ಬುದ್ಧ ಪೂರ್ಣಿಮೆ ಪ್ರಯುಕ್ತ ಇಂದು ಬುದ್ಧ ಪ್ರತಿಮೆ ಮೆರವಣಿಗೆ: ಮೋಹನ್ ಕುಮಾರ್

| Published : May 23 2024, 01:05 AM IST

ಬುದ್ಧ ಪೂರ್ಣಿಮೆ ಪ್ರಯುಕ್ತ ಇಂದು ಬುದ್ಧ ಪ್ರತಿಮೆ ಮೆರವಣಿಗೆ: ಮೋಹನ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಬೌದ್ಧ ಮಹಾಸಭಾ, ತಾಲೂಕು ಯುವ ಘಟಕದಿಂದ 2568 ನೇ ವೈಶಾಖ ಶುಕ್ಲ ಬುದ್ಧ ಪೂರ್ಣಿಮೆ ಪ್ರಯುಕ್ತ ಮೇ 23 ಬೆಳಗ್ಗೆ ಪಟ್ಟಣದ ಬಿ.ಆರ್. ಅಂಬೇಡ್ಕರ್ ಭವನದಿಂದ ಪ್ರವಾಸಿ ಮಂದಿರದ ಮುಂಭಾಗದ ಬಿ.ಆರ್.ಅಂಬೇಡ್ಕರ್ ಪುತ್ಥಳಿವರೆಗೆ ಬುದ್ಧ ಪ್ರತಿಮೆ ಮೆರವಣಿಗೆ ನಡೆಯಲಿದೆ.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಬುದ್ಧ ಪೂರ್ಣಿಮ ಪ್ರಯುಕ್ತ ಮೇ 23ರಂದು ಪಟ್ಟಣದಲ್ಲಿ ಬುದ್ಧ ಪ್ರತಿಮೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ತಾಲೂಕು ಅಧ್ಯಕ್ಷ ಎಂ.ಪಿ ಮೋಹನ್‌ಕುಮಾರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಬೌದ್ಧ ಮಹಾಸಭಾ, ತಾಲೂಕು ಯುವ ಘಟಕದಿಂದ 2568 ನೇ ವೈಶಾಖ ಶುಕ್ಲ ಬುದ್ಧ ಪೂರ್ಣಿಮೆ ಪ್ರಯುಕ್ತ ಮೇ 23 ಬೆಳಗ್ಗೆ ಪಟ್ಟಣದ ಬಿ.ಆರ್. ಅಂಬೇಡ್ಕರ್ ಭವನದಿಂದ ಪ್ರವಾಸಿ ಮಂದಿರದ ಮುಂಭಾಗದ ಬಿ.ಆರ್.ಅಂಬೇಡ್ಕರ್ ಪುತ್ಥಳಿವರೆಗೆ ಬುದ್ಧ ಪ್ರತಿಮೆ ಮೆರವಣಿಗೆ ನಡೆಯಲಿದೆ ಎಂದರು.

