ಸಾರಾಂಶ
ಇಂಡಿ: ತಾಲೂಕಿನ ನಿಂಬಾಳ ಕೆಡಿ ಗ್ರಾಪಂ ವ್ಯಾಪ್ತಿಯಲ್ಲಿನ 5ನೇ ವಾರ್ಡ್(ಹೊಸೂರಹಟ್ಟಿ)ಗೆ ಉತ್ತಮ ರಸ್ತೆ, ನ್ಯಾಯಬೆಲೆ ಅಂಗಡಿ, 24*7 ಕುಡಿಯುವ ನೀರು, ಬಸನಾಳವರೆಗೆ ರಸ್ತೆ ಡಾಂಬರೀಕರಣ ಮಾಡಬೇಕು. 1ನೇ ತರಗತಿಯಿಂದ 7 ನೇ ತರಗತಿವರೆಗೆ ಸರ್ಕಾರಿ ಶಾಲೆ ಒದಗಿಸಬೇಕು. ಇಲ್ಲವಾದರೆ 5 ನೇ ವಾರ್ಡ್(ಹೊಸೂರಹಟ್ಟಿ)ಮತಗಟ್ಟೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಹೊಸೂರಹಟ್ಟಿಯ ಜನರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ನಿಂಬಾಳ ಕೆಡಿ ಗ್ರಾಪಂ ವ್ಯಾಪ್ತಿಯಲ್ಲಿನ 5ನೇ ವಾರ್ಡ್(ಹೊಸೂರಹಟ್ಟಿ)ಗೆ ಉತ್ತಮ ರಸ್ತೆ, ನ್ಯಾಯಬೆಲೆ ಅಂಗಡಿ, 24*7 ಕುಡಿಯುವ ನೀರು, ಬಸನಾಳವರೆಗೆ ರಸ್ತೆ ಡಾಂಬರೀಕರಣ ಮಾಡಬೇಕು. 1ನೇ ತರಗತಿಯಿಂದ 7 ನೇ ತರಗತಿವರೆಗೆ ಸರ್ಕಾರಿ ಶಾಲೆ ಒದಗಿಸಬೇಕು. ಇಲ್ಲವಾದರೆ 5 ನೇ ವಾರ್ಡ್(ಹೊಸೂರಹಟ್ಟಿ)ಮತಗಟ್ಟೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಹೊಸೂರಹಟ್ಟಿಯ ಜನರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ನಿಂಬಾಳ ಗ್ರಾಮದಿಂದ ಹೊಸೂರಹಟ್ಟಿ 5 ರಿಂದ 6 ಕಿಮೀ ದೂರವಿದ್ದು, ಹೊಸೂರಹಟ್ಟಿಯಿಂದ ನಿಂಬಾಳಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ. ನ್ಯಾಯಬೆಲೆ ಅಂಗಡಿ ನಿಂಬಾಳ ಗ್ರಾಮದಲ್ಲಿದೆ. ಅಷ್ಟು ದೂರದಿಂದ ಪಡಿತರ ತರಲು ಹೇಗೆ ಸಾಧ್ಯ? ಈ ಕುರಿತು ಅಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಆದರೆ, ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪಕ್ಕದ ಹುಲಿಗುಡ್ಡದ ಬಳಿ 24*7 ಕುಡಿಯುವ ನೀರಿನ ಪೈಪ್‌ಲೈನ್ ಇದೆ. ಅದರಿಂದ ಹೊಸೂರಹಟ್ಟಿಗೆ ಕುಡಿಯುವ ನೀರು ಪೊರೈಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಕಚೇರಿಯ ಶಿರಸ್ತೇದಾರ ಎಸ್.ಆರ್.ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು. ನಾಗಪ್ಪ ಆಸಂಗಿ, ಈರೇಶ ಪಾಟೀಲ, ಆರ್.ಬಿ.ಅಡವಿ, ವಿಠಲ ಆಸಂಗಿ, ಮಾಳಪ್ಪ ಆಸಂಗಿ, ಕರೆಪ್ಪ ಆಸಂಗಿ, ಸಂಜು ಖಿರಾತ, ಅನೀಲ ಶಿರಾತ, ಕರೆಪ್ಪ ಖೇಡ, ಯಲ್ಲಪ್ಪ ಅಡವಿ, ಅಂಬಾಜಿ ಲೋಕಡೆ, ಬಸಪ್ಪ ಡಪ್ಪಿನ ಹಲವರು ಇದ್ದರು.