ಸಾರಾಂಶ
ಬಾಲಕ ಬಾಲಕಿಯರ ಕಬಡ್ಡಿ ಮತ್ತು ತ್ರೋಬಾಲ್ ಕ್ರೀಡಾಕೂಟ ಕುಶಾಲನಗರದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ 2025- 26ರ ಸಾಲಿನ ಸೋಮವಾರಪೇಟೆ ಕ್ಷೇತ್ರ ಶಿಕ್ಷಣ ತಾಲೂಕು ಮಟ್ಟದ ಬಾಲಕ ಬಾಲಕಿಯರ ಕಬಡ್ಡಿ ಮತ್ತು ತ್ರೋಬಾಲ್ ಕ್ರೀಡಾಕೂಟ ಕುಶಾಲನಗರದಲ್ಲಿ ನಡೆಯಿತು. 14 ವರ್ಷ ವಯೋಮಿತಿ ಹಾಗೂ 17 ವಯೋಮಿತಿ ಅಂತರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ, ಬಾಲಕಿಯರಿಗೆ ಕುಶಾಲನಗರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಿತು. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಕುಶಾಲನಗರ, ಕೂಡಿಗೆ, ಸೋಮವಾರಪೇಟೆ, ಮಾದಾಪುರ, ಕೊಡ್ಲಿಪೇಟೆ, ಶಾಂತಳ್ಳಿ ಭಾಗದ ಏಳು ಹೋಬಳಿಗಳಿಂದ 7 ತಂಡಗಳು ಹಾಗೂ ಪ್ರೌಢಶಾಲಾ ವಿಭಾಗದ ಕುಶಾಲನಗರ ಸೋಮವಾರಪೇಟೆ ಎ, ಬಿ ತಂಡಗಳು ಮತ್ತು ಶನಿವಾರಸಂತೆ ಕೊಡ್ಲಿಪೇಟೆ ಸುಂಟಿಕೊಪ್ಪ ವ್ಯಾಪ್ತಿಯ 7 ತಂಡಗಳು ಸೇರಿದಂತೆ ಒಟ್ಟು 14 ತಂಡಗಳು ಪಾಲ್ಗೊಂಡಿದ್ದವು.ವಿಭಾಗ ಮಟ್ಟಕ್ಕೆ ತಂಡಗಳ ಆಯ್ಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ತಾಲೂಕು ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.