ಸಾರಾಂಶ
ಹೊಸಕೋಟೆ: ಪೂರ್ವಿಕರು ಪಾರಂರಪರಿಕವಾಗಿ ಆಚರಿಸಿಕೊಂಡು ಬಂದಿರುವ ಹಬ್ಬ ಹರಿದಿನಗಳಿಗೆ ಯುವ ಸಮುದಾಯ ಜೀವ ತುಂಬಬೇಕು ಎಂದು ದೊಡ್ಡಘಟ್ಟಿಗನಬ್ಬೆ ಗ್ರಾಪಂ ಅಧ್ಯಕ್ಷ ಸುರೇಶ್ ತಿಳಿಸಿದರು.
ಹೊಸಕೋಟೆ: ಪೂರ್ವಿಕರು ಪಾರಂರಪರಿಕವಾಗಿ ಆಚರಿಸಿಕೊಂಡು ಬಂದಿರುವ ಹಬ್ಬ ಹರಿದಿನಗಳಿಗೆ ಯುವ ಸಮುದಾಯ ಜೀವ ತುಂಬಬೇಕು ಎಂದು ದೊಡ್ಡಘಟ್ಟಿಗನಬ್ಬೆ ಗ್ರಾಪಂ ಅಧ್ಯಕ್ಷ ಸುರೇಶ್ ತಿಳಿಸಿದರು.
ತಾಲೂಕಿನ ಪೂಜೇನ ಅಗ್ರಹಾರದಲ್ಲಿ ರೇಣುಕಾ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೋನಾ ಸಾಂಕ್ರಾಮಿಕದಿಂದ ಮೂರ್ನಾಲ್ಕು ವರ್ಷಗಳಿಂದ ಜಾತ್ರಾ ಮಹೋತ್ಸವ ಹಾಗೂ ದೀಪೋತ್ಸವಗಳು ಸ್ಥಗಿತಗೊಂಡಿತ್ತು. ಪ್ರಸಕ್ತ ವರ್ಷಗಳಿಂದ ಗ್ರಾಮಗಳಲ್ಲಿ ಜಾತ್ರೆಗಳ ಸಡಗರ, ಸಂಭ್ರಮ ಮತ್ತೆ ಕಳೆ ಕಟ್ಟುತ್ತಿವೆ. ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯದಲ್ಲಿ ಬರಪರಿಸ್ಥಿತಿ ಎದುರಾಗಿದ್ದು, ವರುಣದೇವ ಸಕಾಲಕ್ಕೆ ಕೃಪೆ ತೇರಬೇಕು ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ಹಿರಿಯ ಮುಖಂಡ ಸೂಪರ್ ನಾರಾಯಣಸ್ವಾಮಿ ಮಾತನಾಡಿ, ರೇಣುಕಾಯಲ್ಲಮ್ಮ ದೇವಿ ಜೊತೆಗೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ಬಸವೇಶ್ವರ ಸ್ವಾಮಿ, ನರಸಿಂಹಸ್ವಾಮಿ, ಶ್ರೀಏಳು ಮಂದಮ್ಮದೇವಿ, ಶ್ರೀ ಸಫಲಮ್ಮ ದೇವಿ, ಶ್ರೀ ಮಾರಮ್ಮ ದೇವಿಗೂ ವಿಶೇಷ ಪೂಜೆ ಸಲ್ಲಿಸಲಾಗಿದೆ. ಗ್ರಾಮಸ್ಥರ ಸಹಕಾರದೊಂದಿಗೆ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದು ಗ್ರಾಮ ಸುಭಿಕ್ಷೆ ಹಾಗೂ ಸಾಮರಸ್ಯದಿಂದ ಕೂಡಿರಬೇಕು ಎಂದು ಹೇಳಿದರು.ಜಾತ್ರೆ ಪ್ರಯುಕ್ತ ನೂರಾರು ಮಹಿಳೆಯರು ತಂಬಿಟ್ಟಿನ ದೀಪ ಹೊತ್ತು ತಮಟೆವಾದ್ಯದೊಂದಿಗೆ ಮೆರವಣಿಗೆ ನಡೆಸಿದರು. ಗ್ರಾಪಂ ಸದಸ್ಯ ರಮೇಶ್ ಸೇರಿದಂತೆ ಗ್ರಾಮದ ಯುವಕರು, ಮಹಿಳೆಯರು ಹಾಜರಿದ್ದರು.
(ಒಂದು ಫೋಟೋ ಮಾತ್ರ ಬಳಸಿ ಉಳಿದದ್ದು ನಾಳೆಗೆ ಪಕ್ಕಕ್ಕಿಡಿ)ಫೋಟೋ: 14 ಹೆಚ್‌ಎಸ್‌ಕೆ 1 ಮತ್ತು 2
ಹೊಸಕೋಟೆ ತಾಲೂಕಿನ ಪೂಜೇನ ಅಗ್ರಹಾರದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರು ದೀಪ ಹೊತ್ತು ಮೆರವಣಿಗೆಯಲ್ಲಿ ತೆರಳಿದರು.