ಸುಮಾರು 3೦೦ ವರ್ಷಗಳ ಪುರಾತನ ಐತಿಹ್ಯ ಹೊಂದಿರುವ ದೊಂಡೋಲೆಯ ಶ್ರೀ ಪರಶುರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವ 2027ರ ಜ.5ರಿಂದ 10ರವರೆಗೆ ನಡೆಯಲಿದ್ದು ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಕ್ಷೇತ್ರದ ಬೀಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಬೆಳ್ತಂಗಡಿ: ಸುಮಾರು 3೦೦ ವರ್ಷಗಳ ಪುರಾತನ ಐತಿಹ್ಯ ಹೊಂದಿರುವ ದೊಂಡೋಲೆಯ ಶ್ರೀ ಪರಶುರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವ 2027ರ ಜ.5ರಿಂದ 10ರವರೆಗೆ ನಡೆಯಲಿದ್ದು ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಕ್ಷೇತ್ರದ ಬೀಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ದೊಂಡೋಲೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೇ.ಮೂ. ಸತ್ಯಪ್ರಿಯ ಕಲ್ಲೂರಾಯ, ಸಂಚಾಲಕ ಕೆ.ಪುರಂದರ ರಾವ್, ಕಾರ್ಯಾಧ್ಯಕ್ಷ ಕೆ. ಸೂರ್ಯನಾರಾಯಣ ರಾವ್ ದೊಂಡೋಲೆ, ಗೌರವ ಸಲಹೆಗಾರ ಶ್ರೀನಿವಾಸ ರಾವ್ ಧರ್ಮಸ್ಥಳ, ವೇ.ಮೂ ಕೃಷ್ಣ ರಾಜ್ ಭಟ್ ಪೊಳಲಿ, ಪ್ರಧಾನ ಕಾರ್ಯದರ್ಶಿ ದಾಮೋದರ ದೊಂಡೋಲೆ, ಕಾರ್ಯದರ್ಶಿಗಳಾದ ಜಯಪ್ರಕಾಶ್ ಮೇಸ್ತ್ರಿ, ರಘು ಪೂಜಾರಿ, ಪ್ರದೀಪ ರೈ, ಮಮತ ಮಾಧವ, ಗೀತಾ ಅಚ್ಚುತ ಅಚಾರ್ಯ, ರಮ್ಯ ಸತೀಶ್ ರಾವ್, ಗಾಯತ್ರಿ ಸೂರ್ಯನಾರಾಯಣ ರಾವ್, ಮನೋಹರ್, ಸುಶೀಲಾ ಅಡಿಗ, ಮಮತಾ ಮೋಹನ್, ಪೂರ್ಣಿಮಾ, ಭಾರತೀ ಗಣೇಶ್, ವಿಜಯ ರೈ, ಶೈಲಜಾ, ಸೀತಾ ದಿವಾಕರ್, ಜಯಂತಿ, ಅನಿತಾ ಸಫಲ್ಯ,ಯಶೋದಾ ಸಫಲ್ಯ, ಜ್ಯೋತಿ ಮನೋಹರ್, ಮಮತಾ ಕೃಷ್ಣ, ಮಂಜುಳಾ ಜಯಣ್ಣ, ರಘು ಸಫಲ್ಯ, ಸುಶೀಲ, ಬೇಬಿಜಯರಾಮ್, ಪ್ರೇಮ, ಸಾತ್ವಿಕ್ ರಾವ್, ದಿಯಾನ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ದಾರ ಸಮಿತಿ, ಕಾರ್ಯಕಾರಿ ಸಮಿತಿ, ಅಡಳಿತ ಸಮಿತಿ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಜನವರಿ 5ರಿಂದ 10ರವರೆಗೆ ನಡೆಯಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ, ಕನ್ಯಾಡಿಯ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹರಾಜ್ ಸ್ವಾಮೀಜಿಯರ ಮಾರ್ಗದರ್ಶನದಲ್ಲಿ‌ ಬ್ರಹ್ಮಕಲಶೋತ್ಸವ ನೆರವೇರಲಿದೆ.