ಬ್ರಹ್ಮಾವರ: ಛಾಯಾಗ್ರಹಣದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಕಾರ್ಯಾಗಾರ

| Published : Mar 25 2024, 12:45 AM IST

ಬ್ರಹ್ಮಾವರ: ಛಾಯಾಗ್ರಹಣದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಾಗಾರವನ್ನು ಪ್ರಸಿದ್ಧ ಛಾಯಾಗ್ರಾಹಕರು ಹಾಗೂ ಸಂಪನ್ಮೂಲ ವ್ಯಕ್ತಿ ಬಾಬು ಮೈಸೂರು ನಡೆಸಿಕೊಟ್ಟರು. ಛಾಯಾಗ್ರಾಹಕರಿಗೆ ಬಹು ಉಪಯುಕ್ತವಾದ ಈ ಶಿಬಿರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಫೋಟೋಶಾಪ್‌ನಲ್ಲಿ ಆದ ಬದಲಾವಣೆಗಳ ಬಗ್ಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ - ಉಡುಪಿ ಜಿಲ್ಲೆ ಇದರ ಬ್ರಹ್ಮಾವರ ವಲಯದ ಆಶ್ರಯದಲ್ಲಿ ಒಂದು ದಿನದ ಫೋಟೊಶಾಪ್, ಆರ್ಟಿಫಿಷಿಯಲ್ ಇಂಟಲಿಜನ್ಸ್ (ಕೃತಕ ಬುದ್ಧಿಮತ್ತೆ) ಹಾಗೂ ಲೈಟ್ ರೂಂ ಕಾರ್ಯಾಗಾರ ಬ್ರಹ್ಮಾವರದ ಸಿಟಿ ಸೆಂಟರ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರವನ್ನು ಪ್ರಸಿದ್ಧ ಛಾಯಾಗ್ರಾಹಕರು ಹಾಗೂ ಸಂಪನ್ಮೂಲ ವ್ಯಕ್ತಿ ಬಾಬು ಮೈಸೂರು ನಡೆಸಿಕೊಟ್ಟರು. ಛಾಯಾಗ್ರಾಹಕರಿಗೆ ಬಹು ಉಪಯುಕ್ತವಾದ ಈ ಶಿಬಿರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಫೋಟೋಶಾಪ್‌ನಲ್ಲಿ ಆದ ಬದಲಾವಣೆಗಳು, ಅದನ್ನು ಉದ್ಯಮದ ಅಭಿವೃದ್ಧಿಗೆ ಬಳಸಿಕೊಳ್ಳುವ ರೀತಿ ಹಾಗೂ ಒಳಿತು ಕೆಡುಕುಗಳ ಬಗ್ಗೆ ಅಲ್ಲದೆ ಲೈಟ್ ರೂಂ ಬಗ್ಗೆ ಸವಿಸ್ತಾರವಾಗಿ ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.

ಉಭಯ ಜಿಲ್ಲೆಯ 150ಕ್ಕೂ ಮಿಕ್ಕಿ ಛಾಯಾಗ್ರಾಹಕರು ಈ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಇದೇ ಸಂದರ್ಭ ಬಾಬು ಮೈಸೂರು ಅವರನ್ನು ವಲಯದ ವತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಾಗಾರವನ್ನು ಸಂಘದ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಉದ್ಘಾಟಿಸಿದರು. ಬ್ರಹ್ಮಾವರ ವಲಯದ ಅಧ್ಯಕ್ಷರಾದ ಆಲ್ವಿನ್ ಆಂದ್ರಾದೆ ಸಭಾಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಉಡುಪಿ ವಲಯದ ಅಧ್ಯಕ್ಷ ಸುಧೀರ್ ಶೆಟ್ಟಿ, ಬ್ರಹ್ಮಾವರದ ವಲಯದ ಗೌರವಧ್ಯಕ್ಷ ರಾಘವೇಂದ್ರ ಪೂಜಾರಿ, ಜಿಲ್ಲಾ ಜೊತೆ ಕಾರ್ಯದರ್ಶಿ ಏರಿಕ್ ಡಿಸೋಜ ಆಗಮಿಸಿದ್ದರು.ಜಿಲ್ಲಾ ಉಪಾಧ್ಯಕ್ಷ ಜಯಕರ ಸುವರ್ಣ ಹಾಗೂ ವಿವಿಧ ಜಿಲ್ಲಾ ಹಾಗೂ ವಲಯದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರತೀಶ್ ಕುಮಾರ್ ಪ್ರಾರ್ಥನೆ ನೆರವೇರಿಸಿದರು. ಸುನೀಲ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು. ತರಬೇತಿಯ ಹಾಗೂ ವ್ಯವಸ್ಥೆಯ ಬಗ್ಗೆ ಶಿಬಿರಾರ್ಥಿಗಳು ತುಂಬು ಮೆಚ್ಚುಗೆ ವ್ಯಕ್ತಪಡಿಸಿದರು.