ಬೆಳ್ತಂಗಡಿ: ತುಳುನಾಡು ಇಡೀ ಭಾರತದ ದೇವರಕೋಣೆ ಇದ್ದಂತೆ. ಪೊಸರಡ್ಕದ ಈ ಊರು ತುಳುನಾಡಿನ ಭಕ್ತಿ, ಮಮತೆಯ, ಪ್ರೀತಿ ಬಾಂಧವ್ಯದ ನಾಡಿ ಆಗಿದೆ. ಹೃದಯ ಶ್ರೀಮಂತಿಕೆಯಿಂದ ನಿರ್ಮಿಸಿದ ಪೊಸರಡ್ಕ ಕ್ಷೇತ್ರ ನೂರಾರು ವರ್ಷಗಳ ಕಾಲ ಅಮರವಾಗಿರಲಿ, ನಿಮ್ಮ ಭಕ್ತಿಗೆ ಶಕ್ತಿಯಾಗಿ ದೈವಗಳು ಆಶೀರ್ವದಿಸಲಿ ಎಂದು ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ ಹೇಳಿದರು.
ಅವರು ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪೊಸರಡ್ಕ ಶ್ರೀ ದೈವ, ಶ್ರೀ ಕೊಡಮಣಿತ್ತಾಯ, ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಬ್ರಹ್ಮಕುಂಭಾಭಿಷೇಕ ಸಂಭ್ರಮದ ಕೊನೆಯ ದಿನದ ಧಾರ್ಮಿಕಸಭೆಯಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವೇ.ಮೂ. ಕೆ. ಅನಂತ ಅಸ್ರಣ್ಣ ಅವರು ದೀಪ ಪ್ರಜ್ವಲಿಸಿ ಶುಭಕೋರಿದರು. ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಅಧ್ಯಕ್ಷತೆ ವಹಿಸಿ, ಬ್ರಹ್ಮಕುಂಭಾಭಿಷೇಕದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಕ್ಷೇತ್ರವನ್ನು ಪುನರ್ ನಿರ್ಮಿಸಲಾಗಿದೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್. ಅವರು ಮಾತನಾಡಿ, ಪೊಸರಡ್ಕ ಕ್ಷೇತ್ರದಲ್ಲಿ ಜನರ ಭಕ್ತಿ, ವೈಶಾಲ್ಯತೆ ಅನಾವರಣ ಆಗಿದೆ. ಒಗ್ಗಟ್ಟು, ಸಮನ್ವಯತೆಯ ಮೂಲಕ ಐತಿಹಾಸಿಕವಾಗಿ ಕ್ಷೇತ್ರವನ್ನು ಪುನರ್ ನಿರ್ಮಿಸಲಾಗಿದೆ. ಇಂತಹ ಅಪೂರ್ವ ಸಮನ್ವಯತೆ ಎಲ್ಲಿಯೂ ಕಾಣಸಿಗಲು ಸಾಧ್ಯವಿಲ್ಲ ಎಂದರು.
