ಅಣ್ಣಾಸಾಬ ತೆಲಸಂಗ
ಕನ್ನಡಪ್ರಭ ವಾರ್ತೆ ಅಥಣಿಎಂಟನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಬಾಲಕನೊಬ್ಬ ಮನೆಯಲ್ಲಿ ಇರುವ ನಿರುಪಯುಕ್ತ ವಸ್ತುಗಳನ್ನೇ ಬಳಸಿಕೊಂಡು 80 ಕೆಜಿ ಭಾರ ಹೊರುವ ಸಣ್ಣದಾದ ಟ್ರ್ಯಾಕ್ಟರ್‌ವೊಂದನ್ನು ಸಂಶೋಧನೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಬಾಲಕ ಶ್ರೀಶೈಲ ಕಲಗೌಡ ಜಗದೇವ ಸಂಶೋಧನೆ ಮಾಡಿರುವ ವಿದ್ಯಾರ್ಥಿ. ಈತ ಪಾಟೀಲ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ.
ವಿದ್ಯಾರ್ಥಿ ಶ್ರೀಶೈಲ ಜಗದೇವ ಮನೆಯಲ್ಲಿನ ನಿರುಪಯುಕ್ತ ಕಚ್ಚಾ ವಸ್ತುಗಳನ್ನ ಬಳಕೆ ಮಾಡಿಕೊಂಡು ಈ ಚಿಕ್ಕ ಟ್ಯಾಕ್ಟರ್ ಆವಿಷ್ಕಾರ ಮಾಡಿದ್ದಾನೆ. ಇವರ ತಂದೆ ಕಲಗೌಡ ಜಗದೇವ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದಾರೆ. ಟಿವಿ ರಿಪೇರಿ, ಪ್ಯಾನ್, ಮಿಕ್ಸರ್ ಇನ್ನಿತರ ಗೃಹ ಬಳಕೆಯ ಇಲೆಕ್ಟ್ರಾನಿಕ್ ಉಪಕರಣಗಳನ್ನು ರಿಪೇರಿ ಮಾಡುತ್ತಾರೆ. ತಂದೆಯ ಮಾರ್ಗದರ್ಶನದಲ್ಲಿ ಈ ಬಾಲಕ ಚಿಕ್ಕ ಟ್ಯಾಕ್ಟರ್‌ಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ದಾನೆ.ಇದು ಐದು ಕೆಜಿಯಷ್ಟು ಭಾರವಿದ್ದು, 80 ಕೆಜಿಯಷ್ಟು ಭಾರ ಹೊರಲಿದೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿಯೇ ಯಾವುದೇ ತಾಂತ್ರಿಕ ಶಿಕ್ಷಣವನ್ನು ಪಡೆಯದೇ ಟ್ರ್ಯಾಕ್ಟರ್ ಇತಹದ್ದೊಂದು ಟ್ರ್ಯಾಕ್ಟರ್ ತಯಾರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇನ್ನು, ಈತ ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ್ದು, ಮುಂದೆ ಇನ್ನಷ್ಟು ಬಾರ ಹೊರುವ ಟ್ರ್ಯಾಕ್ಟರ್ ತಯಾರಿಸುವ ಬಯಕೆ ಹೊಂದಿದ್ದಾರೆ. ಶಾಲೆಯಲ್ಲಿ ಈಗಾಗಲೇ ಈ ಟ್ರ್ಯಾಕ್ಟರ್ ಪ್ರಯೋಗ ಮಾಡುವ ಮೂಲಕ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕಿಯರ ಮೆಚ್ಚುಗೆ ಗಳಿಸಿದ್ದಾನೆ. ಚಿಕ್ಕ ವಯಸ್ಸಿನಲ್ಲಿಯೇ ಸಂಶೋಧನಾ ಮನೋಭಾವ ಹೊಂದಿರುವ ವಿದ್ಯಾರ್ಥಿ, ಭವಿಷ್ಯತ್ತಿನಲ್ಲಿ ವಿಜ್ಞಾನಿ ಆಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.ಬಾಕ್ಸ್
