ಸಾರಾಂಶ
ತೇಜಸ್ವಿಯವರು ಸಾಹಿತ್ಯ ರಚನೆಯಲ್ಲಿ ನೇರತನ, ದಿಟ್ಟತನ ತೋರಿದ ಹೆಗ್ಗಳಿಕೆ ಪೂಚಂತೆಯವರದು. ಅವರ ಬರಹಗಳಲ್ಲಿನ ವೈಚಾರಿಕತೆ ಅನುಕರಣೀಯವಾದುದ್ದು. ಅವರ ಬರಹಗಳಲ್ಲಿನ ಮೂಲ ಆಶಯ ಸಮಾಜಮುಖಿಯಾಗಿದ್ದು, ಸಮಸಮಾಜದ ನಿರ್ಮಾಣಕ್ಕೆ ಅವರ ಸಾಹಿತ್ಯ ದಿವ್ಯೌಷಧವಾಗಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ನುಡಿದಂತೆ ಬಾಳಿದ ತೇಜಸ್ವಿ ಅವರ ಬದುಕು ಮತ್ತು ಬರಹಗಳು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಸದಾ ಮಾದರಿಯಾಗಿವೆ ಎಂದು ಅನಿಕೇತನ ಪ್ರತಿಷ್ಠಾನದ ಅಧ್ಯಕ್ಷ ಡಿ.ಉಮೇಶ್ ದಡಮಹಳ್ಳಿ ಹೇಳಿದರು.ಸಮೀಪದ ಅಂತರವಳ್ಳಿ ಶ್ರೀಸಿದ್ದೇಶ್ವರ ಬೆಟ್ಟದ ಆವರಣದಲ್ಲಿ ಹಲಗೂರಿನ ಅನಿಕೇತನ ಪ್ರತಿಷ್ಠಾನ ಹಾಗೂ ಭಾರತಿ ಕಾಲೇಜಿನ ಪದವಿ ಒಡನಾಡಿಗಳು ಸಹಯೋಗದಲ್ಲಿ ನಡೆದ ಕವಿ ಪೂರ್ಣ ಚಂದ್ರತೇಜಸ್ವಿ ಅವರ 86 ನೆನಪಿನೋತ್ಸವದಲ್ಲಿ ಮಾತನಾಡಿದರು.
ತೇಜಸ್ವಿಯವರು ಸಾಹಿತ್ಯ ರಚನೆಯಲ್ಲಿ ನೇರತನ, ದಿಟ್ಟತನ ತೋರಿದ ಹೆಗ್ಗಳಿಕೆ ಪೂಚಂತೆಯವರದು. ಅವರ ಬರಹಗಳಲ್ಲಿನ ವೈಚಾರಿಕತೆ ಅನುಕರಣೀಯವಾದುದ್ದು. ಅವರ ಬರಹಗಳಲ್ಲಿನ ಮೂಲ ಆಶಯ ಸಮಾಜಮುಖಿಯಾಗಿದ್ದು, ಸಮಸಮಾಜದ ನಿರ್ಮಾಣಕ್ಕೆ ಅವರ ಸಾಹಿತ್ಯ ದಿವ್ಯೌಷಧವಾಗಿದೆ ಎಂದರು.ಪರಿಸರದ ಬಗ್ಗೆ ವಿಶೇಷ ಒಲವಿದ್ದ ತೇಜಸ್ವಿಯವರು ಹೆಚ್ಚು ಜೀವಿತಾವಧಿ ಕಳೆದದ್ದೆ ಕಾಡು, ತೋಟಗಳ ನಡುವೆ. ಚಾರಣ ಮತ್ತು ಕೃಷಿ ಪ್ರಿಯರಾಗಿದ್ದರು. ಇಂದು ಅವರ ಜನ್ಮ ದಿನದ ನೆನಪಿಗಾಗಿ ಚಾರಣ, ಸಂವಾದ, ಫೋಟೋಗ್ರಫಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಎಚ್.ಆರ್.ಶಿವಮಾದೇಗೌಡ ಮಾತನಾಡಿ, ಹಳೆಯ ಸ್ನೇಹಿತರು ಒಂದೆಡೆ ಸೇರಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದು ಇಂದು ಅಗತ್ಯವಾಗಿದೆ. ಆಯಸ್ಸು, ಆರೋಗ್ಯದ ಜೊತೆಗೆ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಸಾಹಿತಿ ಡಾ.ಬೆಳ್ಳೂರು ವೆಂಕಟಪ್ಪ, ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ, ಉಪನ್ಯಾಸಕ ಪುಟ್ಟಸ್ವಾಮಿ ಮಾತನಾಡಿದರು. ಭಾರತಿನಗರ ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಲಕ್ಷೀಶ್ ಹೊನ್ನಲಗೆರೆ, ಎಂಜಿನಿಯರ್ ಬಸವೇಶ್, ಬಿಜಿಎಸ್ ಹಾಸ್ಟೆಲ್ ವಾರ್ಡನ್ ಹನುಮಯ್ಯ, ಅಧೀಕ್ಷಕ ರಾಮಲಿಂಗಯ್ಯ, ಶಿಕ್ಷಕ ನವೀನ್ ಕುಮಾರ್, ವಕೀಲ ರಾಜೇಗೌಡ, ರಾಜು.ಎಚ್.ಎಸ್, ಗೀತಾ, ಸುವರ್ಣ, ಮಮತಾ, ಬಸವರಾಜು, ಕೋಡಿಪುರ ಸಿದ್ದರಾಜು ಇದ್ದರು.