ಕ್ರಿಸ್‌ ಗೇಲ್‌ ಬ್ಲೇಸರ್‌ ಹೊಲೆದುಕೊಟ್ಟ ಮೈಸೂರಿನ ನರೇಂದ್ರ ಬಾಬು

| Published : Nov 13 2025, 03:00 AM IST

ಕ್ರಿಸ್‌ ಗೇಲ್‌ ಬ್ಲೇಸರ್‌ ಹೊಲೆದುಕೊಟ್ಟ ಮೈಸೂರಿನ ನರೇಂದ್ರ ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯಾವಳಿ ನಡೆದಾಗ ಆಗಮಿಸಿದ್ದ ಜಾನ್ಸ್‌ ಅವರು ಮೈಸೂರಿನ ನಾಡಕುಸ್ತಿಗೂ ಭೇಟಿ ನೀಡಿ,

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ಪ್ರಖ್ಯಾತಿಗೆ ಮತ್ತು ಇಲ್ಲಿನ ಪಾರಂಪರಿಕತೆಗೆ ಫಿದಾ ಆಗದ ಜನರೇ ಇಲ್ಲ.ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗರಾದ ಬ್ರೆಟ್‌ ಲೀ, ಡೀನ್‌ ಜಾನ್ಸ್‌ ಸೇರಿ ಅನೇಕರು ಮೈಸೂರಿಗೆ ಭೇಟಿ ನೀಡಿದಾಗಲೆಲ್ಲ ಇಲ್ಲಿನ ಪ್ರಖ್ಯಾತ ರಸಬಾಳೆ, ಮೈಸೂರು ಪಾಕ್‌, ಹನುಮಂತು ಪಲಾವ್‌, ಮೈಲಾರಿ ದೋಸೆಯ ಸವಿಯನ್ನು ನೋಡಿಯೇ ಹೋಗಿದ್ದಾರೆ.ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯಾವಳಿ ನಡೆದಾಗ ಆಗಮಿಸಿದ್ದ ಜಾನ್ಸ್‌ ಅವರು ಮೈಸೂರಿನ ನಾಡಕುಸ್ತಿಗೂ ಭೇಟಿ ನೀಡಿ, ತಾವು ಪಟ್ಟು ಹಾಕಿದ್ದರು. ಆದರೆ ಈಗ ಖ್ಯಾತ ಕ್ರಿಕೆಟಿಗ ಬ್ರೆಟ್‌ ಲೀ ಸರದಿ.ಬ್ರೆಟ್‌ ಲೀ ಮೈಸೂರಿಗೆ ಭೇಟಿ ನೀಡದಿದ್ದರೂ ಇಲ್ಲಿನ ವಿಠಲ್‌ಸ್ಪೋರ್ಟ್ಸ್‌ ನ ನರೇಂದ್ರ ಬಾಬು ಅವರು ಹೊಲೆದ ಬ್ಲೇಸರ್‌ ಗೆ ಮನಸೋತಿದ್ದಾರೆ.ಫಹಾದ್‌ಎಂಬವರು ನರೇಂದ್ರ ಬಾಬು ಅವರ ಬಳಿ ಬ್ಲೇಸರ್‌ ಹೊಲಿಸಿಕೊಂಡಿದ್ದರು. ಇವರನ್ನು ಟರ್ಕಿಯಲ್ಲಿ ಭೇಟಿಯಾಗಿದ್ದ ಕ್ರಿಸ್‌ ಗೇಲ್‌ಅವರು ಅದಕ್ಕೆ ಮನಸೋತು ತಮಗೂ ಅದೇ ರೀತಿಯ ಬ್ಲೇಸರ್‌ ಬೇಕು ಎಂದು ಕೇಳಿದ್ದರು.ಫಹಾದ್‌ ಅವರ ಬಳಿಯಲ್ಲೇ ನರೇಂದ್ರ ಬಾಬು ಅವರ ನಂಬರ್‌ ಪಡೆದ ಕ್ರಿಸ್‌ ಗೇಲ್‌ಅವರ ವ್ಯವಸ್ಥಾಪಕ 44 ಇಂಚಿನ ಎದೆ ಅಳತೆಯ 6.5 ಅಡಿ ಇರುವ ಗೇಲ್‌ ಅವರಿಗೆ ಬ್ಲೇಸರ್‌ ಬೇಕು ಎಂಬ ಬೇಡಿಕೆಯನ್ನು ಅ. 29 ರಂದು ರಾತ್ರಿ ಬೇಡಿಕೆ ಇಟ್ಟಿದ್ದರು. ನ. 1 ರಂದು ಬ್ಲೇಸರ್‌ಸಿದ್ಧಪಡಿಸಿ ಅಂದೇ ಬೆಂಗಳೂರಿನ ಯುಬಿ ಸಿಟಿಗೆ ತೆರಳಿ ಗೇಲ್‌ ಅವರಿಗೆ ನರೇಂದ್ರಬಾಬು ಅವರೇ ತೊಡಿಸಿದ್ದಾರೆ.ದುಬೈ ನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗೇಲ್‌ ತೆರಳುತ್ತಿದ್ದು, ಅದಕ್ಕಾಗಿ ಈ ಬ್ಲೇಸರ್‌ ಹೊಲಿಸಿಕೊಂಡಿರುವುದಾಗಿ ನರೇಂದ್ರ ಬಾಬು ಕನ್ನಡಪ್ರಭಕ್ಕೆ ತಿಳಿಸಿದರು.ನಗರದ ಮಂಡಿ ಮೊಹಲ್ಲಾದಲ್ಲಿನ ವಿಠಲ್‌ಸ್ಪೋರ್ಟ್ಸ್‌ ಪ್ರಖ್ಯಾತಿ ಹೊಂದಿದೆ. 1932ರಲ್ಲಿ ಆರಂಭವಾದ ಅಂಗಡಿಗೆ 93 ವರ್ಷವಾಗಿದೆ. ಇವರ ತಾತ ನಾರಾಯಣ ರಾವ್‌ಅಂಗಡಿ ಆರಂಭಿಸಿದರು. ಇವರ ತಂದೆ ಮೋಹನ್‌ರಾವ್. ಈಗ ನರೇಂದ್ರ ಬಾಬು ಅವರು ಮೂರನೇ ತಲೆ ಮಾರಿನವರು.ರಾಜವಂಶಸ್ಥರು, ಖ್ಯಾತ ಉದ್ಯಮಿಗಳು ಸೇರಿದಂತೆ ಅನೇಕರಿಗೆ ಇವರು ಈಗಲೂ ಬಟ್ಟೆ ಹೊಲೆಯುತ್ತಾರೆ.