ಚಿಮ್ಮಡ ಯೋಧನ ಕಂಚಿನ ಪ್ರತಿಮೆ ಅನಾವರಣ

| Published : Aug 20 2024, 12:50 AM IST

ಸಾರಾಂಶ

ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮದಲ್ಲಿ ದೇಶಕ್ಕೆ ಸ್ವಾತಂತ್ರ್ಯವನ್ನು ಬ್ರಿಟಿಷರು ದಾನವಾಗಿ ನೀಡಿಲ್ಲ. ಹೋರಾಟಗಳ ಮೂಲಕ ನಾವು ಕಿತ್ತುಕೊಂಡಿದ್ದೇವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು. ಚಿಮ್ಮಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದ್ದ ವೀರ ಯೋಧ ಬಸವರಾಜ ಸಿದ್ದಪ್ಪ ನಾವಿಯವರ ಕಂಚಿನ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು, ಸ್ವಾತಂತ್ರ್ಯ ಪಡೆಯಲು ಹಲವಾರು ದೇಶಭಕ್ತರು ತಮ್ಮ ಬಲಿದಾನಗೈದಿದ್ದಾರೆ.

ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮದಲ್ಲಿ ದೇಶಕ್ಕೆ ಸ್ವಾತಂತ್ರ್ಯವನ್ನು ಬ್ರಿಟಿಷರು ದಾನವಾಗಿ ನೀಡಿಲ್ಲ. ಹೋರಾಟಗಳ ಮೂಲಕ ನಾವು ಕಿತ್ತುಕೊಂಡಿದ್ದೇವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.ಚಿಮ್ಮಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದ್ದ ವೀರ ಯೋಧ ಬಸವರಾಜ ಸಿದ್ದಪ್ಪ ನಾವಿಯವರ ಕಂಚಿನ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು, ಸ್ವಾತಂತ್ರ್ಯ ಪಡೆಯಲು ಹಲವಾರು ದೇಶಭಕ್ತರು ತಮ್ಮ ಬಲಿದಾನಗೈದಿದ್ದಾರೆ. ಹಲವು ಮಹಾತ್ಮರು ಕಠಿಣ ಜೈಲುವಾಸದೊಂದಿಗೆ ಚಿತ್ರಹಿಂಸೆ ಅನುಭವಿಸಿದ್ದಾರೆ. ಅಲ್ಲದೇ ಸಾವಿರಾರು ಜನ ಹೋರಾಟಗಾರರು ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ ಎಂದು ಸ್ಮರಿಸಿದರು.

ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಮಾತನಾಡಿ, ನಾವಿಲ್ಲಿ ಸುಖವಾಗಿ ನಿದ್ರೆ ಮಾಡಲು ಕಾರಣ ಗಡಿಯಲ್ಲಿ ಕಾಯುತ್ತಿರುವ ಯೋಧರು. ನಿದ್ದೆಗೆಟ್ಟು ನಮಗಾಗಿ ಗಡಿ ಕಾಯುತ್ತಾರೆ, ದೇಶಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ವೀರ ಸೇನಾನಿಗಳ ಕುಟುಂಬವನ್ನು ಕಾಯುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿರಬೇಕು ಎಂದು ಹೇಳಿದರು. ಉಪನ್ಯಾಸಕ ಶಿವಲಿಂಗ ಶಿದ್ನಾಳ ಮಾತನಾಡಿ, ಶಿಸ್ತು, ಗತ್ತು, ನಿಯತ್ತು, ತಾಕತ್ತು ಹಾಗೂ ಸಂಪತ್ತು ಇವೆಲ್ಲವೂ ಸಿಗುವುದು ಸೈನಿಕ ಹುದ್ದೆಯಲ್ಲಿ ಮಾತ್ರ ಎಂದ ಅವರು ಸೈನಿಕರ ಪರ ಹಲವಾರು ನುಡಿಮುತ್ತುಗಳ ಮೂಲಕ ಎಲ್ಲರಲ್ಲಿಯೂ ದೇಶಭಕ್ತಿಯ ಕಿಚ್ಚು ಹಚ್ಚಿದರು.ಸಾನಿಧ್ಯವನ್ನು ಶ್ರೀ ಪ್ರಭು ಮಹಾಸ್ವಾಮಿಗಳು, ಶ್ರೀ ಜನಾರ್ಧನ ಮಹಾರಾಜರು ವಹಿಸಿದ್ದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಪ್ಪ ಮುಂಗರವಾಡಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಚಿಮ್ಮಡ ಗ್ರಾಪಂ ಅಧ್ಯಕ್ಷೆ ಮಾಲಾ ಮೋಟಗಿ, ಪಿಕೆಪಿಎಸ್ ಅಧ್ಯಕ್ಷ ಹಣಮಂತ ನೇಸೂರ, ಪುಂಡಲಿಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಮಣ್ಣ ಬಗನಾಳ, ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ, ವೈದ್ಯಾಧಿಕಾರಿ ಡಾ. ಕೆ.ಎಸ್.ಧೂಳನ್ನರ, ಮಲ್ಲಪ್ಪ ಸಿಂಗಾಡಿ, ಪ್ರಭು ಮುಧೋಳ, ಉಮೇಶ ಪೂಜಾರಿ, ಮಹಾಲಿಂಗ ಬಳಗಾರ, ಶ್ರೀಶೈಲ ಮಠಪತಿ, ಶಿವಾನಂದ ನಾವಿ, ನಾಗಪ್ಪ ನಾವಿ ಪ್ರಭು ನಾವಿ, ಯೋಧ ಮುತ್ತಪ್ಪ ನಾವಿ ಸೇರಿದಂತೆ ಕುಟುಂಬಸ್ಥರು ಹಾಗೂ ಮಾಜಿ ಯೋಧರ ಸಂಘಟಣೆಯ ಪ್ರಮುಖರು ಭಾಗವಹಿಸಿದ್ದರು. ಶಿಕ್ಷಕ ಮಹಾಂತೇಶ ಬಡಿಗೇರ ಸ್ವಾಗತಿಸಿ, ನಿರೂಪಿಸಿದರು