ಸಮಾಜದ ಏಳಿಗೆಗಾಗಿ ಸಂಘಟನೆ ಹಾಗೂ ಹೋರಾಟ ಅತಿ ಮುಖ್ಯವಾದ ಘಟ್ಟವಾಗಿದೆ. ಹಿಂದುಳಿದ ಸಮಾಜವನ್ನು ಒಗ್ಗೂಡಿಸಿ ಸಂಘಟಿಸುವ ಮೂಲಕ ಶ್ರಮಿಸಿ ಸರ್ಕಾರದಿಂದ ಪ್ರವರ್ಗ-1ರ ಮೀಸಲಾತಿ ಸೌಲಭ್ಯವನ್ನು ದೊರಕಿಸಿಕೊಟ್ಟ ಧೀಮಂತ ನಾಯಕ ನಮ್ಮ ಎಚ್.ಇಬ್ರಾಹಿಂ ಸಾಹೇಬ್ ಎಂದು ರಾಜ್ಯ ನದಾಫ್/ ಪಿಂಜಾರ್ ಸಂಘದ ದಾವಣಗೆರೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಪಿ.ಬಡೇಸಾಬ್ ತಿಳಿಸಿದ್ದಾರೆ.

- ಎಚ್.ಇಬ್ರಾಹಿಂ ಸಾಹೇಬರ 95ನೇ ಜನ್ಮದಿನೋತ್ಸವದಲ್ಲಿ ಪಿ.ಬಡೇಸಾಬ್‌

- - -

ದಾವಣಗೆರೆ: ಸಮಾಜದ ಏಳಿಗೆಗಾಗಿ ಸಂಘಟನೆ ಹಾಗೂ ಹೋರಾಟ ಅತಿ ಮುಖ್ಯವಾದ ಘಟ್ಟವಾಗಿದೆ. ಹಿಂದುಳಿದ ಸಮಾಜವನ್ನು ಒಗ್ಗೂಡಿಸಿ ಸಂಘಟಿಸುವ ಮೂಲಕ ಶ್ರಮಿಸಿ ಸರ್ಕಾರದಿಂದ ಪ್ರವರ್ಗ-1ರ ಮೀಸಲಾತಿ ಸೌಲಭ್ಯವನ್ನು ದೊರಕಿಸಿಕೊಟ್ಟ ಧೀಮಂತ ನಾಯಕ ನಮ್ಮ ಎಚ್.ಇಬ್ರಾಹಿಂ ಸಾಹೇಬ್ ಎಂದು ರಾಜ್ಯ ನದಾಫ್/ ಪಿಂಜಾರ್ ಸಂಘದ ದಾವಣಗೆರೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಪಿ.ಬಡೇಸಾಬ್ ತಿಳಿಸಿದರು.

ಕರ್ನಾಟಕ ರಾಜ್ಯ ನದಾಫ್/ ಪಿಂಜಾರ್ ಸಂಘದ ದಾವಣಗೆರೆ ಜಿಲ್ಲಾ, ತಾಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಂಘದ ಸಂಸ್ಥಾಪಕ ದಿವಂಗತ ಎಚ್.ಇಬ್ರಾಹಿಂ ಸಾಹೇಬರ 95ನೇ ವರ್ಷದ ಜನ್ಮದಿನೋತ್ಸವ ಹಾಗೂ ಮಜ್ಜಿಗೆ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲ ಸಮಾಜ ಬಾಂಧವರೊಡನೆ ಬೆರೆತು ಕೋಮು ಸೌಹಾರ್ದತೆಯಿಂದ ಸಾಮರಸ್ಯದ ಬದುಕನ್ನು ಕಟ್ಟಿಕೊಂಡು ಎಲ್ಲ ರಂಗದಲ್ಲೂ ಸಮಾಜವನ್ನು ಮುಂಚೂಣಿಗೆ ತಂದವರು ಎಚ್.ಇಬ್ರಾಹಿಂ ಸಾಹೇಬರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಸಮಾಜವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಜಾಸಾಬ್ ಪಿ.ಕೆ., ಜಿಲ್ಲಾ ಖಜಾಂಚಿ ದಾದಾಪೀರ್, ನಗರ ಘಟಕ ಅಧ್ಯಕ್ಷ ಹೊನ್ನೂರ್ ಸಾಬ್ ಕಾರ್ಯದರ್ಶಿ ಶುಕ್ರುಸಾಬ್, ಸೈಫುಲ್ಲಾ, ಸುಭಾನ್ ಸಾಬ್, ರಾಜಭಕ್ಷಿ, ಕಲಾವಿದರಾದ ಪಿ.ಖಾದರ್, ರಹಮತ್‌ಬಿ, ಪಿ.ಫಾತಿಮಾ, ಆಶಾ ಭಾನು, ಸಲ್ಮಾ ಬಾನು, ಖಾದರ್ ಮತ್ತಿತರರು ಭಾಗವಹಿಸಿದ್ದರು.

- - -

-12ಕೆಡಿವಿಜಿ32:

ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ನದಾಫ್/ ಪಿಂಜಾರ್ ಸಂಘದಿಂದ ಎಚ್.ಇಬ್ರಾಹಿಂ ಸಾಹೇಬರ ಜನ್ಮದಿನೋತ್ಸವ ಆಚರಿಸಲಾಯಿತು.