ಸಾರಾಂಶ
ಯೂನೂಸ್ ಮೂಲಿಮನಿ
ಕನ್ನಡಪ್ರಭ ವಾರ್ತೆ ನಾಲತವಾಡಪಟ್ಟಣದ ಸಾರ್ವಜನಿಕ ಗ್ರಂಥಾಲಯದ ನೂರಾರು ಪುಸ್ತಕಗಳು ಕಳೆದ ಹಲವು ವರ್ಷಗಳಿಂದ ಕೋಣೆಯೊಂದರಲ್ಲಿ ಧೂಳು ತಿನ್ನುತ್ತ ಬಿದ್ದಿದ್ದವು. ಇತ್ತೀಚೆಗೆ ಆ ಕೋಣೆ ಕಟ್ಟಡವನ್ನು ನೆಲಸಮಗೊಳಿಸುವ ವೇಳೆ ಆ ಪುಸ್ತಕಗಳು ನೇರವಾಗಿ ಬೀದಿಗೆ ಬಿದ್ದಿದ್ದು, ಇದೀಗ ರಸ್ತೆಯಂಚಿನಲ್ಲಿ ಧೂಳು, ಕಸದ ನಡುವೆ ಅನಾಥವಾಗಿ ಬಿದ್ದಿವೆ.ಈ ದೃಶ್ಯವನ್ನು ಕಂಡ ಸ್ಥಳೀಯರು ಆಘಾತಗೊಂಡಿದ್ದಾರೆ. ಶಿಕ್ಷಣದ ಬೆಳಕು ನೀಡಬೇಕಾದ ಪುಸ್ತಕಗಳು ಇಂತಹ ನಿರ್ಲಕ್ಷ್ಯದಿಂದ ನಾಶವಾಗುತ್ತಿರುವುದು ಪುಸ್ತಕ ಪ್ರೇಮಿಗಳ ಹೃದಯ ಕದಲಿಸಿದೆ.ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಗ್ರಂಥಾಲಯಕ್ಕೆ ಜಾಗವಿಲ್ಲದ ಕಾರಣ ಬಸವೇಶ್ವರ ವಿದ್ಯಾ ಸಂಸ್ಥೆಯ ಕಟ್ಟಡದ ಒಂದು ಕೋಣೆಯಲ್ಲಿ ಪುಸ್ತಕಗಳನ್ನು ಸಂಗ್ರಹಿಸಲಾಗಿತ್ತು. ಅಲ್ಲಿ ಯಾರು ಹೋಗದ ಕಾರಣ ಪುಸ್ತಗಳಿಗೆ ದೋಳು ಹಿಡಿದಿತ್ತು, ಕಟ್ಟಡ ಶಿಥಲಗೊಂಡ ಕಾರಣ ಸಂಸ್ಥೆಯವರು ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ. ಕಟ್ಟಡ ನೆಸಮವಾಗುತ್ತಿರುವ ವಿಷಯ ಮೇಲ್ವಾಚಾರಕನಿಗೆ ಗೊತ್ತಿದ್ದರು ಕೂಡ ಬೇಜವಾಬ್ದಾರಿ ತನದಿಂದ ಬೆಲೆ ಕಟ್ಟಲಾಗದ ಪುಸ್ತಕಗಳು ಈಗ ಅನಾಥವಾಗಿ ರಸ್ತೆಯಲ್ಲಿ ಬಿದ್ದಿವೆ. ರಸ್ತೆಯಲ್ಲಿ ಬಿದ್ದ ಪುಸ್ತಕದಲ್ಲಿ ಅನೇಕ ಅಪರೂಪದ ಕನ್ನಡ ಸಾಹಿತ್ಯ ಗ್ರಂಥಗಳು, ಇತಿಹಾಸ ಪುಸ್ತಕಗಳು ಸೇರಿದಂತೆ ನೂರಾರು ಇಂತಹ ಪುಸ್ತಕಗಳನ್ನು ಕಸವೆಂದು ಎಸೆದುಬಿಡುವುದು ನಿಜಕ್ಕೂ ನೋವು ಎಂದು ಸ್ಥಳೀಯ ನಾಗರಿಕರು ವಿಷಾದ ವ್ಯಕ್ತಪಡಿಸಿದರು.