ಯಾವ ವಸ್ತುಗಳನ್ನು ಬಳಸಿಕೊಂಡಿದ್ದಾನೆ?: ಮನೆಯಲ್ಲಿರುವ ಪ್ಲಾಸ್ಟಿಕ್ ಪೈಪ್‌ಗಳನ್ನು ಬೆಂಕಿಯ ಶಾಖದಿಂದ ತನಗೆ ಬೇಕಾದ ಆಕಾರದಲ್ಲಿ ಸಿದ್ಧ ಮಾಡಿಕೊಂಡು, ಸೈಕಲ್ ಟ್ಯೂಬ್ ಬಳಸಿಕೊಂಡು ಸ್ಪಂಜ್ ಮೂಲಕ ಟ್ರ್ಯಾಕ್ಟರ್ ಗಾಲಿಗಳನ್ನು ತಯಾರಿಸಿದ್ದಾರೆ. ಪ್ಲೈವುಡ್ ಬಳಸಿಕೊಂಡು ಟ್ರೈಲರ್ ತಯಾರಿಸಿದ್ದಾನೆ. ಸೈಕಲ್ ಟ್ಯೂಬ್ ರಟ್ಟು ಡ್ರಿಲ್ ಮಶಿನ್ , ವೈರ್ ತುಂಡುಗಳು ಇನ್ನಿತರ ವಸ್ತುಗಳನ್ನು ಉಪಯೋಗಿಸಿಕೊಂಡು ಸಣ್ಣದೊಂದು ಟ್ರ್ಯಾಕ್ಟರ್ ತಯಾರಿಸಿದ್ದಾನೆ. ಇದು ಕೇವಲ 5 ಕೆಜಿ ಭಾರವಿದ್ದು, ಟ್ರ್ಯಾಕ್ಟರ್ ಮುಂದೆ ಚಲಿಸುವಂತೆ ಅದರಲ್ಲಿಯೇ ಬ್ಯಾಟರಿ ಅಳವಡಿಸಲಾಗಿದೆ. ಇದೇ ಬ್ಯಾಟರ್ ಮೂಲಕ ಟ್ರ್ಯಾಕ್ಟರ್‌ನ್ನು ಆರಂಭಿಸಿ ಚಲಿಸುವಂತೆ ಮಾಡಬಹುದು. ಈ ಟ್ರ್ಯಾಕ್ಟರ್‌ನ್ನು ವಿಶೇಷ ವಿನ್ಯಾಸದ ಮೂಲಕ ತಯಾರಿಸಿದ್ದು, ಈತ ಇದೇ ಮಾದರಿಯಲ್ಲಿ ಟ್ರ್ಯಾಕ್ಟರ್‌ಗಳನ್ನು ತಯಾರಿಸಿ ಮಾರಾಟ ಕೂಡ ಮಾಡುತ್ತಿದ್ದಾನೆ. ಇನ್ನು, ಇಷ್ಟರಲ್ಲಿಯೇ ಬ್ಲೂಟೂತ್ ಮೂಲಕ ಸೌಂಡ್ ವ್ಯವಸ್ಥೆ, ಲೈಟಿಂಗ್ ವ್ಯವಸ್ಥೆ, ಟ್ರ್ಯಾಕ್ಟರ್‌ನ್ನು ಹಿಂದೆ ಮುಂದೆ ತೆಗೆದುಕೊಳ್ಳುವ ಸೌಲಭ್ಯವನ್ನು ಬಾಲಕ ಅಳವಡಿಸಿದ್ದು, ಇದರಲ್ಲಿ ಅಗತ್ಯಕ್ಕೆ ತಕ್ಕಂತೆ ಇನ್ನಷ್ಟು ವಿಶೇಷತೆಗಳನ್ನು ಸೇರಿಸಿ ಮಾರ್ಪಾಡು ಮಾಡಿಕೊಳ್ಳಬಹುದಾಗಿದೆ.
------
ಕೋಟ್.....ನಾನು ಏನಾದ್ರೂ ಸಂಶೋಧನೆ ಮಾಡಬೇಕು ಎಂಬ ಕನಸಿನೊಂದಿಗೆ ಮನೆಯಲ್ಲಿರುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು 80 ಕೆಜಿ ಭಾರ ಹೊತ್ತು ಸಾಗುವ ಟ್ರ್ಯಾಕ್ಟರ್ ಆವಿಷ್ಕಾರ ಮಾಡಿದ್ದೀನೆ. ಮುಂದೆ 500 ಕೆ.ಜಿ ಭಾರ ಹೊತ್ತೊಯ್ಯುವ ಟ್ರ್ಯಾಕ್ಟರ್ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದೇನೆ.
- ಶ್ರೀಶೈಲ ಜಗದೇವ, ವಿದ್ಯಾರ್ಥಿ