ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ಆಡಳಿತಯಂತ್ರವನ್ನು ದುರುಪಯೋಗಪಡಿಸಿಕೊಂಡು ಆಡಳಿತ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ನಗರ ಪ್ರದೇಶದಲ್ಲಿ ನಿರಂತರ ಕಳ್ಳತನ ಪ್ರಕರಣ ನಡೆಯುತ್ತಿವೆ, ಯಾವುದೇ ಸರ್ಕಾರಿ ಕಚೇರಿಯಲ್ಲೂ ಹಣ ನೀಡದೆ ಕೆಲಸವಾಗುವುದಿಲ್ಲ, ಆಡಳಿತಯಂತ್ರ ಕುಸಿದು ಬಿದ್ದು ಎಲ್ಲೆಡೆ ಲಂಚಾವತಾರ ತಾಂಡವಾಡುತ್ತಿದೆ. ಪರಿಸ್ಥಿತಿ ಸುಧಾರಣೆಯಾಗದಿದ್ದರೆ ಬಿಜೆಪಿಯಿಂದ ಬೃಹತ್ ಅಂದೋಲನ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ಆಡಳಿತಯಂತ್ರವನ್ನು ದುರುಪಯೋಗಪಡಿಸಿಕೊಂಡು ಆಡಳಿತ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ನಗರ ಪ್ರದೇಶದಲ್ಲಿ ನಿರಂತರ ಕಳ್ಳತನ ಪ್ರಕರಣ ನಡೆಯುತ್ತಿವೆ, ಯಾವುದೇ ಸರ್ಕಾರಿ ಕಚೇರಿಯಲ್ಲೂ ಹಣ ನೀಡದೆ ಕೆಲಸವಾಗುವುದಿಲ್ಲ, ಆಡಳಿತಯಂತ್ರ ಕುಸಿದು ಬಿದ್ದು ಎಲ್ಲೆಡೆ ಲಂಚಾವತಾರ ತಾಂಡವಾಡುತ್ತಿದೆ. ಪರಿಸ್ಥಿತಿ ಸುಧಾರಣೆಯಾಗದಿದ್ದರೆ ಬಿಜೆಪಿಯಿಂದ ಬೃಹತ್ ಅಂದೋಲನ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕುಮಟ್ಟದ ಯಾವುದೇ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಶ್ರಮಿಸುತ್ತಿಲ್ಲ, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಪ್ರತಿನಿತ್ಯ ಕಚೇರಿಗಳಿಗೆ ಕೆಲಸಕಾರ್ಯಗಳಿಗಾಗಿ ಅಲೆದಾಡುತ್ತಾರೆ. ಹಣಕೊಡದೆ ಹೋದರೆ ಅವರ ಕೆಲಸವಾಗುವುದಿಲ್ಲ. ಅಧಿಕಾರಿ ವರ್ಗವೂ ಮಾತ್ರ ಕಚೇರಿಗೆ ಬರುವ ಸಾರ್ವಜನಿಕರಿಂದ ಹಣವನ್ನು ನೀಡುವಂತೆ ಮಧ್ಯವರ್ತಿಗಳ ಮೂಲಕ ಒತ್ತಡ ಹೇರುತ್ತಾರೆ ಎಂದು ದೂರಿದರು.ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರು ಬೃಹತ್ ಕಟ್ಟಡ ನಿರ್ಮಿಸಿ ಆಡಳಿತ ಯಂತ್ರ ಸುಲಲಿತವಾಗಿ ನಡೆಯಲು ವ್ಯವಸ್ಥೆ ಮಾಡಿದರಾದರೂ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗವನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ಸಾರ್ವಜನಿಕರು ಹಣಕೊಟ್ಟು ಬೇಸತ್ತಿದ್ದಾರೆ. ಸರ್ವೆಸಾಮಾನ್ಯವಾಗಿ ಪ್ರತಿಯೊಂದು ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಹಣನೀಡದೆ ಹೊರತು ಜನರ ಸಮಸ್ಯೆಗಳನ್ನು ಕೇಳಲು ಸಿದ್ಧರಿಲ್ಲ. ಇಲ್ಲಿ ಹಣವೇ ಪ್ರಧಾನವಾಗಿದೆ. ಆದ್ದರಿಂದ ಶಾಸಕರು ಅಧಿಕಾರಿ ವರ್ಗಕ್ಕೆ ಸೂಕ್ತನಿರ್ದೇಶನ ನೀಡಿ, ಬಡವರ ಕೆಲಸಕಾರ್ಯಗಳ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.ಜನರಿಂದ ಆಯ್ಕೆಯಾದ ಶಾಸಕರು ಜನರಿಗೆ ನ್ಯಾಯುತವಾಗಿ ತಲುಪಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಗಮನನೀಡಬೇಕು. ಇಲ್ಲವಾದರೆ ಸಾರ್ವಜನಿಕರ ಪರವಾಗಿ ಪಕ್ಷದ ವತಿಯಿಂದ ಬೃಹತ್ ಜನಾಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಹಿರಿಯ ಮುಖಂಡ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿದರು.ಬಿಜೆಪಿ ಸೇರ್ಪಡೆ:
ಇದೇ ವೇಳೆ ನಿವೃತ್ತ ಮುಖ್ಯಶಿಕ್ಷಕ ವಿ.ದೊಡ್ಡಯ್ಯ ತಮ್ಮಬೆಂಬಲಿಗರೊಡನೆ ಬಿಜೆಪಿಗೆ ಸೇರ್ಪಡೆಯಾಗಿದ್ದು, ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಸೂರನಹಳ್ಳಿ ಶ್ರೀನಿವಾಸ್ ಮುಂತಾದವರು ಸ್ವಾಗತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಡಲಾಧ್ಯಕ್ಷ ಬಿ.ಎಂ.ಸುರೇಶ್, ಹಿರಿಯ ಮುಖಂಡ ದೇವರಾಜರೆಡ್ಡಿ, ಜಿ.ಕೆ.ತಿಪ್ಪೇಶ್, ಟಿ.ಮಂಜುನಾಥ, ಬಿ.ಎಂ.ಶ್ರೀನಿವಾಸ್, ದಿನೇಶ್‌ರೆಡ್ಡಿ, ಬಂಡೆರಂಗಸ್ವಾಮಿ, ಟಿ.ತಿಮ್ಮಪ್ಪ, ರಾಮರಾಜ್, ಜಿ.ಕೆ.ನವೀನ್, ಆರ್.ರುದ್ರಮುನಿ, ಪಾಲಯ್ಯ ಇತರರಿದ್ದರು.