ಪಂಚ ಗ್ಯಾರಂಟಿ ಯೋಜನೆಗಳ ಕಿರುಹೊತ್ತಿಗೆ ಬಿಡುಗಡೆ

| Published : Apr 09 2025, 12:32 AM IST

ಪಂಚ ಗ್ಯಾರಂಟಿ ಯೋಜನೆಗಳ ಕಿರುಹೊತ್ತಿಗೆ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಹಾವೇರಿ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕಿರುಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಬಿಡುಗಡೆಗೊಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಶಾಸಕ ಯು.ಬಿ. ಬಣಕಾರ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ವಾರ್ತಾಧಿಕಾರಿ ಭಾರತಿ ಎಚ್. ಉಪಸ್ಥಿತರಿದ್ದರು. ಕಳ್ಳತನವಾಗಿದ್ದ ೫ ದ್ವಿಚಕ್ರ ವಾಹನ ವಶ, ಆರೋಪಿಗಳ ಸೆರೆ

ಶಿಗ್ಗಾಂವಿ: ವಿವಿಧೆಡೆ ಕಳ್ಳತನ ಮಾಡಲಾಗಿದ್ದ 5 ಬೈಕ್‌ಗಳನ್ನು ಜಪ್ತಿ ಮಾಡಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಸವಣೂರು ತಾಲೂಕಿನ ಗೋನಾಳ ಗ್ರಾಮದ ಸಾಹಿಲ್ ತೀರ್ಥ, ಹುಲಗೂರ ಜನತಾ ಪ್ಲಾಟ್‌ನ ಸಲೀಮಅಹ್ಮದ ನೆರ್ತಿ ಎಂಬವರೇ ಬಂಧಿತ ಆರೋಪಿಗಳು.

ಇವರು ಕಳ್ಳತನ ಮಾಡಿದ್ದ ₹2.5 ಲಕ್ಷ ಮೌಲ್ಯದ ೫ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳು ಹುಲಗೂರ ಠಾಣೆ ವ್ಯಾಪ್ತಿಯಲ್ಲಿ ೨, ಸವಣೂರು ಠಾಣೆ ವ್ಯಾಪ್ತಿಯಲ್ಲಿ ೧, ತಡಸ ಠಾಣೆ ವ್ಯಾಪ್ತಿಯಲ್ಲಿ ೧, ಗುಡಗೇರಿ ಠಾಣೆ ವ್ಯಾಪ್ತಿಯಲ್ಲಿ ೧ ಬೈಕ್‌ ಸೇರಿದಂತೆ ಒಟ್ಟು 5 ಬೈಕ್‌ಗಳನ್ನು ಕಳ್ಳತನ ಮಾಡಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಅಂಶುಕುಮಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಲ್.ವೈ. ಶಿರಕೋಳ, ಕೆಎಸ್‌ಪಿಎಸ್ ಶಿಗ್ಗಾಂವಿ ಉಪವಿಭಾಗದ ಉಪ ಅಧೀಕ್ಷಕ ಗುರುಶಾಂತಪ್ಪ ಕೆ. ಹಾಗೂ ಶಿಗ್ಗಾಂವಿ ವೃತ್ತ ನಿರೀಕ್ಷಕ ಅನೀಲ್ ರಾಠೋಡ ಅವರ ಮಾರ್ಗದರ್ಶನದಲ್ಲಿ ಹುಲಗೂರ ಪೊಲೀಸ್ ಠಾಣೆಯ ಉಪನಿರೀಕ್ಷಕ ಪಿ.ಎಫ್. ನೀರೋಳ್ಳಿ ಹಾಗೂ ಸಿಬ್ಬಂದಿಯವರಾದ ರಮೇಶ ಕುರಿ, ವಿನಾಯಕ ಚಿನ್ನೂರ, ಜುಂಜಪ್ಪ ವಗ್ಗನವರ, ಸುರೇಶ ವರ್ದಾನವರ, ರಮೇಶ ದಾನಮ್ಮನವರ, ಅಲ್ಲಾಭಕ್ಷ ನದಾಫ್, ದೇವೇಂದ್ರ ಬಿ.ಎಂ., ಮಂಜು ಈಳಗೇರ ಅವರು ಆರೋಪಿಗಳನ್ನು ಬಂಧಿಸಿದ್ದಾರೆ.