ಸಾರಾಂಶ
ಬ್ರಹ್ಮಾವರದ ಜಿ. ಎಮ್. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕವೃಂದದವರಿಗೆ ನವೀನ ಮಾದರಿಯ ಭೋದನಾ ವಿಧಾನ ಹಾಗೂ ಪರಿಣಾಮಕಾರಿ ಸಂವಹನ ಕೌಶಲಗಳ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕನ್ನಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಜಿ. ಎಮ್. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕವೃಂದದವರಿಗೆ ನವೀನ ಮಾದರಿಯ ಭೋದನಾ ವಿಧಾನ ಹಾಗೂ ಪರಿಣಾಮಕಾರಿ ಸಂವಹನ ಕೌಶಲಗಳ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.ಒರಿಯೆಂಟ್ ಬ್ಲಾಕ್‌ಸ್ವಾನ್ ಪ್ರೈ. ಲಿಮಿಟೆಡ್‌ನ ಕೇಂದ್ರೀಯ ವ್ಯವಸ್ಥಾಪಕಿ ಡಾ. ಸ್ಮಿತಾ ಮತಾಯಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಅವರು ಸಂಸ್ಥೆಯ ಶಿಕ್ಷಕರಿಗೆ ಚಟುವಟಿಕೆ ಆಧಾರಿತ ಬೋಧನಾ ವಿಧಾನ, ಪ್ರಾಯೋಗಿಕ ಕಲಿಕೆ, ಸಂವಹನ ಕೌಶಲ, ಸಮಯ ನಿರ್ವಹಣೆ, ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಚಿಂತನೆ, ಪಾಠಯೋಜನೆ, ಮೌಲ್ಯಮಾಪನದ ಕುರಿತು ತರಬೇತಿ ನೀಡಿದರು.ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್ ಮಾತನಾಡಿ, ಆಧುನಿಕತೆಗೆ ತಕ್ಕಂತೆ ನಮ್ಮನ್ನು ನಾವು ನವೀಕರಿಸಿಕೊಳ್ಳಬೇಕು. ಕೇಳುಗರ ಮನಸ್ಸನ್ನು ಮುಟ್ಟುವಂತಹ ಮಾತುಗಾರಿಕೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಶಿಕ್ಷಕರು ಕಾರ್ಯಾಗಾರದಲ್ಲಿ ಪಡೆದ ಮಾಹಿತಿಯನ್ನು ತರಗತಿಯ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಅನುಷ್ಠಾನಗೊಳಿಸಬೇಕೆಂದು ಸಲಹೆ ನೀಡಿದರು. ಕಾರ್ಯಾಗಾರದಲ್ಲಿ ಒರಿಯೆಂಟ್ ಬ್ಲ್ಯಾಕ್ ಸ್ವಾನ್‌ನ ಚೇತನ್ ಕುಮಾರ್, ಸಂಸ್ಥೆಯ ಶಿಕ್ಷಕ ವೃಂದದವರು ಇದ್ದರು.