ಸ್ವಪ್ನ ಪ್ರವೀಣ್ ಪೂಜಾರಿ ಬೆಂಗಳೂರು ಅವರು ಮಾತನಾಡಿ, ದೈವಸ್ಥಾನದ ಪುನರ್ ನಿರ್ಮಾಣ ಬಹುದೊಡ್ಡ ಪುಣ್ಯದ ಕೆಲಸ, ಇದರಲ್ಲಿ ಪಾಲುಪಡೆದ ಎಲ್ಲರಿಗೂ ಪುಣ್ಯ ಪ್ರಾಪ್ತಿಯಾಗಲಿ ಎಂದರು.ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಆದಿತ್ಯ ಪಿ.ಕೆ. ಪ್ರಾಸ್ತಾವಿಸಿ, ದೇರಾಜೆಬೆಟ್ಟ ಮತ್ತು ಪೊಸರಡ್ಕ ಕ್ಷೇತ್ರಕ್ಕೆ ಅವಿನಭಾವ ಸಂಬಂಧ ಇದೆ. ಅಜೀರ್ಣವಸ್ಥೆಯಲ್ಲಿದ್ದ ದೇರಾಜೆಬೆಟ್ಟ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದರೆ ಪೊಸರಡ್ಕ ಕ್ಷೇತ್ರವನ್ನು ಬೆಳಗಿಸಲು ಸಾಧ್ಯವಿದೆ ಎಂದು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಇಲ್ಲಿನ ಜನ ದೇರಾಜೆಬೆಟ್ಟದ ಪುನರ್ ನಿರ್ಮಾಣ ಮಾಡಿದರು. ಅದರಿಂದ ಇದೀಗ ಪೊಸರಡ್ಕ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದೆ. ಹಿರಿಯರು ಆರಾಧಿಸಿಕೊಂಡು ಬಂದಿದ್ದ ಪೊಸರಡ್ಕ ಕ್ಷೇತ್ರ ಮೂರು ದಶಕಗಳ ಬಳಿಕ ಇದೀಗ ಪುನರ್ ಪ್ರತಿಷ್ಠಾಪಿಸಿ ನೇಮೋತ್ಸವ ನಡೆಸಲಾಗಿದೆ. ಹಿರಿಯರ ಮಾರ್ಗದರ್ಶನ, ದಾನಿಗಳ ಸಹಕಾರ, ಕರಸೇವಕರ ಕೊಡುಗೆಯಿಂದ ಕ್ಷೇತ್ರ ಬೆಳಗಲು ಕಾರಣವಾಗಿದೆ ಎಂದರು.ಉಮಲತ್ತಡೆ ಶ್ರೀ ಕೊಡಮಣಿತ್ತಾಯ ಬೈದರ್ಕಳ ಸಮಿತಿ ಅಧ್ಯಕ್ಷ ಪ್ರವೀಣ್ ಭಟ್, ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಎಂಎಸ್ ಪೂಜಾರಿ, ತಾರಾ ಕಿರಣ್‌ಚಂದ್ರ ಪುಷ್ಪಗಿರಿ, ಅತುಲ್ ಕುಮಾರ್ ಕೆ.ಎನ್. ಹಲೇಜಿ, ನಳಿನಿ ಪಿ.ಕೆ. ಮತ್ತೊಟ್ಟು ಮರೋಡಿ, ಲಾವಣ್ಯ ಬಳ್ಳಾಲ್, ಆಡಳಿತ ಸಮಿತಿ ಅಧ್ಯಕ್ಷ ಜಯವರ್ಮ ಬುಣ್ಣು, ಗೌರವಾಧ್ಯಕ್ಷರಾದ ರಾಜೇಂದ್ರ ಬಳ್ಳಾಲ್, ಹೇಮರಾಜ್ ಕೆ. ಬೆಳ್ಳಿಬೀಡು, ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್. ಪೂಜಾರಿ, ನಾರಾಯಣ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್, ಆಡಳಿತ ಸಮಿತಿ ಸದಸ್ಯರಾದ ರವೀಂದ್ರ ಪೂಜಾರಿ ನಾಪ, ರಮೇಶ್ ಬಲಂತ್ಯರೊಟ್ಟು, ಜಿನೇಂದ್ರ ಜೈನ್ ಹರಂಬೆಟ್ಟುಗುತ್ತು, ಸುದರ್ಶನ ಜೈನ್ ಪಾಂಡಿಬೆಟ್ಟು ಗುತ್ತು , ಸತೀಶ್ ಕೆ. ಕಾಶಿಪಟ್ಣ ಮತ್ತಿತರರು ಉಪಸ್ಥಿತರಿದ್ದರು.
ಸತೀಶ್ ಉಚ್ಚೂರು ಪ್ರಾರ್ಥಿಸಿದರು. ಶಿಕ್ಷಕಿ ಸುಫಲ ಸ್ವಾಗತಿಸಿ, ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಬೈದರ್ಕಳ ನೇಮೋತ್ಸವ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಕಲಾವಿದರಿಂದ ಸಿಂಧೂರ ಸಂಗ್ರಾಮ ಎಂಬ ಯಕ್ಷಗಾನ ನಡೆಯಿತು. ರಾತ್ರಿ ಶ್ರೀ ಬ್ರಹ್ಮಬೈದರ್ಕಳ ಹಾಗೂ ಶ್ರೀ ಮಾಯಾಂದಲೆ ನೇಮೋತ್ಸವ ನಡೆಯಿತು. ಸಾವಿರಾರು ಮಂದಿ ಭಕ್ತರು ಉಪಸ್ಥಿತರಿದ್ದು, ಭಕ್ತಿ-ಭಾವದ ಅದ್ದೂರಿ ನೇಮೋತ್ಸವಕ್ಕೆ ಸಾಕ್ಷಿಯಾದರು. ಈ ಮೂಲಕ ಪೊಸರಡ್ಕ ಕ್ಷೇತ್ರದ ಬ್ರಹ್ಮಕುಂಭಾಭಿಷೇಕ ಸಂಭ್ರಮ ಸಂಪನ್ನಗೊಂಡಿತು.
