ಗೀತಾ ಒಳ್ಳೆಯ ರೀತಿ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ತಂಟೆಗೆ ಬಂದರೆ ಮತದಾರರು ಉತ್ತರ ಕೊಡ್ತಾರೆ. ಕಾಂಗ್ರೆಸ್ ಬೇರೆಯರ ಮನೆ ಒಡೆದಿದೆ ಅಂತಾ ಮತ ಕೇಳಲ್ಲ. ನಮ್ಮ ಗ್ಯಾರಂಟಿ ಯೋಜನೆ ಕೈ ಹಿಡಿಯುತ್ತವೆ. ಒಂದು ಸರಿ ದೆಹಲಿಯಿಂದ ಪೋನ್ ಬಂದ್ರೆ ನನ್ನ ಮನಸು ಕರಗುತ್ತದೆ ಅಂತಾರೆ. ಈಶ್ವರಪ್ಪ ಅವರೇ ನಿಮ್ಮ ಗೌರವ ಉಳಿಸಿಕೊಳ್ಳಿ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಯಡಿಯೂರಪ್ಪ ಹಾಗೂ ಅವರ ಮಕ್ಕಳು ಈಶ್ವರಪ್ಪರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಗೀತಾ ಡಮ್ಮಿ ಕ್ಯಾಂಡಿಡೇಟ್ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪ ಡಬ್ಬ ಸೌಂಡ್ ಮಾಡುತ್ತಿದೆ. ಅವರು ಕ್ಯಾಂಡಿಡೇಟ್ ಆಗಲ್ಲ. ಈಶ್ವರಪ್ಪ ಅವರಿಗೆ ಬಸ್ಟ್ಯಾಂಡ್ ನಲ್ಲಿ ಕಣಿ ಹೇಳೋದು ಒಳ್ಳೆದು ಎಂದು ಕುಟುಕಿದರು. ಈಶ್ವರಪ್ಪರಿಗೆ ಪೊಲಿಟಿಕಲ್ ಸುಪಾರಿ ಯಡಿಯೂರಪ್ಪ ಕೊಟ್ಟಿದ್ದಾರೆ. ಈಶ್ವರಪ್ಪರನ್ನು ಹಿಂದುಳಿದ ವರ್ಗದ ಮತ ಒಡಿ ಅಂತಾ ಕಳುಹಿಸಿದ್ದಾರೆ. ಜಾತಿ ರಾಜಕಾರಣ ಮಾಡಿ ಇವರು ಹೊಲಸು ಮಾಡಿದ್ದಾರೆ. ಈಶ್ವರಪ್ಪ ಬೇರೆ ಪಕ್ಷದಲ್ಲಿ ನೊಣ ಹುಡುಕುವ ಮುನ್ನ ಅವರ ತಟ್ಟೆಯಲ್ಲಿ ಹೆಗ್ಗಣ ಕೊಳೆತು ಬಿದ್ದಿದೆ. ಅದನ್ನು ಮೊದಲು ನೋಡಿಕೊಳ್ಳಲಿ. ಈಶ್ವರಪ್ಪ ಮಗನಿಗೆ ಟಿಕೆಟ್‌ ಕೊಡಿಸುವ ತಾಕತ್ತು ಇದ್ದರೆ ಅದರ ಬಗ್ಗೆ ಮಾತನಾಡಲಿ ಎಂದು ಹರಿಹಾಯ್ದರು.

ಗೀತಾ ಒಳ್ಳೆಯ ರೀತಿ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ತಂಟೆಗೆ ಬಂದರೆ ಮತದಾರರು ಉತ್ತರ ಕೊಡ್ತಾರೆ. ಕಾಂಗ್ರೆಸ್ ಬೇರೆಯರ ಮನೆ ಒಡೆದಿದೆ ಅಂತಾ ಮತ ಕೇಳಲ್ಲ. ನಮ್ಮ ಗ್ಯಾರಂಟಿ ಯೋಜನೆ ಕೈ ಹಿಡಿಯುತ್ತವೆ. ಒಂದು ಸರಿ ದೆಹಲಿಯಿಂದ ಪೋನ್ ಬಂದ್ರೆ ನನ್ನ ಮನಸು ಕರಗುತ್ತದೆ ಅಂತಾರೆ. ಈಶ್ವರಪ್ಪ ಅವರೇ ನಿಮ್ಮ ಗೌರವ ಉಳಿಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.

ಬಿಎಸ್‌ವೈ ಕುಟುಂಬ ಉದಾಹರಣೆ:

ರಾಘವೇಂದ್ರ ಮಾತನಾಡಬೇಕಾದರೆ ಅವರ ತಲೆ ಇಂಬ್ಯಾಲೆನ್ಸ್ ಆಗಿದೆ ಅನ್ನಿಸುತ್ತದೆ. ಯಾರ ಕುಟುಂಬದಲ್ಲಿ ಸಿಎಂ ಇದ್ದಾರೆ, ಶಾಸಕ ಇದ್ದಾರೆ, ಮಂತ್ರಿ ಇದ್ದಾರೆ ಅದಕ್ಕೆ ಕುಟುಂಬ ರಾಜಕಾರಣ ಅಂತಾರೆ ಎಂದಿದ್ದಾರೆ. ಕುಟುಂಬ ರಾಜಕಾರಣಕ್ಕೆ ಅರ್ಥಪೂರ್ಣ ಉದಾಹರಣೆ ಯಡಿಯೂರಪ್ಪ ‌ಕುಟುಂಬ. ಈ ರಾಜ್ಯದಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದೇ ಯಡಿಯೂರಪ್ಪ ಕುಟುಂಬದಿಂದ ಎಂದು ಕಿಡಿಕಾರಿದರು.-------------