ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿ ಗ್ರಾಮಗಳ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ಮತದಾರರನ್ನು ಭೇಟಿ ಮಾಡಲಾಗುವುದು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.ನಗರದ ಕರ್ನಾಟಕ ಸಂಘದ ಕೆ.ವಿ.ಎಸ್ ಭವನದಲ್ಲಿ ಜಿಲ್ಲಾ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಬಹುಜನರು ದೇಶವನ್ನಾಳುವ ಸಾಮರ್ಥ್ಯ ಉಳ್ಳವರಾಗಿದ್ದಾರೆ ಎಂಬುದು ಉತ್ತರಪ್ರದೇಶದಲ್ಲಿ ಸಾಬಿತಾಗಿದೆ ಎಂದರು.
ಬಿಎಸ್ಪಿ ಪಕ್ಷದ ಸಂಸ್ಥಾಪಕ ಮಾನ್ಯವಾರ್ ಕಾನ್ಶೀರಾಂ ಮತ್ತು ರಾಜಕೀಯ ಪ್ರೇರಣಾಶಕ್ತಿ ಮಾಯಾವತಿ ತಮ್ಮ ಸಾಧನೆ ಮೂಲಕ ತೋರಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಗೊಳ್ಳುತ್ತಿದೆ ಎಂದು ನುಡಿದರು.ರಾಜಕೀಯ ಶಕ್ತಿಯಿಂದ ಮಾತ್ರ ಶೋಷಿತ ಸಮಾಜಗಳು ಉದ್ದಾರವಾಗಲು ಸಾಧ್ಯ ಎಂಬುದನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅಂದೇ ಹೇಳಿದ್ದಾರೆ. ಆದರೆ, ಇಂದಿಗೂ ಸಾಧ್ಯವಾಗಿಲ್ಲ, ಇನ್ನಾದರೂ ಜನ ಬಿಎಸ್ಪಿ ಸಂಘಟನೆಯಲ್ಲಿ ಕೈಜೋಡಿಬೇಕು ಎಂದು ಎಚ್ಚರಿಸಿದರು.
ಡಿ.6ರಂದು ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣದಿನವಿದೆ. ಅಂದು ಬಿಎಸ್ಪಿ ಪಕ್ಷದ ಭಾಗವಾಗಿರು ಬಾನ್ಶೇಫ್ ಸಂಘಟನೆಗೆ 50 ವರ್ಷಗಳು ತುಂಬಲಿದೆ. ದೊಡ್ಡ ಸಮಾರಂಭ ಮಾಡಿ ಸ್ಮರಿಸಲಾಗುವುದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಪ್ರತಿ ಗ್ರಾಮಗಳ ಮತದಾರರ ಬೂತ್ ಮಟ್ಟದಲ್ಲಿ ಪ್ರಚಾರ, ಸಂಘಟಿಸುವಕೆ ಮಾಡಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ನನ್ನ ಜನ ಚಲನಚಿತ್ರ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಉಸ್ತುವಾರಿಗಳಾದ ಹ.ರಾ.ಮಹೇಶ್, ಗಂಗಾಧರ್ ಬಹುಜನ್, ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗರಾಜು, ಜಿಲ್ಲಾಧ್ಯಕ್ಷ ಶಿವಶಂಕರ್, ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್, ಸೋದರ ಸಮಿತಿ ಅಧ್ಯಕ್ಷ ರವಿಗೌಡ, ಚಲುವರಾಜು, ವೀರಭದ್ರ, ಕುಮಾರ್, ಕುಮಾರ್, ವಜ್ರಮುನಿ ಮತ್ತಿತರರಿದ್ದರು.