ಸನ್ಮಾನ: ಅನಿಲ್ ಕುಮಾರ್ ಎಸ್., ಕಿರಣ್‌ಚಂದ್ರ ಪುಷ್ಪಗಿರಿ ದಂಪತಿ, ಸ್ವಪ್ನ ಪ್ರವೀಣ್ ಪೂಜಾರಿ ದಂಪತಿ, ಪಾರ್ಶ್ವನಾಥ ಜೈನ್, ಗಣೇಶ್ ಸಾವ್ಯ, ದಿನೇಶ್ ಸಾವ್ಯ, ಶುಭಕರ ಸಾವ್ಯ, ಕೃಷ್ಣಪ್ಪ ಮರೋಡಿ, ಸುಪ್ರಿಯಾ ನಾರಾಯಣ ಪೂಜಾರಿ, ಅಕ್ಷತಾ ಅನಿಲ್ ಪೂಜಾರಿ, ಗಿರಿಜಾ ಹೆಗ್ಡೆ, ದಯಾನಂದ ಬಂಗೇರ, ರಾಜೇಂದ್ರ ಬಳ್ಳಾಲ್, ಹೇಮರಾಜ್ ಕೆ. ಬೆಳ್ಳಿಬೀಡು, ರಕ್ಷಿತ್ ಶಿವರಾಂ, ಜಿನೇಂದ್ರ ಜೈನ್, ಶಶಿಕಾಂತ್ ಹೆಗ್ಡೆ, ಸುದರ್ಶನ ಜೈನ್ ಎಂಎಸ್ ಪೂಜಾರಿ, ನಳಿನಿ ಪಿಕೆ, ರಮೇಶ್ ಬಂಗೇರ ಸೇರಿದಂತೆ ಸಹಕಾರ ನೀಡಿದ ಹಲವಾರು ಮಂದಿ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಧರ್ಮಸ್ಥಳ ಯೋಜನೆಯ ಮಹಿಳೆಯರು ಹೊರೆಕಾಣಿಕೆ ಮೆರವಣಿಗೆಗೆ ನೀಡಿದ ಸಹಕಾರ ಅವಿಸ್ಮರಣೀಯ. ಭಜನಾ ಪರಿಷತ್‌ನಿಂದ ಇಲ್ಲಿ ದೈವೀಶಕ್ತಿ ನಿರ್ಮಾಣವಾಗಿದೆ. ಅಪರೂಪದ ಕೂಡುಕುಟುಂಬ ಮರೋಡಿಯಲ್ಲಿ ಕಾಣಸಿಗುತ್ತದೆ. ದಾನಿಗಳ ಸಹಕಾರ ಮರೆಯುವಂತಿಲ್ಲ. ಈ ಕ್ಷೇತ್ರದ ಅಭಿವೃದ್ಧಿ ಮಾಡುವ ಪುಣ್ಯದ ಕೆಲಸ ನಮ್ಮ ಪಾಲಿಗೆ ಒದಗಿದೆ. ತಾಳ್ಮೆಯಿಂದ ಸಮಿತಿ ಪದಾಧಿಕಾರಿಗಳು ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದ್ದರಿಂದ ಕ್ಷೇತ್ರದ ಅಭಿವೃದ್ಧಿ ಇಷ್ಟೊಂದು ಅದ್ಭುತ ರೀತಿಯಲ್ಲಿ ಮೂಡಿಬರಲು ಕಾರಣ ಆಗಿದೆ. ಇನ್ನೂ ಹಲವು ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲು ಇದ್ದು, ಎಲ್ಲರ ಸಹಕಾರ ನಿರಂತರವಾಗಿರಲಿ.