ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನ ಸಂತ್ರಸ್ತರ ಪುನರ್ವಸತಿಗಾಗಿ ಅಭಿವೃದ್ಧಿಪಡಿಸಿರುವ ನವನಗರದ ಯುನಿಟ್-1 ಮತ್ತು 2ರಲ್ಲಿ ಹಂಚಿಕೆಯಾದ ನಿವೇಶನಗಳು ಖಾಲಿ ಉಳಿದಿರುವದರಿಂದ ಗಿಡಗಂಟೆಗಳು ಬೆಳೆದು, ಅಕ್ಕಪಕ್ಕದ ನಿವೇಶನದಾರರಿಗೆ ಜೀವಜಂತುಗಳ ಕಾಟ ಹಾಗೂ ಅಸ್ವಚ್ಛತೆಯಿಂದ ತೊಂದರೆಯಾಗುತ್ತಿದೆ.

ಹೀಗಾಗಿ ಸಂಬಂಧಪಟ್ಟ ನಿವೇಶನದಾರರು ಪ್ರಕಟಣೆ ಹೊರಡಿಸಿದ ತಿಂಗಳೊಳಗಾಗಿ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ಸೂಚಿಸಿದ್ದಾರೆ.ನಿಗದಿತ ಅವಧಿಯಲ್ಲಿ ಸ್ವಚ್ಚಗೊಳಿಸದಿದ್ದಲ್ಲಿ ನಿಯಮಾನುಸಾರ ನಿವೇಶನ ಹಂಚಿಕೆ ರದ್ದುಪಡಿಸುವುದು ಅಥವಾ ದಂಡ ವಿಧಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.