ಸಾರಾಂಶ
ಮೂಲ ಭಾರತೀಯರಿಗೆ ಬುದ್ಧ ಮತ್ತು ಆತನ ಧಮ್ಮ ಮತ್ತು ಇವರು ಬೋಧಿಸಿದ ಬೋಧನೆಗಳು, ಜೀವನದಲ್ಲಿ ನಡೆದುಕೊಂಡ ನಡೆ-ನುಡಿ ಕುರಿತು ಸರ್ವರಿಗೂ ತಿಳಿಹೇಳಬೇಕು ಮತ್ತು ಸತ್ಯ ಮಾರ್ಗದಲ್ಲಿ ಪ್ರತಿ ಮಾನವರು ಬಾಳಬೇಕು ಎಂಬ ಉದ್ದೇಶದೊಂದಿಗೆ ಬುದ್ಧ ಭಾರತ ಫೌಂಡೇಷನ್ ವತಿಯಿಂದ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಭಗವಾನ್ ಗೌತಮ ಬುದ್ಧರ ೨೫೬೮ನೇ ಬುದ್ಧ ಪೂರ್ಣಿಮೆ ಕಾರ್ಯಕ್ರಮದ ಅಂಗವಾಗಿ ಮೇ ೨೩ರ ಗುರುವಾರ ಬೆಳಗ್ಗೆ ೧೧ ಗಂಟೆಗೆ ಶ್ರೀರಂಗಪಟ್ಟಣ ತಾಲೂಕಿನ ನೇರಲಕೆರೆ ಗ್ರಾಮದಲ್ಲಿ ಚಿಂತನಗೋಷ್ಠಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬುದ್ಧ ಭಾರತ ಫೌಂಡೇಶನ್‌ನ ಜೆ.ರಾಮಯ್ಯ ತಿಳಿಸಿದರು.ಮೂಲ ಭಾರತೀಯರಿಗೆ ಬುದ್ಧ ಮತ್ತು ಆತನ ಧಮ್ಮ ಮತ್ತು ಇವರು ಬೋಧಿಸಿದ ಬೋಧನೆಗಳು, ಜೀವನದಲ್ಲಿ ನಡೆದುಕೊಂಡ ನಡೆ-ನುಡಿ ಕುರಿತು ಸರ್ವರಿಗೂ ತಿಳಿಹೇಳಬೇಕು ಮತ್ತು ಸತ್ಯ ಮಾರ್ಗದಲ್ಲಿ ಪ್ರತಿ ಮಾನವರು ಬಾಳಬೇಕು ಎಂಬ ಉದ್ದೇಶದೊಂದಿಗೆ ಬುದ್ಧ ಭಾರತ ಫೌಂಡೇಷನ್ ವತಿಯಿಂದ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬುದ್ಧ ಮತ್ತು ಆತನ ಧಮ್ಮ ಕುರಿತು ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಡಾ. ಬಿ.ಆರ್.ಅಂಬೇಡ್ಕರ್ ಬುದ್ಧ ಧಮ್ಮ ಸ್ವೀಕಾರ ಮಾಡಿದ್ದು ಏಕೆ?, ಎಂಬ ವಿಷಯವಾಗಿ ಅಂಬೇಡ್ಕರ್ ವಾದಿ ಪ್ರೊ. ಬಿ.ಪಿ.ಮಹೇಶ್ ಚಂದ್ರಗುರು ಅವರು ವಿಚಾರ ಮಂಡನೆ ಮಾಡುತ್ತಾರೆ. ಹಾಗೆಯೇ ಪರಿಶಿಷ್ಟರು ಏಕೆ ಬೌದ್ಧ ಧಮ್ಮವನ್ನು ಸ್ವೀಕಾರ ಮಾಡುತ್ತಿಲ್ಲ, ಇದಕ್ಕೆ ಕಾರಣ ಮತ್ತು ಪರಿಹಾರಗಳ ಕುರಿತು ಡಿಎಸ್‌ಎಸ್ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಲಿದ್ದಾರೆ. ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಸಿಐಟಿಯು ಸಿ.ಕುಮಾರಿ, ಬಿಎಸ್‌ಐ ಜಿಲ್ಲಾಧ್ಯಕ್ಷ ಅನ್ನದಾನಿ, ತಾಲೂಕು ಅಧ್ಯಕ್ಷ ಬಸವಯ್ಯ ಹಾಗೂ ನೇರಲಕೆರೆ ಗ್ರಾಮದ ಶೋಂಭಯ್ಯ, ಮಹದೇವಯ್ಯ, ರಮೇಶ್, ಗ್ರಾಪಂ ಅಧ್ಯಕ್ಷರು ಮತ್ತು ಸುರೇಶ್, ಮಾಜಿ ತಾಪಂ ಸದಸ್ಯರು ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ ೧ ಗಂಟೆಗೆ ಉಚಿತ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು.ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಿ.ಬಸವರಾಜು, ವಕೀಲ ಬೂದನೂರು ಬೊಮ್ಮಯ್ಯ, ನಗರಸಭೆ ಮಾಜಿ ಸದಸ್ಯ ಅಮ್ಜದ್‌ಪಾಷಾ, ಕರುನಾಡ ವೇದಿಕೆಯ ಚಂದ್ರು, ಮುಖಂಡರಾದ ನಿಂಗಪ್ಪ ಹುಳ್ಳೇನಹಳ್ಳಿ, ಪ್ರದೀಪ ಗೋಷ್ಠಿಯಲ್ಲಿದ್ದರು.