ಡಿಸೆಂಬರ್‌ 15ರೊಳಗೆ ಅರ್ಹ ವಿಮಾದಾರರ ಖಾತೆಗೆ ಬೋನಸ್ ಜಮೆ

| Published : Nov 25 2025, 02:15 AM IST

ಡಿಸೆಂಬರ್‌ 15ರೊಳಗೆ ಅರ್ಹ ವಿಮಾದಾರರ ಖಾತೆಗೆ ಬೋನಸ್ ಜಮೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಮೆದಾರರಿಗೆ ಬೋನಸ್ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಜರುಗಿದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೆಜಿಐಡಿ ಸಿಬ್ಬಂದಿ ನೇಮಿಸಿದ್ದರಿಂದ ವಿಳಂಬವಾಗಿದೆ. ಈಗ ಪ್ರತಿ ದಿನ ಹಂತ-ಹಂತವಾಗಿ ಖಜಾನೆ ಮೂಲಕ ವಿಮೆದಾರರಿಗೆ ಬೋನಸ್ ಜಮೆ ಆಗುತ್ತಿದೆ.

ಧಾರವಾಡ:

ಕರ್ನಾಟಕ ಸರ್ಕಾರದ ವಿಮಾ ಇಲಾಖೆಯಲ್ಲಿ ವಿಮೆ ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ 2022ರ ಏ. 1 ರಿಂದ 2024ರ ಮಾ. 31ರ ಅವಧಿಯಲ್ಲಿ ಚಾಲ್ತಿಯಲ್ಲಿರುವ, ಮ್ಯಾಚುರಿಟಿ (ಫಲಪ್ರದ) ಆಗಿರುವ ಸುಮಾರು 2,243 ವಿಮೆಗಳಿಗೆ ₹ 1ಕ್ಕೆ ರು. 80ರಂತೆ ಲಾಭಾಂಶ (ಬೊನಸ್) ನೀಡಲಾಗುತ್ತಿದೆ. ಡಿ. 15 ರೊಳಗೆ ನೇರವಾಗಿ ವಿಮೆದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಜಿಲ್ಲಾ ವಿಮಾ ಅಧಿಕಾರಿ ಜಗನ್ನಾಥ. ಸಿ.ಕಠಾರೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ನಿಯಮಾನುಸಾರ ವಿಮೆದಾರರಿಗೆ ಬೋನಸ್ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಜರುಗಿದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೆಜಿಐಡಿ ಸಿಬ್ಬಂದಿ ನೇಮಿಸಿದ್ದರಿಂದ ವಿಳಂಬವಾಗಿದೆ. ಈಗ ಪ್ರತಿ ದಿನ ಹಂತ-ಹಂತವಾಗಿ ಖಜಾನೆ ಮೂಲಕ ವಿಮೆದಾರರಿಗೆ ಬೋನಸ್ ಜಮೆ ಆಗುತ್ತಿದೆ ಎಂದರು.

ಈಗಾಗಲೇ ಜಿಲ್ಲೆಯ ವಿಮಾದಾರ 2,243 ಸರ್ಕಾರಿ ನೌಕರರ ಪೈಕಿ ಸುಮಾರು 600 ಜನರ ಖಾತೆಗೆ ಬೋನಸ್ ಪಾವತಿ ಆಗಿದೆ. ಉಳಿದ 1,643 ನೌಕರದಾರರಿಗೆ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಮತ್ತು ಕೌಶಲ್ಯಭರಿತ ಸಿಬ್ಬಂದಿ ಕೊರತೆ, ಆನ್‌ಲೈನ್ ದಾಖಲಾತಿ, ವಿಮೆ ಪರಿಶೀಲನೆ ಕಾರ್ಯ ಬಹಳಷ್ಟಿರುವದರಿಂದ ತಾಂತ್ರಿಕ ಕಾರಣಗಳಿಂದ ಬೋನಸ್ ಜಮೆ ಕಾರ್ಯಕ್ಕೆ ಹೆಚ್ಚು ಕಾಲವಕಾಶ ಹಿಡಿಯುತ್ತಿದೆ ಎಂದು ಕಠಾರೆ ಅವರು ತಿಳಿಸಿದ್ದಾರೆ.