ಸಾರಾಂಶ
ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೇ ಕಾರ್ಯ ನಡೆಸಿ ವರದಿ ನೀಡಬೇಕು
ಕನಕಗಿರಿ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆ ತರುವ ನಿಟ್ಟಿನಲ್ಲಿ ಶಿಕ್ಷಕರು, ಮುಖ್ಯಶಿಕ್ಷಕರು ಶ್ರಮಿಸಬೇಕು ಎಂದು ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ರಾಜೀವ್ ಸೂಚಿಸಿದರು.
ಅವರು ಪಟ್ಟಣದ ಸಕಮಾಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಪ್ರಗತಿ ಪರಿಶೀಲನೆ ಹಾಗೂ ಉತ್ತರ-ದಕ್ಷಿಣ ಕ್ಲಸ್ಟರ್ ಮಟ್ಟದ ಕಲೋತ್ಸವ ಪೂರ್ವಭಾವಿ ಸಭೆಯಲ್ಲಿ ಶನಿವಾರ ಮಾತನಾಡಿದರು.ಪ್ರಾಥಮಿಕ, ಹಿರಿಯ ಹಾಗೂ ಪ್ರೌಢ ಶಾಲೆಗಳಲ್ಲಿನ ಮಕ್ಕಳು ಶಾಲೆಗೆ ಗೈರಾಗಿರುವ ಮಾಹಿತಿ ಬರುತ್ತಿವೆ. ಈ ಬಗ್ಗೆ ಆಯಾ ಶಾಲೆಯ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಗಮನ ಹರಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೇ ಕಾರ್ಯ ನಡೆಸಿ ವರದಿ ನೀಡಬೇಕು ಎಂದು ಆದೇಶಿಸಿದರು.
ಇನ್ನೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ಹಾಗೂ ಶಾಲಾ ತಂಬಾಕು ನಿಯಂತ್ರಣ ಸಮಿತಿ ರಚನೆಗೆ ಕ್ರಮ ಕೈಗೊಳ್ಳಬೇಕು. ಸುರಕ್ಷತೆ ಹೊಂದಿದ ಕೊಠಡಿಗಳ ಬಗ್ಗೆ ಪಂಚಾಯತ್ ರಾಜ್ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯುವುದು, ಪಿಠೋಪಕರಣ ಇಂದೀಕರಿಸುವುದು, ಇಲಾಖೆ ಬಿಡುಗಡೆಗೊಳಿಸಿದ ಶಾಲಾ ಅಭಿವೃದ್ಧಿ ಕಾಮಗಾರಿಗೆ ಅನುದಾನ ಉಪಯೋಗಿತ ಪ್ರಮಾಣತ್ರ ಪಡೆಯುವುದು, ಇಲಾಖೆಯಿಂದ ನೇಮಕಗೊಂಡ ಶಿಕ್ಷಕರ ಬದಲು ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರನ್ನು ಬಿಡುಗಡೆಗೊಳಿಸಲು ಸೂಚಿಸಿದರಲ್ಲದೇ ಉತ್ತರ-ದಕ್ಷಿಣ ಕ್ಲಷ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಿರುವುದಾಗಿ ತಿಳಿಸಿದರು.ಈ ವೇಳೆ ಸಂಪನ್ಲೂಲ ವ್ಯಕ್ತಿ ವಿಜಯಕುಮಾರ ಹೊಸಳ್ಳಿ, ಮುಖ್ಯಶಿಕ್ಷಕ ರವಿ ಸಜ್ಜನ್, ಶೇಖರಯ್ಯ ಕಲ್ಮಠ, ರಾಜು ಮಡ್ಡಿ, ಶಂಶಾದಬೇಗಂ ಸೇರಿದಂತೆ ಕನಕಗಿರಿ ಉತ್ತರ-ದಕ್ಷಿಣ ಕ್ಲಸ್ಟರಿನ ಮುಖ್ಯೋಪಾಧ್ಯಾಯರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))