₹50 ಸಾವಿರ ಲಂಚ ಸ್ವೀಕಾರ: ಎಪಿಎಂಸಿ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

| Published : Mar 05 2024, 01:33 AM IST

₹50 ಸಾವಿರ ಲಂಚ ಸ್ವೀಕಾರ: ಎಪಿಎಂಸಿ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಎಪಿಎಂಸಿ ಇಬ್ಬರು ಅಧಿಕಾರಿಗಳು ₹50 ಸಾವಿರ ಲಂಚ ಸ್ವೀಕರಿಸುವ ವೇಳೆ ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡ, ಹಿರಿಯ ಮೇಲ್ವಿಚಾರಕ ಯೋಗೀಶ್‌ ಆರೋಪಿಗಳು.

ಶಿವಮೊಗ್ಗ: ಎಪಿಎಂಸಿ ಇಬ್ಬರು ಅಧಿಕಾರಿಗಳು ₹50 ಸಾವಿರ ಲಂಚ ಸ್ವೀಕರಿಸುವ ವೇಳೆ ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡ, ಹಿರಿಯ ಮೇಲ್ವಿಚಾರಕ ಯೋಗೀಶ್‌ ಆರೋಪಿಗಳು. ಎಪಿಎಂಸಿ ಮಳಿಗೆ ಮಂಜೂರು ಮಾಡಲು ₹2 ಲಕ್ಷ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. ಈ ವಿಚಾರದಲ್ಲಿ ಎಪಿಎಂಸಿ ಕಾರ್ಯದರ್ಶಿ ₹1 ಲಕ್ಷಕ್ಕೆ ಮಾತುಕತೆ ನಡೆಸಿ, ₹50 ಸಾವಿರ ಲಂಚ ಸ್ವೀಕರಿಸುವ ವೇಳೆ ಕೋಡಿಗೌಡ, ಯೋಗೀಶ್‌ ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿದ್ದಾರೆ.

ಹೊಸನಗರ ತಾಲೂಕು ನೇರಲಿಗೆ ಗ್ರಾಮದ ರವೀಂದ್ರ ಎಂಬವರ ದೂರಿನ ಹಿನ್ನೆಲೆ ಈ ದಾಳಿ ನಡೆಸಲಾಗಿದೆ. ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸಧ್ಯಕ್ಕೆ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.