ಇಂದಿನ ಒತ್ತಡದ ಸಮಾಜದಲ್ಲಿ ಬ್ರೈನ್ ಯೋಗವು ಪ್ರತಿಯೊಬ್ಬರಿಗೂ ಅತ್ಯಂತ ಉಪಯುಕ್ತವಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರುಬ್ರೈನ್ ಎಕ್ಸ್ ಯೋಗ ರಾಷ್ಟ್ರೀಯ ಬೌದ್ಧಿಕ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ, ಬ್ರೈನ್ ಯೋಗ ಚಾಲೆಂಜ್ - ಸ್ಕಾಲರ್ ಶಿಪ್ ಪ್ರೀಮಿಯರ್ ಲೀಗ್ ಕರ್ನಾಟಕ 2026 ಸ್ಪರ್ಧೆಯ ಲೋಗೋ ಹಾಗೂ ಫ್ಯಾಮಿಲಿ ಸ್ಕಾಲರ್ ಶಿಪ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಜಲದರ್ಶಿನಿ ಅತಿಥಿ ಗೃಹದಲ್ಲಿ ಚಾಲನೆ ನೀಡಲಾಯಿತು.ಕೆ.ಎಂ.ಪಿ.ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಜನಸ್ಪಂದನ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ. ಹರೀಶ್ ಗೌಡ, ಇಂದಿನ ಒತ್ತಡದ ಸಮಾಜದಲ್ಲಿ ಬ್ರೈನ್ ಯೋಗವು ಪ್ರತಿಯೊಬ್ಬರಿಗೂ ಅತ್ಯಂತ ಉಪಯುಕ್ತವಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಸ್ತ್ರೀ ಶಕ್ತಿಯಿಂದ ಮನೋಶಕ್ತಿವರೆಗೆ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಬೌದ್ಧಿಕ ವಿಕಸನಕ್ಕೆ ಪೂರಕವಾದ ಕಿಟ್ ತಲುಪಿಸುವ ಗುರಿ ಇದೆ.ಈ ವೇಳೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ ಹಾಗೂ ಮಾಜಿ ಮೇಯರ್ ಮೋದಾಮಣಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಪುನೀತ್, ಪ್ರಚಾರಕಿ ಆಶಾ ಹಾಗೂ ಚಾಮರಾಜ ಕ್ಷೇತ್ರದ ವಿವಿಧ ಬ್ಲಾಕ್ಗಳ ಮಹಿಳಾ ಮುಖಂಡರು ಇದ್ದರು.