ಸಾರಾಂಶ
ಬೆಂಗಳೂರು ಮತ್ತು ಮುಂಬೈ ಮುದ್ರಣ ಮುಖ್ಯಸ್ಥರು ವಸ್ತುಪ್ರದರ್ಶನದ ಬಗ್ಗೆ ಮಾಹಿತಿ ನೀಡಲಿದ್ದು, ಜಿಲ್ಲೆಯ ಮುದ್ರಣಕಾರರು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬಹುದು. ಇದೇ ಸಂದರ್ಭದಲ್ಲಿ ಭಾರತ್ ಆಯುಷ್ಮಾನ್ ಕಾರ್ಡ್ ಮತ್ತು ಕಾರ್ಮಿಕ ಇಲಾಖೆಯ ಶ್ರಮಿಕ್ ಕಾರ್ಡ್‌ಗಳನ್ನು ಮಾಡಿಸಿಕೊಡಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಆಲ್ ಇಂಡಿಯಾ ಫೆಡರೇಷನ್ ಆಫ್ ಮಾಸ್ಟರ್ ಪ್ರಿಂಟರ್ಸ್, ಕರ್ನಾಟಕ ರಾಜ್ಯ ಪ್ರಿಂಟರ್ಸ್ ಅಸೋಸಿಯೇಷನ್ ಇವರ ವತಿಯಿಂದ ಏ.24, 25, 26ರಂದು ಬೆಂಗಳೂರಿನ ಬಿಐಇಸಿ ಆವರಣದಲ್ಲಿ ನಡೆಯುವ ಬೃಹತ್ ಭಾರತ್ ಎಕ್ಸ್‌ಫೋ-2025 ಮುದ್ರಣ ಯಂತ್ರೋಪಕರಣಗಳ ವಸ್ತು ಪ್ರದರ್ಶನದ ಪೂರ್ವಭಾವಿ ಸಭೆ ಮಾ.9ರಂದು ಬೆಳಗ್ಗೆ 9 ಗಂಟೆಗೆ ನಗರದ ಕೆ.ವಿ.ಎಸ್. ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಜೆ.ಲಕ್ಷ್ಮೀನಾರಾಯಣ್ ತಿಳಿಸಿದರು.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುದ್ರಣ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದಂತೆ ಹಲವಾರು ಅತ್ಯಾಧುನಿಕ ರೀತಿಯ ಯಂತ್ರೋಪಕರಣಗಳ ಪ್ರದರ್ಶನ ನಡೆಯುವುದರಿಂದ ಅದರ ಬಗ್ಗೆ ಮಾಹಿತಿ ತಿಳಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬೆಂಗಳೂರು ಮತ್ತು ಮುಂಬೈ ಮುದ್ರಣ ಮುಖ್ಯಸ್ಥರು ವಸ್ತುಪ್ರದರ್ಶನದ ಬಗ್ಗೆ ಮಾಹಿತಿ ನೀಡಲಿದ್ದು, ಜಿಲ್ಲೆಯ ಮುದ್ರಣಕಾರರು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬಹುದು. ಇದೇ ಸಂದರ್ಭದಲ್ಲಿ ಭಾರತ್ ಆಯುಷ್ಮಾನ್ ಕಾರ್ಡ್ ಮತ್ತು ಕಾರ್ಮಿಕ ಇಲಾಖೆಯ ಶ್ರಮಿಕ್ ಕಾರ್ಡ್‌ಗಳನ್ನು ಮಾಡಿಸಿಕೊಡಲಾಗುವುದು ಎಂದರು.ಜಿಲ್ಲಾ ಮುದ್ರಣಕಾರರ ಸಂಘದ ಗೌರವಾಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ಮಾತನಾಡಿ, ಏ.24, 25, 26ರಂದು ಬೆಂಗಳೂರಿನ ಬಿ.ಐ.ಇ.ಸಿ. ಆವರಣದಲ್ಲಿ ನಡೆಯಲಿರುವ ಬೃಹತ್ ಭಾರತ್ ಎಕ್ಸ್‌ಪೋ-2025ರಲ್ಲಿ ಒಂದು ರೂ.ನಿಂದಿಡಿದು 10 ಕೋಟಿ ರು. ವರೆಗೆ ಮುದ್ರಣಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಪ್ರದರ್ಶಿಸಲಾಗುವುದು. 1997ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿತ್ತು, 27 ವರ್ಷಗಳ ಬಳಿಕ ಮತ್ತೆ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಜಿಲ್ಲಾ ಮುದ್ರಣಕಾರರು ಇದರ ಸದುಪಡೆದುಕೊಳ್ಳುವಂತೆ ಕೋರಿದರು.
ಸಂಘದ ರಾಜ್ಯ ಸಂಚಾಲಕ ಎಂ.ಎಸ್.ಸತೀಶ್, ಜಿಲ್ಲಾ ಕಾರ್ಯದರ್ಶಿ ಆರ್. ರವೀಂದ್ರ ಗೋಷ್ಠಿಯಲ್ಲಿದ್ದರು.