ಸಾರಾಂಶ
ನಿವೃತ್ತಿಯ ನಂತರ ಸರ್ಕಾರಿ ನೌಕರರ ಬದುಕಿಗೆ ಭದ್ರತೆ ನೀಡಬೇಕಾದಲ್ಲಿ ಎಲ್ಲಾ ಸರ್ಕಾರಿ ನೌಕರರನ್ನು ಹಳೆಯ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕೆಂದು ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಡಾ. ಟಿ ಎಂ ದೇವರಾಜ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತರೀಕೆರೆ
ನಿವೃತ್ತಿಯ ನಂತರ ಸರ್ಕಾರಿ ನೌಕರರ ಬದುಕಿಗೆ ಭದ್ರತೆ ನೀಡಬೇಕಾದಲ್ಲಿ ಎಲ್ಲಾ ಸರ್ಕಾರಿ ನೌಕರರನ್ನು ಹಳೆಯ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕೆಂದು ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಡಾ. ಟಿ ಎಂ ದೇವರಾಜ್ ತಿಳಿಸಿದ್ದಾರೆ.ಕರ್ನಾಟಕ ರಾಜ್ಯ ಸರ್ಕಾರದ ಆದೇಶ ಸಂಖ್ಯೆ ಆಇ ಪಿ ಇ ಎನ್ 99/2023 ಬೆಂಗಳೂರು ದಿನಾಂಕ 24.01.2024 ರಂತೆ 01.04. 2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳನ್ವಯ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ, ಶಾಲಾ ಶಿಕ್ಷಣ ಇಲಾಖೆ ತರೀಕೆರೆ ವ್ಯಾಪ್ತಿಯ 18 ಜನ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಾತಿ ಹೊಂದಿದವರು. ಹಿಂದಿನ ಪಿಂಚಣಿಗೆ ತಮ್ಮನ್ನು ಒಳಪಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ ಟಿ ಇವರಲ್ಲಿ ತಮ್ಮ ಅಭಿಮತದ ಅರ್ಜಿಗಳನ್ನು ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್ ನಾಗರಾಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರವಿ , ಆನಂದ್ ಕುಮಾರ್, ಎಂ ಬಿ ರಾಮಚಂದ್ರಪ್ಪ, ಅನಂತಪ್ಪ, ಸುರೇಶ್, ಕುಮಾರಸ್ವಾಮಿ, ಮೀನಾಕ್ಷಮ್ಮ, ಸುಧಾ, ಶಾಂತಮ್ಮ, ಎನ್‌ಪಿಎಸ್ ನೌಕರರ ಸಂಘದ ಎಸ್ಎಂ ಖಾದ್ರಿ, ಕ್ಷೇತ್ರ ಸಮನ್ವಯಾಧಿಕಾರಿ ಉಮೇಶ್, ಶಿಕ್ಷಣ ಸಂಯೋಜಕರಾದ ವಸಂತ್ ಕುಮಾರ್, ಸತೀಶ್, ರಾಘವೇಂದ್ರ ಉಪಸ್ಥಿತರಿದ್ದರು.10ಕೆಟಿಆರ್.ಕೆ.8ಃತರೀಕೆರೆಯಲ್ಲಿ, ಹಿಂದಿನ ಪಿಂಚಣಿಗೆ ತಮ್ಮನ್ನು ಒಳಪಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗೋವಿಂದಪ್ಪ ಟಿ ಅವರಿಗೆ ಶಿಕ್ಷಣ ಇಲಾಖೆ ಸಿಬ್ಬಂದಿ ತಮ್ಮ ಅಭಿಮತ ಅರ್ಜಿಗಳನ್ನು ಸಲ್ಲಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))