ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರಿನ ಟೈಲರಿಂಗ್ ದಂಪತಿಯ ಸುಪುತ್ರಿ ಬೃಂದಾ ಎಂ. ತಾಪ್ಸೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ರ್‍ಯಾಂಕ್ ಬಂದಿದ್ದಾಳೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರಿನ ಟೈಲರಿಂಗ್ ದಂಪತಿಯ ಸುಪುತ್ರಿ ಬೃಂದಾ ಎಂ. ತಾಪ್ಸೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ರ್‍ಯಾಂಕ್ ಬಂದಿದ್ದಾಳೆ.ಚಿಕ್ಕಮಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಒಂದಾದ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ ಇದೀಗ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಪ್ರತಿದಿನ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ಬೃಂದಾ ಶಾಲಾ ತರಗತಿ ಮುಗಿದ ಬಳಿಕ ಶಾಲೆಯ ವಿಶೇಷ ತರಗತಿ ಗಳಿಗೂ ಹಾಜರಾಗಿ ಸಂಜೆ 6ಕ್ಕೆ ಮನೆಗೆ ವಾಪಸ್ ಆದರೂ. ಮನೆಗೆ ಬಂದವಳೆ ಕೈಕಾಲು ತೊಳೆದು ಸ್ವಲ್ಪ ಹೊತ್ತು ಆಟವಾಡಿ ಬಳಿಕ ಹೋಂ ವರ್ಕ್ ಮುಗಿಸುವುದು, ಊಟ ಮಾಡುವ ಸಮಯದಲ್ಲಿ ಒಂದಷ್ಟು ಹೊತ್ತು ಟಿವಿ ನೋಡುವುದು, ಬಳಿಕ 12 ಗಂಟೆವರೆಗೆ ಮತ್ತೆ ಓದುವುದು ಬೃಂದಾಳ ದಿನಚರಿಯಾಗಿತ್ತು.ಕನ್ನಡಪ್ರಭದೊಂದಿಗೆ ಮಾತನಾಡಿದ ಬೃಂದಾ ಎಂ.ತಾಪ್ಸೆ, ನಿರಂತರ ಅಭ್ಯಾಸ ಮಾಡಿದರೆ ಅಂಕ ಗಳಿಸುವುದು ಕಷ್ಟವಲ್ಲ. 625ಕ್ಕೆ 625 ಅಂಕ ಗಳಿಸುವ ವಿಶ್ವಾಸ ಇತ್ತು. ನಿರೀಕ್ಷೆಗೆ ತಕ್ಕಂತ ಅಂಕ ಬಂದಿದೆ. ಪೋಷಕರು, ಶಾಲೆ ಆಡಳಿತ ಮಂಡಳಿ ಸಹಕಾರ ಮತ್ತು ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಎಂಜಿನಿಯರ್ ಆಗಬೇಕೆಂಬ ಬಯಕೆ ಇದೆ ಎಂದು ಹೇಳಿದ್ದಾರೆ.ಪ್ರತಿ ದಿನ ಬೆಳಗ್ಗೆ 4.30ಕ್ಕೆ ಎದ್ದು ಅಭ್ಯಾಸ ಮಾಡಿ ರಾತ್ರಿ12 ಗಂಟೆ ವರೆಗೆ ಅಭ್ಯಾಸ ಮಾಡುತ್ತಿದೆ. ಕೇವಲ ಓದುವುದು ಮಾತ್ರ ವಲ್ಲದೇ, ಚಿತ್ರಕಲೆ ಸೇರಿದಂತೆ ಮೊದಲಾದ ಹವ್ಯಾಸದಲ್ಲಿ ಆಸಕ್ತಿ ಇದೆ. ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆ ಎಂದು ಆತಂಕ ಗೊಳ್ಳಬಾರದು. ಕ್ಲಾಸ್ ನಲ್ಲಿ ಗಮನವಿಟ್ಟು ಪಾಠ ಕೇಳಬೇಕು. ನಿರಂತರ ಅಭ್ಯಾಸ ಮಾಡಿದರೆ ಹೆಚ್ಚಿನ ಅಂಕ ಗಳಿಸುವುದಕ್ಕೆ ಸಾಧ್ಯ ಎಂದು ತಿಳಿಸಿದ್ದಾರೆ.
