ಸಾರಾಂಶ
ಹೊಸಕೋಟೆ: ಬಹುಜನ ಸಮಾಜ ಪಾರ್ಟಿ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸದಾ ಸಿದ್ಧವಾಗಿರುತ್ತದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಎಚ್.ನರಸಿಂಹಯ್ಯ ತಿಳಿಸಿದರು.
ಹೊಸಕೋಟೆ: ಬಹುಜನ ಸಮಾಜ ಪಾರ್ಟಿ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸದಾ ಸಿದ್ಧವಾಗಿರುತ್ತದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಎಚ್.ನರಸಿಂಹಯ್ಯ ತಿಳಿಸಿದರು.
ನಗರದಲ್ಲಿ ಬಹುಜನ ಸಮಾಜ ಪಕ್ಷದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಬಹುಜನ ಸಮಾಜ ಪಾರ್ಟಿ ಬಡವರ ಕಣ್ಣೀರು ಒರೆಸುವ ಪಕ್ಷವಾಗಿದೆ. ಅಧಿಕಾರ ಇರಲಿ, ಬಿಡಲಿ ಸದಾಕಾಲ ಜನಪರ ಕೆಲಸ ಮಾಡುತ್ತದೆ. ೩೦ ವರ್ಷಗಳ ನಂತರ ತಾಲೂಕಿನಲ್ಲಿ ಕಚೇರಿ ಪ್ರಾರಂಭ ಮಾಡಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಪಕ್ಷದ ಸಂಘಟನೆ ಕಾರ್ಯಾಚರಣೆ ಬಗ್ಗೆ ಪದಾಧಿಕಾರಿಗಳು ಪಕ್ಷದ ರಾಜ್ಯ ಕಚೇರಿಯಿಂದ ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಂಡು ಪಕ್ಷವನ್ನ ತಳಮಟ್ಟದಲ್ಲಿ ಕಟ್ಟಬೇಕು ಎಂದು ಹೇಳಿದರು.ಬಿಎಸ್ಪಿಆರ್ ತಾಲೂಕು ಅಧ್ಯಕ್ಷ ಬಲರಾಮ್ ಮಾತನಾಡಿ, ಪಕ್ಷದ ಎಲ್ಲಾ ಪದಾಧಿಕಾರಿಗಳು ಪಕ್ಷದ ತತ್ವ ಸಿದ್ಧಾಂತವನ್ನು ಅರಿತು ಒಗ್ಗಟ್ಟಾಗಿ ಭ್ರಷ್ಟಾಚಾರ ಮುಕ್ತ ನವ ಕರ್ನಾಟಕ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಘಟಿತರಾಗಿ ಪಕ್ಷದಲ್ಲಿ ತೊಡಗಿಸಿಕೊಂಡು ದುಡಿಯಬೇಕು ಎಂದರು.
ಈ ಸಂದರ್ಭದಲ್ಲಿ ಬಿಎಸ್‌ಪಿ ಪಕ್ಷದ ಜಿಲ್ಲಾಧ್ಯಕ್ಷ ನರಸಿಂಹರಾಜು, ಉಪಾಧ್ಯಕ್ಷ ನಾಗೇಶ್, ಜಿಲ್ಲಾ ಸಂಯೋಜಕ ನಂಜಪ್ಪ, ಖಜಾಂಚಿ ನರಸಿಂಹಮೂರ್ತಿ, ದೇವನಹಳ್ಳಿ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಉಪಾಧ್ಯಕ್ಷ ಮುನಿರಾಜು, ಪದಾಧಿಕಾರಿಗಳಾದ ಅಂಜನ್ ಬೌದ್, ಬಿ.ಎಂ.ನಾಗರಾಜ್, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಖಜಾಂಚಿ ಅಯ್ಯಪ್ಪ, ಜಯಪ್ರಕಾಶ್, ಸಂಪಂಗಿ, ಅನಕೊಂಡನಹಳ್ಳಿ ಹೋಬಳಿ ಅಧ್ಯಕ್ಷ ರಮೇಶ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.ಫೋಟೋ : 9 ಹೆಚ್‌ಎಸ್‌ಕೆ 2
ಹೊಸಕೋಟೆಯಲ್ಲಿ ಬಹುಜನ ಸಮಾಜ ಪಕ್ಷದ ನೂತನ ಕಚೇರಿಯನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ನರಸಿಂಹಯ್ಯ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉದ್ಘಾಟಿಸಿದರು.