ಉಡುಪಿಯಿಂದ ನಾಪತ್ತೆಯಾದ ಬಾಲಕ ಕೇರಳದಲ್ಲಿ ಪತ್ತೆ

| Published : Sep 10 2024, 01:34 AM IST

ಉಡುಪಿಯಿಂದ ನಾಪತ್ತೆಯಾದ ಬಾಲಕ ಕೇರಳದಲ್ಲಿ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಹ್ಮಾವರದ ಕಂದಾಡಿಯ ನಿವಾಸಿ ಪ್ರಕಾಶ್ ಎಂಬವರ ಮಗ ಆರ್ಯ (13) ನಾಪತ್ತೆಯಾದ ಬಾಲಕ. ಈತ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಮುಂದಿನ ತಗರತಿಗಳ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗೆಂದು ಈತ ಉಡುಪಿಯ ಆಕಾಶ್ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಹೋಗುತ್ತಿದ್ದ.

ಕನ್ನಡಪ್ರಭ ವಾರ್ತೆ ಉಡುಪಿಕೋಚಿಂಗ್‌ಗೆಂದು ಉಡುಪಿಗೆ ಬಂದಿದ್ದ ಬ್ರಹ್ಮಾವರದ ಬಾಲಕನೊಬ್ಬ ನಾಪತ್ತೆಯಾಗಿ, ಕೇರಳದ ಪಾಲ್ಘಾಟ್ ರೈಲು ನಿಲ್ದಾಣದಲ್ಲಿ ಪತ್ತೆಯಾದ ಘಟನೆ ಸೋಮವಾರ ನಡೆದಿದೆ.

ಬ್ರಹ್ಮಾವರದ ಕಂದಾಡಿಯ ನಿವಾಸಿ ಪ್ರಕಾಶ್ ಎಂಬವರ ಮಗ ಆರ್ಯ (13) ನಾಪತ್ತೆಯಾದ ಬಾಲಕ. ಈತ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಮುಂದಿನ ತಗರತಿಗಳ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗೆಂದು ಈತ ಉಡುಪಿಯ ಆಕಾಶ್ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಹೋಗುತ್ತಿದ್ದ.

ಭಾನುವಾರ ಬೆಳಗ್ಗೆ ಮನೆಯಿಂದ ತೆರಳಿದ್ದ ಬಾಲಕ ಕೋಚಿಂಗ್‌ಗೂ ಹೋಗದೆ, ಸಂಜೆ ಮನೆಗೂ ಹಿಂದಕ್ಕೆ ಬಾರದೆ ಕಾಣೆಯಾಗಿದ್ದ. ಈ ಬಗ್ಗೆ ಹೆತ್ತವರು ಉಡುಪಿ ಮಹಿಳಾ ಠಾಣೆಗೆ ದೂರು ನೀಡಿದ್ದರು.

ಅದರಂತೆ ಪೊಲೀಸರು ಆತ ಹೋಗಿ ಬರುತ್ತಿದ್ದಲ್ಲೆಲ್ಲ ಸಿಸಿ ಕ್ಯಾಮರಗಳ ಜಾಡು ಹಿಡಿದಾಗ ಇಂದ್ರಾಳಿ ರೈಲು ನಿಲ್ದಾಣಕ್ಕೆ ತೆರಳಿದ್ದು, ಅಲ್ಲಿಂದ ಕೇರಳಕ್ಕೆ ತೆರಳುವ ರೈಲು ಹತ್ತಿದ್ದು ಪತ್ತೆಯಾಯಿತು. ಆದರೆ ರೈಲಿನಲ್ಲಿ ಟಿಕೇಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಆತನನ್ನು ಅಧಿಕಾರಿಗಳು ಪಾಲ್ಘಾಟ್ ನಿಲ್ದಾಣದಲ್ಲಿ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದರು. ಉಡುಪಿ ಪೊಲೀಸರು ಆತನನ್ನು ಮರಳಿ ಹೆತ್ತವರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆತ ಯಾಕೆ ಮನೆ ಬಿಟ್ಟು ಹೋಗಿದ್ದ ಎಂಬುದು ಬಹಿರಂಗವಾಗಿಲ್ಲ.