ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದ ಬೋಧಿಸತ್ವ ಬುದ್ಧ ಫೌಂಡೇಶನ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ 2569ನೇ ಬುದ್ಧ ಜಯಂತಿ ಪ್ರಯುಕ್ತ ಉಡುಪಿ ಜಿಲ್ಲಾ ಆಸ್ಪತ್ರೆಯ 150 ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.ಜಿಲ್ಲಾ ಸರ್ಜನ್ ಡಾ.ಅಶೋಕ್ ಎಚ್. ಮತ್ತು ವೈದ್ಯಾಧಿಕಾರಿ ಡಾ.ವಾಸುದೇವ್ ಎಸ್. ಫೌಂಡೇಶನ್‌ನ ಈ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭ ಬೋಧಿಸತ್ವ ಬುದ್ಧ ಫೌಂಡೇಶನ್ ಅಧ್ಯಕ್ಷ ಶೇಖರ್ ಹಾವಂಜೆ, ಕಾರ್ಯದರ್ಶಿ ಶರತ್ ಎಸ್., ಟ್ರಸ್ಟಿಗಳಾದ ವಿಠಲ್, ಪ್ರತಾಪ್ ಹಾಗೂ ಪ್ರಕಾಶ್ ಬಿ.ಬಿ., ಪಕೀರಪ್ಪ ಎಂ., ಸಂಜೀವ ನಾಯ್ಕ್ ಕುಕ್ಕೆಹಳ್ಳಿ, ಗೋಪಾಲ್ ಶಿವಪುರ, ರಮೇಶ್ ಮಾಬಿಯಾನ್, ಸುಜಾತ ಎಸ್. ಹಾವಂಜೆ, ವಿಜಯ್ ಬಾರ್ಕೂರು, ಧಮ್ಮ ಪ್ರಾಧ್ಯಾಪಕಿ ಪೃಥ್ವಿ ಒಳಗುಡ್ಡೆ, ವನಿತಾ ಇನ್ನಿತರರು ಉಪಸ್ಥಿತರಿದ್ದರು.ನಂತರ ಹಾವಂಜೆ ವಿಹಾರದಲ್ಲಿ ಧಮ್ಮಾಚಾರಿಗಳಾದ ಶಂಭು ಸುವರ್ಣರ ನೇತೃತ್ವದಲ್ಲಿ ಬುದ್ಧ ವಂದನೆ ಮತ್ತು ಮೈತ್ರಿ ಧ್ಯಾನ ನೆರವೇರಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು. ಜಯಶೀಲ ಬಿ. ರೋಟೆ ನಿರೂಪಿಸಿದರು. ಶರತ್ ಎಸ್. ಹಾವಂಜೆ ಸ್ವಾಗತಿಸಿದರು. ವಿಠಲ್ ಸಾಲಿಕೇರಿ ವಂದಿಸಿದರು.ಅನಂತರ ನೇಜಾರಿನ ಸ್ಪಂದನ ವಿಶೇಷ ಚೇತನ ಮಕ್ಕಳು ಹಾಗೂ ಸಾಲ್ಮರದ ವಿಶೇಷ ಚೇತನ ಮಕ್ಕಳೊಂದಿಗೆ ಸಹಭೋಜನ ಮಾಡಲಾಯಿತು.