾವಡಿ ಎಂದೇ ಕರೆಯಿಸಿಕೊಳ್ಳುವ ವಿಧಾನ ಪರಿಷತ್ತಿಗೆ ಕಲ್ಯಾಣ ಕರ್ನಾಟಕ ಭಾಗದಿಂದ ಬಸವಭೂಮಿ ಬಸವಕಲ್ಯಾಣದ ಮಾಜಿ ಶಾಸಕರು, ಮರಾಠ ಸಮಾಜದ ಹಿರಿಯ ನಾಯಕ ಎಂ.ಜಿ.ಮೂಳೆ ಅವರಿಗೆ ಆಯ್ಕೆ ಮಾಡುವ ಮೂಲಕ ಪಕ್ಷದ ವರಿಷ್ಠರು ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ.
ಮೂಳೆ ಅವರು ಅನುಭವಿ ರಾಜಕಾರಣಿ, ಶಿಕ್ಷಣ ತಜ್ಞರು, ಜನಪರ ಕಾಳಜಿಯುಳ್ಳ ಚಿಂತಕರು ಹಾಗೂ ಸಮಾಜಪರ ಹೋರಾಟಗಾರರೂ ಆಗಿದ್ದಾರೆ. ಈ ಭಾಗದ ಸಮಗ್ರ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಮೇಲ್ಮನೆಯಲ್ಲಿ ಇದಕ್ಕೆ ಪೂರಕವಾದ ಚರ್ಚೆ ಮೂಲಕ ಚಿಂತನ-ಮಂಥನಕ್ಕೆ ನಾಂದಿ ಹಾಡುವ ವಿಶ್ವಾಸವಿದೆ. ಪರಿಷತ್ತಿನಲ್ಲಿ ಮತ್ತೆ ಬೀದರ್ ಜಿಲ್ಲೆಗೆ ಪಕ್ಷ ಆದ್ಯತೆ ನೀಡಿರುವುದು ಕಲ್ಯಾಣ ನಾಡಿನಲ್ಲಿ ಹರ್ಷ ತಂದಿದೆ.ಸದಾನಂದ ಜೋಶಿ, ಬಿಜೆಪಿ ಜಿಲ್ಲಾ ವಕ್ತಾರ, ಹಿರಿಯ ಪತ್ರಕರ್ತ
;Resize=(128,128))
;Resize=(128,128))
;Resize=(128,128))
;Resize=(128,128))