ಸಾರಾಂಶ
ಶಾಸ್ತ್ರ ಹೇಳಲು ಹಣ ಕೇಳಿದಾಗ ಪಕ್ಕದ ಮನೆಯವರಿಗೆ ಹಣ ಕೇಳಲು ಪೋನ್ ಮಾಡಿದ ಸಮಯದಲ್ಲಿ ಮನೆಯಲ್ಲಿದ್ದ ಬೀರುವಿನಲ್ಲಿ 5 ಲಕ್ಷ ಹಣ ಹಾಗೂ 20 ಗ್ರಾಂ ಬಂಗಾರವನ್ನು ಹಾಡು ಹಗಲ ದೋಚಿ ಪರಾರಿಯಾಗಿದ್ದಾನೆ.
ಸೂಲಿಬೆಲೆ: ಇಲ್ಲಿನ ಚನ್ನಬೈರೇಗೌಡ ನಗರದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಶಾಸ್ತ್ರ ಹೇಳುವ ನೆಪದಲ್ಲಿ ಬಂದ ಬುಡುಬುಡಿಕೆ ದಾಸಯ್ಯ ವೇಷದಾರಿ 5 ಲಕ್ಷ ನಗದು ಹಾಗೂ 20 ಗ್ರಾಂ ಬಂಗಾರವನ್ನು ಎಗರಿಸಿ ಪರಾರಿಯಾಗಿರುವ ದೂರು ಸ್ಥಳೀಯ ಠಾಣೆಯಲ್ಲಿ ದಾಖಲಾಗಿದೆ.
ಪಟ್ಟಣದ ಲೀಲಾವತಿ ಎಂಬುವರು ಗುರುವಾರ ಬೆಳಿಗ್ಗೆ ಬುಡುಬಡಿಕೆ ದಾಸಯ್ಯನ ಬಳಿ ಶಾಸ್ತ್ರ ಕೇಳುವ ಸಮಯದಲ್ಲಿ ಇಬ್ಬರು ಗಂಡು ಮಕ್ಕಳು ಹಾಗೂ ಲೀಲಾವತಿ ಮನೆಯಲ್ಲಿ ಇದ್ದರು ಶಾಸ್ತ್ರ ಹೇಳಲು ಹಣ ಕೇಳಿದಾಗ ಪಕ್ಕದ ಮನೆಯವರಿಗೆ ಹಣ ಕೇಳಲು ಪೋನ್ ಮಾಡಿದ ಸಮಯದಲ್ಲಿ ಮನೆಯಲ್ಲಿದ್ದ ಬೀರುವಿನಲ್ಲಿ 5 ಲಕ್ಷ ಹಣ ಹಾಗೂ 20 ಗ್ರಾಂ ಬಂಗಾರವನ್ನು ಹಾಡು ಹಗಲ ದೋಚಿ ಪರಾರಿಯಾಗಿದ್ದಾನೆ. ಘಟನೆ ಬೆಳಿಗ್ಗೆ 9 ಸಮಯದಲ್ಲಿ ನೆಡೆದಿದೆ ಎನ್ನಲಾಗಿದ್ದು 10 ಗಂಟೆ ಸಮಯದಲ್ಲಿ ಮನೆಯವರ ಗಮನಕ್ಕೆ ಬಂದಿದೆ ಎನ್ನಲಾಗಿ ದೂರಿನಲ್ಲಿ ತಿಳಿಸಿದ್ದಾರೆ.ಸೂಲಿಬೆಲೆ ಪೋಲಿಸರು ಸ್ಥಳ ಪರಿಶೀಲನೆ ನೆಡೆಸಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
;Resize=(128,128))
;Resize=(128,128))
;Resize=(128,128))