ಜ್ಞಾನ ನೀಡಬೇಕಾದ ಪುಸ್ತಕಗಳು ನಿರ್ಲಕ್ಷ್ಯದಿಂದ ನಾಶವಾಗುತ್ತಿರುವ ಈ ಘಟನೆ ನಾಲತವಾಡದಲ್ಲಿ ಗ್ರಂಥಾಲಯ ವ್ಯವಸ್ಥೆಯ ದುಸ್ಥಿತಿಯನ್ನು ಬಯಲಿಗೆಳೆಯುತ್ತದೆ. ಅಧಿಕಾರಿಗಳು ತಕ್ಷಣ ಸ್ಪಂದಿಸಿ ಈ ಪುಸ್ತಕಗಳನ್ನು ರಕ್ಷಿಸುವ ಕ್ರಮ ಕೈಗೊಳ್ಳಬೇಕೆಂಬುವುದು ಹಾಗೂ ಬೇಜವಾಬ್ದಾರಿ ಗ್ರಂಥಾಲಯ ಮೇಲ್ವಿಚಾರಕನಿಗೆ ತಕ್ಷಣದಿಂದ ಕೆಲಸದಿಂದ ವಜಾ ಮಾಡಬೇಕು ಎಂದು ಜನರ ಆಗ್ರಹ.
ಈ ಪುಸ್ತಕಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಸಾವಿರಾರೂ ಪುಸ್ತಕಗಳು ದೂಳು ತಿಂದು ಅನಾಥವಾಗಿ ರಸ್ತೆ ಮೇಲೆ ಬಿದ್ದಿರುವುದನ್ನು ಕಂಡು ಮನಸ್ಸಿಗೆ ಬಹಳ ನೂವು ತಂದಿದೆ. ಅಧಿಕಾರಿಗಳು ತಕ್ಷಣ ಕ್ರಮಕೈಗೊಂಡು ಈ ಪುಸ್ತಕಗಳನ್ನು ಸಂಗ್ರಹಿಸಿ ಸಂರಕ್ಷಿಸಬೇಕು ಹಾಗೂ ಸೂಕ್ತ ಸ್ಥಳದಲ್ಲಿ ಮತ್ತೇ ಗ್ರಂಥಾಲಯ ಪ್ರಾರಂಭಗೊಳಿಸಬೇಕು.-ಅಜಯ ಕೋಟಿಕನ್,
ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಜಿಲ್ಲಾಧ್ಯಕ್ಷರು.ಗ್ರಂಥಾಲಯವನ್ನು ಪುನಃ ಸಕ್ರಿಯಗೊಳಿಸಿ ವಿದ್ಯಾರ್ಥಿಗಳಿಗೆ ಓದಿನ ಸೌಲಭ್ಯ ನೀಡುವ ಪ್ರಯತ್ನ ಅಗತ್ಯವಾಗಿದೆ. ಇಲ್ಲದಿದ್ದರೇ ಮುಂದಿನ ಪೀಳಿಗೆಗೆ ಓದಿನ ಆಸಕ್ತಿ ಬೆಳೆಸುವುದು ಕಷ್ಟ. ಆದ್ದರಿಂದ ಗ್ರಂಥಾಲಯವನ್ನು ಪ್ರಮುಖ ಸ್ಥಳದಲ್ಲಿ ಪ್ರಾರಂಭಿಸಬೇಕು.
-ಮಲ್ಲು ಗಂಗನಗೌಡರ, ಕರವೇ(ಪ್ರವೀಣಶಟ್ಟಿ) ಬಣದ ತಾಲೂಕಾಧ್ಯಕ್ಷರು.;Resize=(128,128))
;Resize=(128,128))
;Resize=(128,128))