ಸಮಾತನೆ ದಾರಿ ತೋರಿದ ಬುದ್ಧ

| Published : May 13 2025, 01:08 AM IST

ಸಾರಾಂಶ

ಯಾರ ಮಧ್ಯಸ್ಥಿತಿಕೆಯಿಲ್ಲದೆ ನೇರವಾಗಿ ಸರಿ ದಾರಿಯಲ್ಲಿ ನಡೆಯುವುದನ್ನು ತಿಳಿಸುವುದೇ ದಮ್ಮ

ಕನ್ನಡಪ್ರಭ ವಾರ್ತೆ, ತುಮಕೂರುನಗರದ ಅಮಾನಿಕೆರೆ ಆವರಣದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಶಾಂತಿಯ ಅವಧೂತ, ಸರ್ವ ಸಮಾನತೆಯ ದಾರಿಯನ್ನು ತೋರಿಸಿ ಕೊಟ್ಟ ಭಗವಾನ್ ಬುದ್ಧ ಪೌರ್ಣಮಿಯನ್ನು ಆತನ ಆಶಯದಂತೆ ಆಚರಿಸಲಾಯಿತು.ಬುದ್ಧ ಪೌರ್ಣಮಿಯ ಕುರಿತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ ಬುದ್ಧರ ಬೋಧನೆ ಸರ್ವ ಕಾಲಿಕ, ಸರಳ ಮತ್ತು ನೈಜವಾದದ್ದು. ಯಾರ ಮಧ್ಯಸ್ಥಿತಿಕೆಯಿಲ್ಲದೆ ನೇರವಾಗಿ ಸರಿ ದಾರಿಯಲ್ಲಿ ನಡೆಯುವುದನ್ನು ತಿಳಿಸುವುದೇ ದಮ್ಮ ಎಂದರು.ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಕೆಸ್ತೂರು ನರಸಿಂಹಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀನಾರಾಯಣ್, ಜಿಲ್ಲಾ ಗೌರವಾಧ್ಯಕ್ಷ ಗೂಳೂರು ರಾಜಣ್ಣ, ಜಿಲ್ಲಾ ಸಹ ಕಾರ್ಯದರ್ಶಿ ಸಿದ್ಧಲಿಂಗಯ್ಯ ಕೆ.ಎನ್., ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಟೈಲರ್ ಜಗದೀಶ್, ನಗರಾಧ್ಯಕ್ಷ ಮನು ಟಿ.ಎಲ್, ಕಾರ್ಮಿಕರ ಘಟಕದ ತಾಲೂಕು ಅಧ್ಯಕ್ಷ ಶಿವಣ್ಣ ಕೊತ್ತಿಹಳ್ಳಿ, ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಜಬಿನೇಷನ್, ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಲಾಸ್ ಅಹಮ್ಮದ್, ಅಲ್ಪ ಸಂಖ್ಯಾತರ ಯುವ ಘಟಕದ ಜಿಲ್ಲಾಧ್ಯಕ್ಷ ಮೊಯಿನ್ ಅಹಮ್ಮದ್, ಪದಾಧಿಕಾರಿಗಳಾದ ಆಟೋ ಕುಮಾರ್, ಹನುಮನರಸಯ್ಯ, ದೊಡ್ಡರಂಗಯ್ಯ, ಕೃಷ್ಣಮೂರ್ತಿ, ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.