ಸಾರಾಂಶ
ತರೀಕೆರೆ, ತಾಲೂಕಿನ ಲಕ್ಕವಳ್ಳಿ ಹೋಬಳಿ ಬರಗೇನಹಳ್ಳಿ, ಕೆಂಚಿಕೊಪ್ಪ, ಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭತ್ತದ ಗದ್ದೆಗಳಲ್ಲಿ ಕಂದು ಜಿಗಿ ಹುಳದ ಬಾಧೆ ಕಂಡು ಬಂದಿದ್ದು ಹತೋಟಿ ಕ್ರಮಗಳ ಕುರಿತು ಲಕ್ಕವಳ್ಳಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಘು ಕುಮಾರ್ ಮಾಹಿತಿ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ, ತರೀಕೆರೆ
ತಾಲೂಕಿನ ಲಕ್ಕವಳ್ಳಿ ಹೋಬಳಿ ಬರಗೇನಹಳ್ಳಿ, ಕೆಂಚಿಕೊಪ್ಪ, ಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭತ್ತದ ಗದ್ದೆಗಳಲ್ಲಿ ಕಂದು ಜಿಗಿ ಹುಳದ ಬಾಧೆ ಕಂಡು ಬಂದಿದ್ದು ಹತೋಟಿ ಕ್ರಮಗಳ ಕುರಿತು ಲಕ್ಕವಳ್ಳಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಘು ಕುಮಾರ್ ಮಾಹಿತಿ ನೀಡಿದ್ದಾರೆ.ಕೀಟಬಾಧೆ ಲಕ್ಷಣಗಳು: ಕೀಟ ಕಂದು ಬಣ್ಣದ ಜೀರಿಗೆ ಗಾತ್ರದ ರೆಕ್ಕೆ ಹೊಂದಿರುವ ಹುಳುವಾಗಿದ್ದು,ಇದರಿಂದ ಬಾಧಿತ ಗಿಡಗಳಲ್ಲಿ ಕಂದು ಜಿಗಿ ಹುಳುವು ಕಾಂಡದಿಂದ ಹಾಗೂ ಎಲೆಯಿಂದ ರಸ ಹೀರುವುದರಿಂದ ಬತ್ತ ಹಳದಿ ಬಣ್ಣಕ್ಕೆ ತಿರುಗಿ, ಗದ್ದೆ ಸುಟ್ಟಂತ ಕಾಣಿಸುತ್ತದೆ.
ಹತೋಟಿ ಕ್ರಮಗಳುಃ ಕೀಟ ಬಾಧಿತ ಗದ್ದೆಗೆ ಯೂರಿಯಾ ರಸಗೊಬ್ಬರ ಉಪಯೋಗಿಸಬಾರದು. ಗದ್ದೆಯಲ್ಲಿನ ನೀರನ್ನು ಬಸಿದು ಅಗತ್ಯ ಬಿದ್ದಾಗ ಮಾತ್ರ ನೀರನ್ನು ಹಾಯಿಸಬೇಕು. ಗಾಳಿ ಬೆಳಕು ಸರಾಗವಾಗಿ ಆಡುವುದರಿಂದ ರೋಗ ಹತೋಟಿಗೆ ಬರಲಿದೆ, ಔಷಧ ಸಿಂಪಡಣೆ ಸಂದರ್ಭದಲ್ಲಿ ನೀರನ್ನು ಗದ್ದೆಯಿಂದ ಹೊರಗೆ ಹಾಕಿ ಇಮಿಡಾ ಕ್ಲೋಪಿಡ್ 17.8 ಎಸ್ಸೆಲ್, 0.5 ಎಂ.ಎಲ್. ಲೀಟರ್ ಅಥವಾ ಕ್ಲೋರೋಪೈರಿಫಾಸ್ 50 ಇ.ಸಿ. 2.5 ಎಂ.ಎಲ್ /ಅಥವಾ ಅಸಿಪೆಟ್ ಶೇ.75, ಎಸ್.ಪಿ.2 ಗ್ರಾಂ / ಲೀಟರ್ ಅಥವಾ ಬುಪ್ರೋ ಫೇಜಿನ್ ಶೇ.75, ಎಸ್.ಪಿ. 1.5 ಎಂ.ಎಲ್. /ಲೀಟರ್ ಸಿಂಪಡಿಸಬೇಕು ಎಂದು ಮಾಹಿತಿ ನೀಡಿದ್ದಾರೆ.7ಕೆಟಿಆರ್.ಕೆ.8ಃ
ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿ ಬರಗೇನಹಳ್ಳಿ, ಕೆಂಚಿಕೊಪ್ಪ, ಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭತ್ತದ ಗದ್ದೆಗಳಲ್ಲಿ ಕಂದು ಜಿಗಿ ಹುಳದ ಭಾದೆ ಕಂಡು ಬಂದಿದ್ದು ಹತೋಟಿ ಕ್ರಮಗಳ ಬಗ್ಗೆ ಕೃಷಿ ಅಧಿಕಾರಿ ರಘುಕುಮಾರ್ ಮಾಹಿತಿ ನೀಡಿದ್ದಾರೆ.