ಸಾರಾಂಶ
- ವಿದ್ಯಾರ್ಥಿ ಸಂಘದ ಉದ್ಘಾಟನೆ- ಪುರಸ್ಕಾರ ಕಾರ್ಯಕ್ರಮದಲ್ಲಿ ಹಿರೇಕಲ್ಮಠ ಶ್ರೀ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶಿಕ್ಷಕ ತನ್ನ ಜ್ಞಾನವನ್ನು ಪುಸ್ತಕಗಳ ಚೌಕಟ್ಟಿನೊಳಗೆ ಬಂಧಿಸಿಡಬಾರದು. ಪುಸ್ತಕದ ವಿಚಾರಗಳನ್ನು ವಿದ್ಯಾರ್ಥಿಗಳ ಮಸ್ತಕದೊಳಗೆ ತುಂಬಿದಾತ ಆದರ್ಶ ಶಿಕ್ಷಕ ಎನಿಸುತ್ತಾನೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ಪಟ್ಟಣದ ಹಿರೇಕಲ್ಮಠದ ಎಸ್‌ಜೆವಿಪಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಶಿಕ್ಷಕ ಮಕ್ಕಳಿಗೆ ತಂದೆಯೂ ಅಗಬಲ್ಲ, ತಾಯಿಯೂ ಅಗಬಲ್ಲ. ಶಿಕ್ಷಕನ ಕಲ್ಪನೆಗಳು ಸದಾ ಹರಿಯುವ ನೀರಿನಂತಿರಬೇಕು ಎಂದರು.
ರಾಣೆಬೆನ್ನೂರಿನ ಶ್ರೀ ತರಳಬಾಳು ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಎಂ.ಈ. ಶಿವಕುಮಾರ್ ಹೊನ್ನಾಳಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅದರ್ಶ ಶಿಕ್ಷಕ ವಿದ್ಯಾರ್ಥಿಗಳ ಭವಿಷ್ಯದ ಬಾಳಿಗೆ ಬೆಳಕಾಗುವ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಮುಂದಿನ ದಿನಗಳಲ್ಲಿ ಶಿಕ್ಷಕನ ಅದರ್ಶಗಳು ವಿದ್ಯಾರ್ಥಿ ಜೀವನದಲ್ಲಿ ಪ್ರತಿಬಿಂಬಿತವಾಗಬೇಕು. ವಿದ್ಯಾರ್ಥಿಗಳ ಒಳಿತಲ್ಲಿ ತನ್ನ ಸುಖ ಮತ್ತು ಸಂತೃಪ್ತಿ ಕಾಣುವವನೇ ನಿಜವಾದ ಶಿಕ್ಷಕ ಎಂದರು.ಎಸ್‌ಜೆವಿಪಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಎಂ.ಮಮತಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ ಪ್ರತಿಜ್ಞಾವಿಧಿ ಬೋಧಿಸಿದರು.
ಉಪನ್ಯಾಸಕ ಎಸ್.ಎಂ. ಪ್ರಸನ್ನ, ನಿಪ್ಪಾಣಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸವನಗೌಡ ಪೊಲೀಸ್ ಪಾಟೀಲ್, ವಿದ್ಯಾಪೀಠದ ನಿರ್ದೇಶಕರಾದ ಎಂ.ಪಿ.ಎಂ. ಚನ್ನಬಸಯ್ಯ, ಟಿ.ಮಾದಪ್ಪ, ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಚೈತ್ರ ಸ್ವಾಗತಿಸಿ, ವಿವೇದಿತಾ ಮತ್ತು ರೇಖಾ ಕಾರ್ಯಕ್ರಮ ನಿರೂಪಿಸಿದರು. ಭಾವನ ವಂದಿಸಿದರು.
- - - -25ಎಚ್.ಎಲ್.ಐ1.ಜೆಪಿಜಿ:ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಗೌರವಿಸಲಾಯಿತು. ಹಿರೇಕಲ್ಠಠದ ಸ್ವಾಮೀಜಿ ಇನ್ನಿತರರು ಇದ್ದರು.