ಬುದ್ಧ ಪ್ರತಿಮೆ ಅಂಬೇಡ್ಕರ್ ಪುತ್ಥಳಿವರೆಗೆ ಮೆರವಣಿಗೆ ಹೊರಟು ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿದ ಬಳಿಕ ತಾಲೂಕಿನ ಬಾಚನಹಳ್ಳಿ ಬಳಿ ಇರುವ ಮಿಲಿಂದ ಬುದ್ಧ ವಿಹಾರಕ್ಕೆ ತೆರಳಿ ಬುದ್ಧ ವಂದನೆಯನ್ನು ಸಲ್ಲಿಸಲಾಗುವುದು. ಕಾರ್ಯಕ್ರಮದಲ್ಲಿ ಭಂತೇಜಿ, ಬೌದ್ಧಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ದರ್ಶನ್ ಬಿ. ಸೋಮಶೇಖರ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಿದ್ದಾರ್ಥ ಗೋತಮನ ಹುಟ್ಟು, ಜ್ಞಾನೋದಯ ಮತ್ತು ಮಹಾ ಪರಿನಿರ್ವಾಣ ಈ ಮೂರು ಘಟನೆಗಳು ಮೇ ತಿಂಗಳ ವೈಶಾಖ ಪೂರ್ಣಿಮೆಯ ದಿನದಂದು ಸಂಭವಿಸಿರುವುದು ವಿಶೇಷವಾಗಿದೆ. ವಿಶ್ವ ಶಾಂತಿಗಾಗಿ, ಮಾನವ ಕೋಟಿ ವಿಮೋಚನೆಗಾಗಿ, ಪರಿಸರ ಉಳಿವು ರಕ್ಷಣೆಗಾಗಿ, ಮಳೆ ಬೆಳೆಗಾಗಿ ಈ ಪವಿತ್ರ 2568ನೇ ವೈಶಾಖ ಶುಕ್ಲ ಬುದ್ಧ ಪೂರ್ಣಿಮೆ ಉತ್ಸವ, ಬುದ್ಧ ಪುತ್ಥಳಿ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಿದ್ದಾರ್ಥರು 29ನೇ ವಯಸ್ಸಿನಲ್ಲಿ ಗೃಹತ್ಯಾಗ ಮಾಡಿ ಆರು ವರ್ಷಗಳ ಕಠಿಣ ತಪಸ್ಸು ಹಾಗೂ ಮಹಾ ಸಂಕಲ್ಪದ ಪ್ರತಿಫಲವಾಗಿ 35ನೇ ವಯಸ್ಸಿನಲ್ಲಿ ಬಿಹಾರದ ಬೋಧಗಯಾ ಬೋಧಿವೃಕ್ಷ ಕೆಳಗೆ ಸಂಭೋದಿಯನ್ನು ಪ್ರಾಪ್ತಿ ಮಾಡಿ ಬುದ್ಧನಾದರು ಎಂದರು.

ಜಗತ್ತಿಗೆ ಶಾಂತಿ ಮಂತ್ರವನ್ನು ತಿಳಿಸಿದ ಭಗವಾನ್ ಬುದ್ಧನ ಶಾಂತಿ ಮಂತ್ರ ಪ್ರಸ್ತುತದಲ್ಲಿ ಅನಿವಾರ್ಯತೆ ಇದ್ದು, ಬುದ್ದರ ಬೋಧನೆಯಿಂದ ಸಕಲ ಜೀವಿಗಳು ಜಾಗೃತರಾಗಲಿ ಹಾಗೂ ಅದನ್ನು ಜಗತ್ತಿಗೆ ತಿಳಿಸುವ ಆಶಯದೊಂದಿಗೆ ಮಳವಳ್ಳಿ ತಾಲೂಕಿನ ಬುದ್ದರ ಅನುಯಾಯಿಗಳು ಈ ಜಾಗತಿಕ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಲಾಗುತಿದೆ ಎಂದರು.

ತಾಲೂಕಿನ ವಿವಿಧ ಜನಪರ ಸಂಘಟನೆಗಳ ಮುಖಂಡರು, ಬುದ್ದ ಹಾಗೂ ಡಾ. ಬಿ.ಆರ್ ಅಂಬೇಡ್ಕರ್‌ರವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ಸುದ್ದಿಗೋಷ್ಠೀಯಲ್ಲಿ ಉಪಾಧ್ಯಕ್ಷ ಕೆ.ಜೆ.ರಘುರಾಜ್, ಲೆಕ್ಕಪರಿಶೋಧಕ ಆರ್ .ಚಂದ್ರಶೇಖರ್ , ಸಂಘಟನೆ ಕಾಯ೯ದಶಿ೯ ಕಿರಣ್ ಕಲ್ಲಾರೇಪುರ, ಖಜಾಂಚಿ ಅರುಣ್, ಜಿಲ್ಲಾ ಸಮಿತಿ ಸದಸ್ಯ ಯತೀಶ್ , ಶ್ರೀಧರ್ ಸೇರಿದಂತೆ ಇತರರು ಇದ್ದರು.