ಪ್ರಸಿದ್ಧ ಟೈಲರಿಂಗ್ ಕುಟುಂಬಬೃಂದಾ ದೊಡ್ಡ ಶ್ರೀಮಂತ ಕುಟುಂಬದಿಂದ ಬಂದ ವಿದ್ಯಾರ್ಥಿನಿಯಲ್ಲ. ತಂದೆ ಮಂಜುನಾಥ್ ಹಾಗೂ ತಾಯಿ ಹರ್ಷಿಣಿ ಇಂದಿಗೂ ಟೈಲರ್ ವೃತ್ತಿ ಮಾಡುತ್ತಾರೆ. ಬೃಂದಾ ಮುತ್ತಾತನ ಕಾಲದಿಂದ ಅಂದರೆ, ಸ್ವಾತಂತ್ರ್ಯ ಪೂರ್ವದಿಂದ ಚಿಕ್ಕಮಗಳೂರಿನಲ್ಲಿ ಟೈಲರಿಂಗ್‌ನಲ್ಲಿ ರಾಮನಾರಾಯಣ್ ಟೈಲರ್ ಎಂದು ಪ್ರಸಿದ್ಧಿ ಹೊಂದಿದೆ. ಕಾಲ ಕಳೆದಂತೆ ಇದೀಗ ಈ ಕುಟುಂಬ ಮನೆಯಲ್ಲಿ ಟೈಲರಿಂಗ್ ಮಾಡುವುದಕ್ಕೆ ಸೀಮಿತವಾಗಿದೆ...... ಕೋಟ್....
ಮಗಳು ಬೃಂದಾ ರಾಜ್ಯಕ್ಕೆ ಫಸ್ಟ್ ರ್‍ಯಾಂಕ್ ಬಂದಿರುವುದಕ್ಕೆ ತುಂಬಾ ಖುಷಿಯಾಗಿದೆ. ಮಗಳ ಪರಿಶ್ರಮದೊಂದಿಗೆ ಶಾಲಾ ಸಿಬ್ಬಂದಿ ಸಹಕಾರವೂ ಇದೆ. ಮಗಳಿಗೆ ಯಾವುದೇ ಗೊಂದಲ ಉಂಟಾದಾಗ ಕರೆ ಮಾಡಿದರೆ ಸಾಕು ಶಾಲೆ ಶಿಕ್ಷಕರು ಆಗಲೇ ಗೊಂದಲ ಬಗೆಹರಿಸುತ್ತಿದ್ದರು. ನನ್ನ ಮಗಳೂ ಸಹ ಅಂದಿನ ಪಾಠ ಅಂದೇ ಓದುವ ಮೂಲಕ ಪರೀಕ್ಷಾ ಸಮಯದಲ್ಲಿ ಒತ್ತಡ ತಂದುಕೊಳ್ಳುತ್ತಿರಲಿಲ್ಲ. ಇದು ಬೃಂದಾ ಸಾಧನೆಗೆ ಕಾರಣ.ಮಂಜುನಾಥ್, ಬೃಂದಾ ತಂದೆ..... ಕೋಟ್.....
ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿರುವುದು ಖುಷಿ ತಂದಿದೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿ ಇದೇ ರೀತಿ ಸಾಧನೆ ಮಾಡಬೇಕು. ಜತೆಗೆ ಭವಿಷ್ಯದಲ್ಲಿ ನನಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಷ್ಟು ಆಸಕ್ತಿಯಿಲ್ಲ. ಹೀಗಾಗಿ ಎಂಜಿನಿಯರ್ ಆಗಬೇಕು ಎಂಬ ಆಸೆ ಇದೆ.- ಬೃಂದಾ ಎಂ. ತಾಪ್ಸೆ, ಎಸ್‌ಎಸ್‌ಎಲ್‌ಸಿ ಟಾಪರ್