ಸಾರಾಂಶ
ಯುವಕ ಯುವತಿಯರು ತಂದೆ ತಾಯಿಗಳು ಅಪಾರ ಕಾಳಜಿ ಇಟ್ಟು ನಿಮ್ಮ ಸಮಗ್ರ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ನಿಮ್ಮ ಬೆಳವಣಿಗೆಯೇ ನಿಮ್ಮ ತಂದೆ ತಾಯಿಗಳ ಮುಂಗಡ ಪತ್ರವಾಗಿದೆ. ನೀವು ಶ್ರಮ ವಿಭಜನೆ ಮಾಡಿ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಮಾಡಿ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ನೀವು ನಿಮ್ಮದೇ ಆದ ಕ್ರಮ ಅಳವಡಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಹಲಗೂರು
ಬಜೆಟ್ ಮುಂಗಡಪತ್ರ ಜೀವನದ ವಿನ್ಯಾಸಗಳ ಆಲೋಚನೆಗಳಾಗಿವೆ. ನಮ್ಮ ಆಲೋಚನೆಗಳಿಗೆ ತಕ್ಕಂತೆ ಜೀವನ ರೂಪಿಸಿಕೊಳ್ಳಲು ನಿರ್ವಹಣೆಯ ಲೆಕ್ಕಾಚಾರವಾಗಿರಬೇಕು ಎಂದು ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಐಕ್ಯೂ ಎಸಿ ಮತ್ತು ಅರ್ಥಶಾಸ್ತ್ರ ವಿಭಾಗ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಬುಧವಾರ ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಒಂದು ರಾಷ್ಟ್ರ, ರಾಜ್ಯ ಕುಟುಂಬ ಅಥವಾ ವ್ಯವಸ್ಥೆಗಾಗಲಿ ಒಬ್ಬ ವ್ಯಕ್ತಿ ಅಂದಾಜಿಲ್ಲದೆ ಯಾವುದನ್ನು ಬೆಳೆಸಲು ಹಾಗೂ ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ. ನಮ್ಮ ಆದಾಯಕ್ಕಿಂತ ಹೆಚ್ಚಿನ ಜೀವನ ಕ್ರಮ ನಮ್ಮದಾಗಬಾರದು ಎಂದರು.ಯುವಕ ಯುವತಿಯರು ತಂದೆ ತಾಯಿಗಳು ಅಪಾರ ಕಾಳಜಿ ಇಟ್ಟು ನಿಮ್ಮ ಸಮಗ್ರ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ನಿಮ್ಮ ಬೆಳವಣಿಗೆಯೇ ನಿಮ್ಮ ತಂದೆ ತಾಯಿಗಳ ಮುಂಗಡ ಪತ್ರವಾಗಿದೆ. ನೀವು ಶ್ರಮ ವಿಭಜನೆ ಮಾಡಿ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಮಾಡಿ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ನೀವು ನಿಮ್ಮದೇ ಆದ ಕ್ರಮ ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ಮಾತನಾಡಿ, ನಾವುಗಳು ದೇಶದ ಅಭಿವೃದ್ಧಿಯಲ್ಲಿ ನಿರ್ವಹಣಾ ವೆಚ್ಚ ಹಾಗೂ ಬಂಡವಾಳ ವೆಚ್ಚಗಳ ಬಗ್ಗೆ ಗಮನ ಹರಿಸಬೇಕು. ನಾಳೆಯ ಭವಿಷ್ಯತ್ತಿನ ಕಡೆ ಮುಂದಾಲೋಚನೆ ಇರಬೇಕು ಎಂದರು.ಉಪನ್ಯಾಸಕಿ ಡಾ.ಸೀಮಾ ಕೌಸರ್ ಮಾತನಾಡಿ, ಬಜೆಟ್ ಎಂಬುದು ಜೀವನದ ಒಂದು ಯೋಜನೆ. ಇಂದಿನ ಸಂಪನ್ಮೂಲ ವ್ಯಕ್ತಿಗಳು ಅಪಾರ ಜ್ಞಾನ ಹೊಂದಿರುತ್ತಾರೆ ಎಂದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ತಾರಾ ಜಯಲಕ್ಷ್ಮಿ, ಲೆಕ್ಕಾಚಾರವಿಲ್ಲದ ಜೀವನ ಆದಾಯ ಶೂನ್ಯವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಶಂಕರೇಗೌಡ, ಮಹೇಶ್ ಬಾಬು, ಪ್ರೊ.ಗುರುಪ್ರಸಾದ್, ರವಿ, ಮಮತಾ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಧಾಬಿದರಿ, ಕಾಲೇಜಿನ ಅಧಿಕಾರ ಕುಮಾರಸ್ವಾಮಿ, ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎಲ್ಲಾ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.